
ಹಾಸನ: ಮೂರು ತಿಂಗಳ ಹಿಂದೆ ನಿಶ್ಚಯವಾಗಿ ಇಂದು ನಡೆಯಬೇಕಿದ್ದ ಮದುವೆಯನ್ನು ತಾಳಿ ಕಟ್ಟುವ ವೇಳೆ ಮದುವೆ ಮುರಿದುಕೊಂಡಿದ್ದ ವಧುವಿಗೆ ಆಕೆಯ ಪ್ರಿಯಕರನ ಜೊತೆಯೇ ಮಾಡುವೆ ಮಾಡಿಸಲಾಗಿದೆ. ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ಶುಭ ಮುಹೂರ್ತದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಇಷ್ಟ ಇಲ್ಲ ಅಂತ ಹೇಳಿದ್ದರಿಂದ ಮದುವೆ ಮುರಿದುಬಿದ್ದಿತ್ತು. ಆನಂತರ ವಧು ತಾನು ಪ್ರೀತಿಸುತ್ತಿದ್ದ ಯುವಕನಿಗಾಗಿ ಮದುವೆ ಆಗಲು ನಿರಾಕರಿಸಿದ್ದ ವಿಚಾರ ತಿಳಿದ ಪೋಷಕರು ಇದೀಗ ತಮ್ಮ ಮಗಳ ಇಷ್ಟದಂತೆ ಪ್ರಿಯಕರ ರಘು ಜೊತೆ ಪಲ್ಲವಿಯ ಮದುವೆಯನ್ನು ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿಸಿದ್ದಾರೆ.
Advertisement