
ಬೆಂಗಳೂರು: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಪ್ರಕಱಣ ಸಂಬಂಧ ಆರ್‌ಟಿ ನಗರ ಪೊಲೀಸರು ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಶಾಲೆಯ ಕೌನ್ಸೆಲರ್ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ ಶಾಲೆಗೆ ಇತ್ತೀಚೆಗೆ ಆಪ್ತ ಸಮಾಲೋಚಕರು ಬಂದಿದ್ದರು. ಈ ವೇಳೆ ಕೌನ್ಸಿಲಿಂಗ್ ಮಾಡುವಾಗ ಬಾಲಕಿಯು ತನ್ನ ತಾಯಿ ತನ್ನ ಮೇಲೆ ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಬಗ್ಗೆ ಹೇಳಿಕೊಂಡಿದ್ದಳು. ಮದುವೆ ಬಳಿಕ ಗಂಡನ ಜೊತೆ ಹೇಗಿರಬೇಕೆಂದು ಹೇಳಿ ತನ್ನ ಅಂಗಾಂಗಗಳನ್ನು ತಾಯಿ ಮುಟ್ಟುತ್ತಿರುವುದಾಗಿ ನೋವು ತೋಡಿಕೊಂಡಿದ್ದಳು. ಈ ವಿಷಯ ಅರಿತ ಸಮಾಲೋಚಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ ಬಾಲಕಿ ತಾಯಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಬಾಲಕಿಯು ತಾಯಿ ಹಾಗೂ ಅಕ್ಕನೊಂದಿಗೆ ವಾಸವಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ತಂದೆ ಕುಟುಂಬದಿಂದ ದೂರವಾಗಿದ್ದರು. ಆರೋಪಿತ ಮಹಿಳೆ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಸಮಾಲೋಚಕರು ಇಬ್ಬರುೂ ಮಕ್ಕಳನ್ನೂ ಕೌನ್ಸಿಲಿಂಗ್ ನಡೆಸಿದ್ದು, ಒಬ್ಬರ ಮುಂದೆ ಬಾಲಕಿಯು ತಾಯಿ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ನಿರಾಕರಿಸಿದರೆ, ಇನ್ನೊಬ್ಬರ ಮುಂದೆ ತನಗೆ ಹಲ್ಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ.
ಇದು ಪೊಲೀಸರಿಗೆ ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಬಾಲಕಿಯನ್ನು ಹೆಚ್ಚಿನ ಕೌನ್ಸಿಲಿಂಗ್ಗೆ ಒಳಪಡಿಸಿ ಅಂತಿಮ ಹೇಳಿಕೆ ನೀಡಲು ಸಮಯಾವಕಾಶ ನೀಡಲಾಗಿದೆ.
ಈ ಸಂಬಂಧ ಸದ್ಯ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ಒಂದು ವೇಳೆ ಹಲ್ಲೆ ಎಂದು ಹೇಳಿಕೆ ನೀಡಿದರೆ ಹಲ್ಲೆ ಪ್ರಕರಣವನ್ನಾಗಿ ಪರಿವರ್ತಿಸಿ ಕಾನೂನು ಪ್ರಕಾರ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement