
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಮಾಲ್ ಆಫ್ ಏಷ್ಯಾದ ಮುಂಭಾಗದಲ್ಲಿರುವ ಜಕ್ಕೂರು ಮೇಲ್ಸೇತುವೆಯಿಂದ ಬಿದ್ದುಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಮೃತ ಯುವಕನನ್ನು ಹೆಬ್ಬಾಳದ ಶಿವಶಂಕರ್ ಲೇಔಟ್ ನಿವಾಸಿ ಮುನಿರಾಜು (22) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 12:30ರ ಸುಮಾರಿಗೆ ಈ ಘಟನೆ ನಡೆದಿದೆ.
ತಾಯಿಗೆ ಸ್ನೇಹಿತರನ್ನು ಭೇಟಿಯಾಗಿ ಬರುತ್ತೇನೆಂದು ಹೇಳಿ ಹೊರಟಿದ್ದ ಯುವಕ, ಫ್ಲೈಓವರ್ ಮೇಲೆ ಬೈಕ್ ನಿಲ್ಲಿಸಿ ಬಳಿಕ ಮೇಲ್ಸೇತುವೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಪೊಲೀಸರು ಹೆದ್ದಾರಿಯ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದು, ಸಾವನ್ನಪ್ಪಿದ್ದು ಹೇಗೆ ಎಂದು ತನಿಖೆಯಿಂದ ಹೊರಬರಬೇಕಿದೆ. ಸದ್ಯ ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement