

ಬೆಂಗಳೂರು: ರಾಜ್ಯೋತ್ಸವ ಅಂದರೆ ಭಾಷಾಭಿಮಾನ ಅಲ್ಲ. ಭಾಷೆ ಎಂದರೆ ಕೇವಲ ಧ್ವನಿ ಅಷ್ಟೇ. ಕನ್ನಡದ ಭಾಷೆಯ ಭಾವ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ನಂಬಿಕೆ. ಇದು ಕುವೆಂಪು ಅವರ ವಿಶ್ವ ಮಾನವ ಸಂದೇಶ. ಎಲ್ಲ ಧರ್ಮದವರನ್ನು ಅಪ್ಪಿಕೊಂಡು ಬದುಕು ನಡೆಸುವುದೇ ರಾಜ್ಯೋತ್ಸವ. ಕನ್ನಡಿಗ ತನ್ನ ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ ಇಟ್ಟುಕೊಳ್ಳುವುದು ಅಹಂಕಾರ ಅಲ್ಲ. ಕನ್ನಡಕ್ಕೆ, ಕರ್ನಾಟಕಕ್ಕೆ ಇರುವ ವೈಶಿಷ್ಟ್ಯತೆಯನ್ನು ಸಂಭ್ರಮಿಸುವುದಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಶನಿವಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಎಲ್ಲ ಸಾಧಕರ ಪರವಾಗಿ ಪ್ರಕಾಶ್ ರಾಜ್ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವವು ಕೇವಲ ಭಾಷಾ ಹೆಮ್ಮೆಯ ಬಗ್ಗೆ ಅಲ್ಲ. ಕೇವಲ ಭಾಷೆಯ ಬಗ್ಗೆಯೂ ಅಲ್ಲ. ಕೆಲವೊಮ್ಮೆ ನಾವು ಭಾಷಾ ಹೆಮ್ಮೆಯ ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಕನ್ನಡವನ್ನು ಮಾತ್ರ ಮಾತನಾಡುವುದು ಕನ್ನಡ ಹೆಮ್ಮೆಯಲ್ಲ. ಅದರ ಗರ್ಭದೊಳಗೆ ಏನಿದೆ, ಅದು ಯಾವ ಭಾವನೆಯನ್ನು ಹೊಂದಿದೆ. ಅದು ಮುಖ್ಯ ಸಾರವಾಗಿದೆ ಎಂದು ಹೇಳಿದರು.
ಕನ್ನಡಿಗನಾಗಿರುವ ಭಾವನೆ ಎಂದರೆ ಬಸವಣ್ಣನವರ 'ಸರ್ವ ಜನಾಂಗಧ ಶಾಂತಿಯ ತೋಟ' (ಎಲ್ಲಾ ಮಾನವಕುಲಕ್ಕೆ ಶಾಂತಿಯ ಉದ್ಯಾನ) ಕಲ್ಪನೆ ಮತ್ತು ಕುವೆಂಪು ಅವರ 'ವಿಶ್ವಮಾನವ' - ಸಾರ್ವತ್ರಿಕ ಮಾನವನ ಸಂದೇಶದ ಮೇಲಿನ ನಂಬಿಕೆಯಾಗಿದೆ. ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾವೆಲ್ಲರೂ ವಿಶ್ವ ಮಾನವರಾಗಬೇಕು. ವಿಶ್ವಮಾನವ ಸಂದೇಶವನ್ನು ಸಂಭ್ರಮಿಸುವುದೇ ಕನ್ನಡವನ್ನು ಸಂಭ್ರಮಿಸುವುದಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ಮತ್ತೊಬ್ಬ ಕವಿ ಎಚ್.ಎಲ್. ಪುಷ್ಪಾ ಅವರು ಮಾತನಾಡಿ, ರಾಜ್ಯ ಸರ್ಕಾರವು ಅಂಚಿನಲ್ಲಿರುವ ಮತ್ತು ಕಡೆಗಣಿಸಲ್ಪಟ್ಟ ಸಮುದಾಯಗಳ ಜನರನ್ನು ಗುರುತಿಸಿರುವುದು ಹರ್ಷದಾಯಕವಾಗಿದೆ. ಈ ವರ್ಷ 13 ಪ್ರಶಸ್ತಿ ಪುರಸ್ಕೃತರಿದ್ದಾರೆ, ಮುಂಬರುವ ವರ್ಷಗಳಲ್ಲಿ ವಿವಿಧ ಹಂತಗಳ ಮಹಿಳಾ ಸಾಧಕರನ್ನು ಗುರುತಿಸಲಾಗುವುದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ನಡುವೆ 70 ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಪ್ರಶಸ್ತಿಗೆ ಯಾರ ಹೆಸರನ್ನು ಶಿಫಾರಸು ಮಾಡಿಲ್ಲ. ಆಯ್ಕೆ ಸಮಿತಿಯ ನಿರ್ಧಾರದ ಆಧಾರದ ಮೇಲೆ ಮಾತ್ರ ಅಂತಿಮ ಆಯ್ಕೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ರಚನೆಯಾಗಿ 70 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 70 ಸಾಧಕರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದವರನ್ನು ಮಾತ್ರ ಪರಿಗಣಿಸುವ ಬದಲು, ಆಯಾ ಕ್ಷೇತ್ರಗಳಲ್ಲಿನ ತಜ್ಞರು ಮತ್ತು ಸಾಧಕರನ್ನು ಗುರುತಿಸಿ ಗೌರವಿಸಬೇಕು ಎಂಬುದು ನಮ್ಮ ನಿರ್ಧಾರವಾಗಿತ್ತು ಎಂದು ತಿಳಿಸಿದರು.
Advertisement