

ಬೆಂಗಳೂರು: ಎಷ್ಟು ದಿನ ಅಂತ ಟೈಂಪಾಸ್ ಲವ್ ಮಾಡುವುದು. ಇಲ್ಲ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರಿಯತಮೆಗೆ ಪ್ರಿಯಕರ 8ಕ್ಕೂ ಹೆಚ್ಚು ಬಾರಿ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಳ್ಳಣ್ಣ ಗಾರ್ಡನ್ ನಲ್ಲಿ ಘಟನೆ ನಡೆದಿದೆ. ಕಳೆದ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗಿ ಪತ್ನಿ ಜೊತೆ ವಾಸವಾಗಿದ್ದ ಅಂಬೇಡ್ಕರ್ ಅಲಿಯಾಸ್ ಕುಟ್ಟಿಗೆ ತನ್ನದೇ ಏರಿಯಾದಲ್ಲಿದ್ದ ಗಂಡನಿಂದ ದೂರವಾಗಿದ್ದ ರೇಣುಕಾ ಎಂಬಾಕೆಯ ಮೇಲೆ ಪ್ರೇಮ ಬೆಳೆದಿತ್ತು.
ಹೀಗೆ ಎಷ್ಟು ದಿನ ಅಂತ ಟೈಂಪಾಸ್ ಲವ್ ಮಾಡಿಕೊಂಡಿರುವುದು. ನನ್ನನ್ನು ಮದುವೆಯಾಗು ಎಂದ ರೇಣುಕಾ ಒತ್ತಾಯಿಸಿದ್ದಳು. ಇದರಿಂದ ಆಕ್ರೋಶಗೊಂಡ ಅಂಬೇಡ್ಕರ್ ಅ. 31ರಂದು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ರೇಣುಕಾಳಿಗೆ ಮಾತನಾಡುವುದಿದೆ ಎಂದು ಹೇಳಿ ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆಯ ಬಳಿ ಕರೆದೊಯ್ದು ಎಂಟು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಕೊಲೆ ಪ್ರಕರಣ ಸಂಬಂಧ ಆರೋಪಿ ಅಂಬೇಡ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement