

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿತ್ಯ ಕ್ಯಾಬ್ ಚಾಲಕರು ಮತ್ತು ಆಟೋ ಚಾಲಕರ ಕುರಿತ ಸುದ್ದಿಗಳು ಹರಿದಾಡುತ್ತಲೇ ಇರುತ್ತವೇ.. ಈ ಪಟ್ಟಿಗೆ ಇದೀಗ ಮತ್ತೊಂದು ಸುದ್ದಿ ಸೇರ್ಪಡೆಯಾಗಿದೆ.
ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗಾಗಿ ತಮ್ಮದೇ ಆದ ರೂಲ್ಸ್ ಜಾರಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದಾರೆ. ತನ್ನ ರೂಲ್ಸ್ ಗಳನ್ನು ಪ್ರಿಂಟ್ ಮಾಡಿ ಇದನ್ನು ತಮ್ಮ ಕ್ಯಾಬ್ ನಲ್ಲಿ ಅಂಟಿಸಿದ್ದಾರೆ.
ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ಕ್ಯಾಬ್‌ವೊಂದರಲ್ಲಿ ಪ್ರಯಾಣಿಕರಿಗಾಗಿ ಆರು ನಿಯಮಗಳನ್ನು ಒಳಗೊಂಡಿರುವ ಕುತೂಹಲಕಾರಿ ಸೈನ್‌ಬೋರ್ಡ್ ಕಂಡುಬಂದಿದೆ.
ಪ್ರಯಾಣಿಕರೊಬ್ಬರು ಕ್ಯಾಬ್‌ನ ಡ್ರೈವರ್ ಸೀಟ್ ಹಿಂದೆ ಅಂಟಿಸಿರುವ ಪೋಸ್ಟರ್ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ.
ಇಷ್ಟಕ್ಕೂ ಚಾರ್ಟ್ ನಲ್ಲಿರುವ ನಿಯಮಗಳೇನು?
ಕ್ಯಾಬ್ ಚಾಲಕ ಕಾರಿನಲ್ಲಿ ಅಂಟಿಸಿರುವ ಚಾರ್ಟ್ ನಲ್ಲಿ ಒಟ್ಟು 7 ನಿಯಮಗಳಿದ್ದು, ನಿಯಮಗಳನ್ನು ಪಾಲಿಸುವಂತೆ ಖಡಕ್ ಆಗಿ ಸೂಚಿಸಲಾಗಿದೆ. ಈ 7 ನಿಯಮಗಳ ಪಟ್ಟಿ ಇಂತಿದೆ.
ನೀವು ಕ್ಯಾಬ್‌ನ ಮಾಲೀಕರಲ್ಲ
ಕ್ಯಾಬ್ ಚಾಲನೆ ಮಾಡುವ ವ್ಯಕ್ತಿಯೇ ಕ್ಯಾಬ್‌ನ ಮಾಲೀಕ
ಸಭ್ಯವಾಗಿ ಮಾತನಾಡಿ ಮತ್ತು ಗೌರವದಿಂದ ನಡೆದುಕೊಳ್ಳಿ
ನಿಧಾನವಾಗಿ ಕ್ಯಾಬ್ ಬಾಗಿಲನ್ನು ಮುಚ್ಚಿ
ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ದಯವಿಟ್ಟು ಅದನ್ನು ನಮಗೆ ತೋರಿಸಬೇಡಿ ಏಕೆಂದರೆ ನೀವು ನಮಗೆ ಹೆಚ್ಚು ಹಣ ನೀಡುತ್ತಿಲ್ಲ
ನನ್ನನ್ನು ಭಯ್ಯಾ ಅಂತ ಕರೆಯಬೇಡಿ.
ವೇಗವಾಗಿ ಓಡಿಸು ಎಂದು ಹೇಳಬೇಡಿ.
ಎಂದು ಕ್ಯಾಬ್ ಚಾಲಕ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.
ಕಾರು ಚಾಲಕನ ನಿಯಮಗಳನ್ನು ಈ ಪೋಸ್ಟ್ ಮಾಡಿರುವ ಪ್ರಯಾಣಿಕ ಕೂಡ ಬೆಂಬಲಿಸಿದ್ದು, ನಾನು ಈ ಪೋಸ್ಟ್ನ್ನು ಬೆಂಬಲಿಸುತ್ತೇನೆ. ಕೆಲವು ಪ್ರಯಾಣಿಕರು ಕ್ಯಾಬ್ಗಳನ್ನು ತಮ್ಮ ಸ್ವಂತದ್ದು ಎಂಬಂತೆ ವರ್ತಿಸುತ್ತಾರೆ. ಇದು ಕಠಿಣವಾಗಿದ್ದರು, ಪ್ರಾಮಾಣಿಕವಾಗಿದೆ ಎಂದು ಹೇಳಿದ್ದಾರೆ.
Advertisement