

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡಾಟ ಮಿತಿ ಮೀರಿದೆ. ಇಷ್ಟು ದಿನ ಸಣ್ಣ-ಪುಟ್ಟ ಗಲ್ಲಿ, ರಸ್ತೆಗಳಲ್ಲಿ ನಡೆಯುತ್ತಿದ್ದ ಯುವಕರ ಹೊಡೆದಾಟ ಇದೀಗ ವಿಧಾನಸೌಧಧ ಆವರಣಕ್ಕೂ ಕಾಲಿಟ್ಟಿದೆ.
ವಿಧಾನಸೌಧ ಮುಂದೆ ಯುವಕರ ಗುಂಪೊಂದು ಹೊಡೆದಾಟ ನಡೆಸಿದ್ದು, ಗಲಾಟೆ, ಹಲ್ಲೆ ನೋಡಿ ಸ್ಥಳದಲ್ಲಿದ್ದ ಜನರು ಆತಂಕಗೊಂಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಭಾನುವಾರ ನಡೆದಿದೆ ಏನ್ನಲಾಗುತ್ತಿದ್ದು, ನೇಪಾಳಿ ಯುವಕರ ಗುಂಪು ಹೊಡೆದಾಟ ನಡೆಸಿದೆ ಎಂದು ಹೇಳಲಾಗುತ್ತಿದೆ.
ಹೊಡೆದಾಟದ ವೇಳೆ ಯುವಕರ ಗುಂಪು ಹೆಲ್ಮೆಟ್ ಸೇರಿದಂತೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಯುವಕರಿಗೆ ಲಾಟಿ ರುಚಿ ತೋರಿಸಿ, ಯುವಕರು ಕಾಲ್ಕಿತ್ತುವಂತೆ ಮಾಡಿದ್ದಾರೆ.
ಈ ನಡುವೆ ಗಲಾಟೆಗೆ ಕಾರಣ ಏನು? ಸ್ಥಳದಲ್ಲಿದ್ದ ಯುವಕರು ಯಾರು? ಎಲ್ಲಿಂದ ಬಂದಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭದ್ರತೆ ಕುರಿತು ಟೀಕೆಗಳು ವ್ಯಕ್ತವಾಗತೊಡಗಿವೆ.
Advertisement