Indian Army ಅಲ್ಲ.. ಕೋಲಾರದ ರೈತರಿಂದಲೂ ಪಾಕಿಸ್ತಾನ ಮೇಲೆ surgical strike; ಟೊಮ್ಯಾಟೊ ರಫ್ತು ಬಂದ್!

ಉಗ್ರದಾಳಿಯ ರೂವಾರಿಯಾಗಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಕೋಲಾರ ರೈತರು, ತಮ್ಮ ಟೊಮೆಟೊವನ್ನು ಪಾಕಿಸ್ತಾನಕ್ಕೆ (Pakistan) ರಪ್ತು ಮಾಡುವುದನ್ನು ನಿಲ್ಲಿಸಿದ್ದಾರೆ.
Kolar farmers and traders to stop tomato export to Pakistan
ಪಾಕಿಸ್ತಾನಕ್ಕೆ ಟೊಮಾಟೋ ರಫ್ತು
Updated on

ಕೋಲಾರ: ಪಹಲ್ಗಾಮ್ ದಾಳಿ ಬಳಿಕ ಭಾರತೀಯ ಸೇನಾ ದಾಳಿ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ನಮ್ಮ ಕೋಲಾರದ ರೈತರೂ ಕೂಡ ಶಾಕ್ ನೀಡಿದ್ದು, ಇಷ್ಟು ದಿನ ಪಾಕಿಸ್ತಾನಕ್ಕೆ ರವಾನೆಯಾಗುತ್ತಿದ್ದ ಅಪಾರ ಪ್ರಮಾಣದ ಟೊಮ್ಯಾಟೊ ಬಂದ್ ಆಗಿದೆ.

ಹೌದು.. ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಭಾರತ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಲವು ಸರಣಿ ಸಭೆಗಳನ್ನು ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಈಗಾಗಲೇ ಪಾಕಿಸ್ತಾನದ ವಿರುದ್ದ ಭಾರತ ಸಿಂಧೂನದಿ ನೀರು ಸ್ಥಗಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಉಭಯ ದೇಶಗಳ ನಡುವಿನ ಬಹುತೇಕ ಎಲ್ಲ ರೀತಿಯ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರ ಕೂಡ ರಾಜತಾಂತ್ರಿಕವಾಗಿ ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ. ಇದರಿಂದ ಔಷಧ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳಿಗಾಗಿ ಪಾಕಿಸ್ತಾನ ಪರದಾಡುತ್ತಿದೆ.

Kolar farmers and traders to stop tomato export to Pakistan
ಪ್ರಸ್ತುತ ಪಾಕ್ ವಿರೋಧಿ ಅಲೆ ಮಂಗಳೂರಿನಲ್ಲಿ ಗುಂಪು ಹತ್ಯೆಗೆ ಕಾರಣವಾಗಿರಬಹುದು: ಬಿಜೆಪಿ ಶಾಸಕ

ಪಾಕ್ ಮೇಲೆ ಕೋಲಾರ ರೈತರ surgical strike

ಇನ್ನು ಅತ್ತ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕ್ರಮಗಳಿಗೆ ಮುಂದಾಗುತ್ತಿದ್ದರೆ ಇದೀಗ ಕರ್ನಾಟಕದ ಕೋಲಾರದ ರೈತರೂ ಕೂಡ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕೋಲಾರದ ರೈತರು ಮತ್ತು ವರ್ತಕರು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಟೊಮ್ಯಾಟೊ ರಪ್ರು ಮೇಲೆ ಸಂಪೂರ್ಣ ನಿರ್ಬಂಧ ಹೇರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ.

ಉಗ್ರದಾಳಿಯ ರೂವಾರಿಯಾಗಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಕೋಲಾರ ರೈತರು, ತಮ್ಮ ಟೊಮೆಟೊವನ್ನು ಪಾಕಿಸ್ತಾನಕ್ಕೆ (Pakistan) ರಪ್ತು ಮಾಡುವುದನ್ನು ನಿಲ್ಲಿಸಿದ್ದಾರೆ. ಈ ಮೂಲಕ ಕೋಲಾರದ ರೈತರು ಸಹ ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿದ್ದಾರೆ.

ಕೋಲಾರದ ರೈತರು ಮತ್ತು ವರ್ತಕರು ಪಾಕಿಸ್ತಾನಕ್ಕೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಘೋಷಣೆ ಮಾಡಿದ್ದಾರೆ. ಕೋಲಾರದಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡುತ್ತಿದ್ದ ಟೊಮೆಟೊಗೆ ಸಂಪೂರ್ಣ ನಿರ್ಬಂಧವೇರಿದ್ದು,ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಟೊಮೆಟೊ ಸರಬರಾಜು ಮಾಡದಿರಲು ನಿರ್ಧಾರ ಮಾಡಿದ್ದಾರೆ.

ನಷ್ಟವಾದರೂ ಪರವಾಗಿಲ್ಲ.. ಪಾಕ್ ಗೆ ಟೊಮ್ಯಾಟೋ ಕಳುಹಿಸಲ್ಲ

ಕೋಲಾರದಿಂದ ಪಾಕಿಸ್ತಾನಕ್ಕೆ ವಾರ್ಷಿಕವಾಗಿ 800 ರಿಂದ 900 ಟನ್ ಟೊಮ್ಯಾಟೊವನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಪೆಹಲ್ಗಾಮ್​ ದಾಳಿ ಬೆನ್ನಲ್ಲೇ ವರ್ತಕರು ಇನ್ನು ಮುಂದೆ ಪಾಕಿಸ್ತಾನಕ್ಕೆ ಒಂದೇ ಒಂದು ಟೊಮೆಟೊವನ್ನು ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರತೀ ವರ್ಷ ಕೋಲಾರ ರೈತರು ಪಾಕಿಸ್ತಾನಕ್ಕೆ ಟೊಮ್ಯಾಟೋ ಮಾರಾಟ ಮಾಡಿ ಕೋಟ್ಯಾಂತರ ರೂ ಆದಾಯ ಗಳಿಸುತ್ತಿದ್ದರು. ಆದರೆ ಈಗ ತಮಗೆ ನಷ್ಟವಾದರೂ ಪರವಾಗಿಲ್ಲ.. ಪಾಕಿಸ್ತಾನಕ್ಕೆ ಮಾತ್ರ ನಾವು ಟೊಮ್ಯಾಟೋ ಕಳುಹಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೋಲಾರದಿಂದ ಪಾಕಿಸ್ತಾನಕ್ಕೆ ಟೊಮ್ಯಾಟೋ ಮಾತ್ರವಲ್ಲದೇ ಇತರೆ ತರಕಾರಿಗಳನ್ನೂ ಕೂಡ ರವಾನೆ ಮಾಡಲಾಗುತ್ತಿತ್ತು. ಇದೀಗ ಅದಕ್ಕೂ ಕತ್ತರಿ ಬಿದ್ದಿದೆ.

Kolar farmers and traders to stop tomato export to Pakistan
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ: ಪ್ರಧಾನಿ ಮೋದಿಗೆ ಗದಗದ 'ಸೈನಿಕರ ಗ್ರಾಮ' ಮನವಿ

ಏಷ್ಯಾಖಂಡದ 2ನೇ ಅತೀದೊಡ್ಡ ಟೊಮ್ಯಾಟೋ ಮಾರುಕಟ್ಟೆ

ಅಂದಹಾಗೆ ಕೋಲಾರದ ಎಪಿಎಂಸಿ ಮಾರುಕಟ್ಟೆ (Kolar APMC) ಇಡೀ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ (tomato Market) ಎನ್ನುವ ಹೆಗ್ಗಳಿಕೆ ಹೊಂದಿದೆ. ಅದೇ ಕಾರಣಕ್ಕೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಟೊಮೆಟೊ ದೇಶದ ಬಹುತೇಕ ರಾಜ್ಯಗಳಿಗೆ ಹಾಗೂ ಹೊರ ದೇಶಗಳಿಗೂ ರಫ್ತಾಗುತ್ತದೆ. ಇನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ಟೊಮ್ಯಾಟೊ ಸುಗ್ಗಿಯ ಕಾಲ. ಈ ಸಂದರ್ಭದಲ್ಲಿ ಕೋಲಾರದ ಟೊಮೆಟೊ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತದೆ. ಆದರೆ ಇದೀಗ ಪಾಕಿಸ್ತಾನಕ್ಕೆ ಕೋಲಾರದಿಂದ ಟೊಮ್ಯಾಟೋ ರಫ್ತಾಗುತ್ತಿಲ್ಲ... ಇದು ಪಾಕಿಸ್ತಾನಕ್ಕೆ ಭಾರತದಿಂದ ಮತ್ತೊಂದು ಆಘಾತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com