ಬೆಂಗಳೂರು: ಕಸ ಸುಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು BSWML ಮುಂದು..!

ಬೇರ್ಪಡಿಸಿದ ನಂತರ ಕಸವನ್ನು ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಅದನ್ನು ಸುಟ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ, ಜನರು ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುಟ್ಟರೆ ಅದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಕಸಕ್ಕೆ ಬೆಂಕಿ ಹಾಕುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಮುಂದಾಗಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಅವರು ಮಾತನಾಡಿ, ಇನ್ನು ಮುಂದೆ ಎಂಜಿನಿಯರ್‌ಗಳು, ಮಾರ್ಷಲ್‌ಗಳು ಮತ್ತು ಜೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್‌ಗಳಿಗೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಸಂಸ್ಥೆ ಅಧಿಕಾರ ನೀಡುತ್ತದೆ ಎಂದು ಹೇಳಿದ್ದಾರೆ.

ಬೇರ್ಪಡಿಸಿದ ನಂತರ ಕಸವನ್ನು ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಅದನ್ನು ಸುಟ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ, ಜನರು ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುಟ್ಟರೆ ಅದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಕಸವನ್ನು ಸುಡುವ ವೀಡಿಯೊಗಳನ್ನು ಹಂಚಿಕೊಳ್ಳಲುವಂತೆ ಜನರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಪುರಾವೆಗಳ ಆಧಾರದ ಮೇಲೆ ನಿಮಯ ಉಲ್ಲಂಘಿಸುವವರ ವಿರುದ್ಧ ಘನತ್ಯಾಜ್ಯ ನಿರ್ವಹಣಾ (SWM) ನಿಯಮಗಳು, 2016 ಪರಿಸರ ಸಂರಕ್ಷಣಾ ಕಾಯ್ದೆ, ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 1981 ರ ಸೆಕ್ಷನ್ 19 (5) ಮತ್ತು ಇತರ ಸಂಬಂಧಿತ ಕಾಯ್ದೆಗಳು ಮತ್ತು ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಶನಿವಾರ ಬಿಎಸ್‌ಡಬ್ಲ್ಯೂಎಂಎಲ್ ತಂಡವು ಕೆಲವು ಮಾರ್ಷಲ್‌ಗಳೊಂದಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಭಾರತ್ ನಗರದಲ್ಲಿ ಕಸವನ್ನು ಸುಟ್ಟಿದ್ದಕ್ಕಾಗಿ ನಿವಾಸಿಯನ್ನು ಹಿಡಿದು 10,000 ರೂ.ಗಳ ದಂಡ ವಿಧಿಸಿದೆ.

File photo
ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ 613 ಕೋಟಿ ರೂ. ಬಾಡಿಗೆ; ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಹೀಗಿವೆ

ಈ ನಿಬಂಧನೆಗಳು ಮತ್ತು ನಿಯಮಗಳು ಈಗಾಗಲೇ ಇವೆ, ಆದರೆ ಪುರಸಭೆ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. ಈಗ, ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ, ಜಿಬಿಎ ಮಿತಿಗಳಲ್ಲಿ ಕಸ ನಿರ್ವಹಣೆಯ ಹಕ್ಕನ್ನು ನಿಗದಿಪಡಿಸಲು, ಶಿಸ್ತುಬದ್ಧಗೊಳಿಸುವ ಸ್ವಾತಂತ್ರ್ಯವನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸುವವರಿಗೆ ಪರಿಸರ ಸಂರಕ್ಷಣಾ ಕಾಯ್ದೆ, 1986 ರ ಅಡಿಯಲ್ಲಿ 1 ಲಕ್ಷ ರೂ.ಗಳ ದಂಡ ಅಥವಾ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ, ಇದನ್ನು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಜೀವಿಸುವ ಹಕ್ಕಿನ ಭಾಗವೆಂದು ಗುರುತಿಸಲಾಗಿದೆ ಎಂದು ಹಿರಿಯ ಪರಿಸರ ಎಂಜಿನಿಯರ್ ಹೇಳಿದ್ದಾರೆ.

ತ್ಯಾಜ್ಯ ಆಯುವವರನ್ನು ಸಬಲೀಕರಣಗೊಳಿಸಲು ಮತ್ತು ವಿಂಗಡಣೆ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿರುವ ಹರಿಸು ದಲಾ ಎಂಬ ಸರ್ಕಾರೇತರ ಸಂಸ್ಥೆಯ ನಳಿನಿ ಶೇಖರ್ ಅವರು ಮಾತನಾಡಿ, 2011 ರಿಂದ 2014 ರವರೆಗೆ ನಿರಂತರ ಅಭಿಯಾನವನ್ನು ನಡೆಸಿದ್ದರಿಂದ ಕಸ ಸುಡುವುದು ತೀವ್ರವಾಗಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಘನತ್ಯಾಜ್ಯವನ್ನು ಕೆಲವು ಸ್ಥಳಗಳಲ್ಲಿ ಸುಡಲಾಗುತ್ತಿದೆ. ಈ ನಿಟ್ಟಿನಲ್ಲಿ ಗಂಭೀರ ಕ್ರಮ ತೆಗೆದುಕೊಂಡರೆ, ಅದು ಕಡಿಮೆಯಾಗುತ್ತದೆ. ಮೊದಲಿಗೆ, ಕಸ ಸುಡುವ ಜನರ ವಿರುದ್ಧ ಭಾರಿ ದಂಡ ವಿಧಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com