
ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆರಂಭವಾದಾಗಿನಿಂದ ಮೊದಲ ಬಾರಿಗೆ ದಾಖಲೆಯ ಲಾಭವನ್ನು ಗಳಿಸಿದೆ ಎಂದು ಬಿಐಎಎಲ್ ಮೂಲಗಳು ತಿಳಿಸಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (BIAL) ಮೇ 16ರಂದು ತನ್ನ ಮಂಡಳಿಯ ಸಭೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷೆ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆಸಿತು.
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್ಆರ್ ವಿಮಾನ ನಿಲ್ದಾಣ) ಆರಂಭವಾದಾಗಿನಿಂದ ಮೊದಲ ಬಾರಿಗೆ ದಾಖಲೆಯ ಲಾಭ ಗಳಿಸಿದ್ದು ಇದು ಐತಿಹಾಸಿಕ ಮೈಲಿಗಲ್ಲಾಗಿದೆ. ಇದು ದೃಢವಾದ ಆರ್ಥಿಕ ತಿರುವು ಮತ್ತು ವಿಮಾನ ನಿಲ್ದಾಣದ ಕಾರ್ಯತಂತ್ರದ ಬೆಳವಣಿಗೆ, ಸುಸ್ಥಿರತೆಯ ಉಪಕ್ರಮಗಳು ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ" ಎಂದು BIAL ಹೇಳಿಕೆಯಲ್ಲಿ ಸೇರಿಸಿದೆ.
ಬಲವಾದ ಆರ್ಥಿಕ ಕಾರ್ಯಕ್ಷಮತೆಯ ಜೊತೆಗೆ, ಬಿಎಲ್ಆರ್ ವಿಮಾನ ನಿಲ್ದಾಣವು 2025ರಲ್ಲಿ ಅನೇಕ ಪ್ರತಿಷ್ಠಿತ ಜಾಗತಿಕ ಮನ್ನಣೆಗಳನ್ನು ಗಳಿಸಿದೆ. ಇದು ವಿಶ್ವಾದ್ಯಂತ ಸುಸ್ಥಿರ ಮತ್ತು ಸುರಕ್ಷಿತ ವಿಮಾನ ನಿಲ್ದಾಣ ಕಾರ್ಯಾಚರಣೆಗಳಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ ಎಂದು ಅದು ಹೇಳಿದೆ. 2024ರ ಮೇ 5ರಿಂದ ಜಾರಿಗೆ ಬರುವಂತೆ ACI ಯ ವಿಮಾನ ನಿಲ್ದಾಣ ಕಾರ್ಬನ್ ಮಾನ್ಯತೆ ಕಾರ್ಯಕ್ರಮದ ಅಡಿಯಲ್ಲಿ ಲೆವೆಲ್ 5 ಮಾನ್ಯತೆಯನ್ನು ಸಾಧಿಸಿದ ಏಷ್ಯಾದ ಮೊದಲ ವಿಮಾನ ನಿಲ್ದಾಣ BLR ವಿಮಾನ ನಿಲ್ದಾಣವಾಗಿದೆ.
Advertisement