ಆಸ್ತಿ ತೆರಿಗೆ ಬಾಕಿ: ರಾಜಭವನ-ವಿಧಾನಸೌಧ ಸೇರಿ 250ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳಿಗೆ BBMP ನೋಟಿಸ್‌

ಆಸ್ತಿ ತೆರಿಗೆ ಪಾವತಿಸುವಂತೆ ಪಾಲಿಕೆಯು ರಾಜ್ಯ ಪ್ರಮುಖ ವಿದ್ಯುತ್ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಮತ್ತು ರಾಜಭವನ ಸೇರಿದಂತೆ 250 ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ನಾಗರೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಸರ್ಕಾರಿ ಸಂಸ್ಥೆಗಳಿಗೂ ವಿರುದ್ಧ ಕೂಡ ಕ್ರಮಕ್ಕೆ ಮುಂದಾಗಿದ್ದು, ಅಚ್ಚರಿ ಮೂಡಿಸಿದೆ.

ಆಸ್ತಿ ತೆರಿಗೆ ಪಾವತಿಸುವಂತೆ ಪಾಲಿಕೆಯು ರಾಜ್ಯ ಪ್ರಮುಖ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಮತ್ತು ರಾಜಭವನ ಸೇರಿದಂತೆ 250 ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಿದೆ.

ಖಾಸಗಿ ಆಸ್ತಿಗಳಿಗೆ ಇರುವಂತೆಯೇ ಸರ್ಕಾರಿ ಕಚೇರಿಗಳಿಗೂ ಆಸ್ತಿ ತೆರಿಗೆ ನೋಟಿಸ್‌ಗಳನ್ನು ನೀಡಲಾಗುತ್ತಿದೆ, ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಬಾಕಿ ತೆರಿಗೆ ಮುಂದುವರೆಯುತ್ತಲೇ ಬಂದಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಸರ್ಕಾರಿ ಕಚೇರಿಗಳಿಂದ ಬಾಕಿ ಇರುವ ಒಟ್ಟು ಆಸ್ತಿ ತೆರಿಗೆ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ, ತೆರಿಗೆಗಳು ವರ್ಷಗಳಿಂದ ಪಾವತಿಸದೆ ಇರುವುದರಿಂದ ಮೊತ್ತವು ಕೋಟಿಗಳಷ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಂಗ್ರಹ ಚಿತ್ರ
ಆಸ್ತಿ ತೆರಿಗೆ ಕಟ್ಟಲು ನಿವಾಸಿಗಳ ನಿರಾಕರಣೆ: ಸ್ವಂತ ಖರ್ಚಿನಲ್ಲಿ ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು!

ಬಾಕಿ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಮತ್ತು ದಂಡವನ್ನು ಶೇ.50 ರಷ್ಟು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡುವ ಒಂದು ಬಾರಿ ಇತ್ಯರ್ಥ (ವನ್ ಟೈಂ ಸೆಟಲ್​ಮೆಂಟ್) ಯೋಜನೆಯು ಸರ್ಕಾರಿ ಕಚೇರಿಗಳಿಗೂ ಮುಕ್ತವಾಗಿತ್ತು. ಆದಾಗ್ಯೂ, ಇದರ ಪ್ರಯೋಜನವನ್ನು ಪಡೆಯಲಿಲ್ಲ ಮತ್ತು ಒನ್ ಟೈಂ ಸೆಟಲ್​ಮೆಂಟ್ ಯೋಜನೆಯು ಈಗ ಕೊನೆಗೊಂಡಿದೆ.

ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸುವಂತೆ ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಜ್ಞಾಪನೆ ಪತ್ರಗಳನ್ನು ಕಳುಹಿಸಲಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪಾಲಿಕೆಯು ಎಂಟು ವಲಯಗಳಲ್ಲಿ ಹೆಚ್ಚಿನ ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಿರಾಸ್ತಿಯ ಹರಾಜಿನ ಮೂಲಕ (ವಸತಿ ಮತ್ತು ವಸತಿಯೇತರ ಆಸ್ತಿಗಳು) ತೆರಿಗೆ ಬಾಕಿ ವಸೂಲಿಗೆ ಖಾಸಗಿ ಆಸ್ತಿ ಮಾಲೀಕರ ವಿರುದ್ಧ ಬಿಬಿಎಂಪಿ ಈಗಾಗಲೇ ಕ್ರಮಕ್ಕೆ ಮುಂದಾಗಿದೆ. ಆದರೆ, ಸರ್ಕಾರಿ ಕಚೇರಿಗಳ ವಿರುದ್ಧ ಇನ್ನೂ ಅಂತಹ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈವರೆಗೆ ಅಧಿಕೃತ ಹೇಳಿಕೆಯನ್ನಾಗಲೀ ಪ್ರತಿಕ್ರಿಯೆಯನ್ನಾಗಲೀ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com