
ಬೆಳಗಾವಿ: ಕಳೆದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ಪೊಲೀಸರ ತಪ್ಪು ಕಾಣುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಮಿಷನರ್ ಅಥವಾ ಅವರ ಕೆಳಗಿನ ಅಧಿಕಾರಿಗಳು ಕಾರ್ಯಕ್ರಮಕ್ಕೆ ಯಾರು ಅನುಮತಿ ನೀಡಿದ್ದು, ಇಷ್ಟು ಮಂದಿ ಜನ ಸೇರುತ್ತಾರೆ ಎಂದು ಸರ್ಕಾರಕ್ಕೆ ಪೊಲೀಸರು ಮಾಹಿತಿ ನೀಡಬೇಕಿತ್ತು. ಒಂದು ಕಡೆ ನೋಡಿದರೇ, ಪೊಲೀಸರ ತಪ್ಪು ಕಾಣುತ್ತಿದೆ ಎಂದು ಹೇಳಿದರು.
ಒಂದು ದೃಷ್ಟಿಕೋನದಿಂದ, ಪೊಲೀಸರಿಂದ ತಪ್ಪಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸ್ಟೇಡಿಯಂಗೆ ಹೋಗುವ ಮುಂಚೆ ಸಾವುಗಳು ಸಂಭವಿಸಿದ್ದರೆ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ಹೇಳಬೇಕಾದದ್ದು ಪೊಲೀಸರ ಕರ್ತವ್ಯ ಹಾಗೂ ಜವಾಬ್ದಾರಿ. ಮುಖ್ಯಮಂತ್ರಿಗಳಿಗೆ ಮುಂಚೆಯೇ ಹೇಳಬೇಕಿತ್ತು. ಕಮಿಷನರ್ ಆಫೀಸ್ ಅಥವಾ ಕೆಳಗಿನ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ದರಾ? ಬೇಡ ಎಂದರೂ ಏಕೆ ಹೋದರು? ಹೀಗೆ ಸಾಕಷ್ಟು ಗೊಂದಲಗಳಿವೆ, ಸಿಐಡಿ ತನಿಖೆ ಮಾಡುತ್ತಾರೆ. ವರದಿ ಬಳಿಕ ಸತ್ಯಾಂಶ ಹೊರಗೆ ಬರುತ್ತದೆ ಎಂದು ತಿಳಿಸಿದರು. .
Advertisement