Bengaluru: 'ಫುಲ್ ಮಾರ್ಕ್ಸ್ ಕೊಡ್ತೇನೆ..'; ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, 45ರ ಪ್ರಾಧ್ಯಾಪಕನ ಬಂಧನ, ಬಿಡುಗಡೆ

ಸೆಪ್ಟೆಂಬರ್ 25 ರಂದು ಊಟದ ನೆಪದಲ್ಲಿ ಆರೋಪಿ ಪ್ರಾಧ್ಯಾಪಕ ತನ್ನನ್ನು ಮನೆಗೆ ಆಹ್ವಾನಿಸಿದ್ದಾಗಿ ವಿದ್ಯಾರ್ಥಿನಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
File photo
ಲೈಂಗಿಕ ಕಿರುಕುಳ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಬೆಂಗಳೂರಿನ ಖಾಸಗಿ ಕಾಲೇಜಿನ ವಿಭಾಗದ ಮುಖ್ಯಸ್ಥರೊಬ್ಬರು (ಎಚ್‌ಒಡಿ) ವಿದ್ಯಾರ್ಥಿನಿಯನ್ನು ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಬಂಧನಕ್ಕೀಡಾಗಿದ್ದಾರೆ.

ಹೌದು.. ಕಳೆದ ತಿಂಗಳು ತನ್ನ ನಿವಾಸದಲ್ಲಿ 19 ವರ್ಷದ ಪದವಿಪೂರ್ವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ವಿಶ್ವವಿದ್ಯಾಲಯವೊಂದರ 45 ವರ್ಷದ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸೆಪ್ಟೆಂಬರ್ 25 ರಂದು ಊಟದ ನೆಪದಲ್ಲಿ ಆರೋಪಿ ಪ್ರಾಧ್ಯಾಪಕ ತನ್ನನ್ನು ಮನೆಗೆ ಆಹ್ವಾನಿಸಿದ್ದಾಗಿ ವಿದ್ಯಾರ್ಥಿನಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಸಂತ್ರಸ್ತೆ ತಿಲಕ್​ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ, ಆರೋಪಿ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ತಿಲಕ್​ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

File photo
ಚಿಕ್ಕಬಳ್ಳಾಪುರ: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಮಹಿಳೆಯರ ಸ್ನಾನ, Video ವೈರಲ್!

ಕಡಿಮೆ ಹಾಜರಾತಿ ನೆಪ

ವಿದ್ಯಾರ್ಥಿನಿಗೆ ಕಡಿಮೆ ಹಾಜರಾತಿ ಇದ್ದುದನ್ನೇ ಮುಂದಿಟ್ಟುಕೊಂಡು, ಪೂರ್ಣ ಅಂಕ ನೀಡುವ ಆಮಿಷವೊಡ್ಡಿ ಉಪನ್ಯಾಸಕ ಸಂಜೀವ್ ಕುಮಾರ್ ಮಂಡಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ಥೆ ಆರೋಪಿಸಿದ್ದಾರೆ.

ಮನೆಗೆ ಊಟಕ್ಕೆ ಕರೆದ ಎಚ್​​ಒಡಿ

ಆರೋಪಿ ಸಂಜೀವ್ ಕುಮಾರ್ ಮಂಡಲ್ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬಿಸಿಎ) ವಿದ್ಯಾರ್ಥಿನಿಯನ್ನು ಅಕ್ಟೋಬರ್ 2 ರಂದು ತನ್ನ ಮನೆಗೆ ಕರೆಸಿಕೊಂಡಿದ್ದಾರೆ. ತನ್ನ ಕುಟುಂಬದೊಂದಿಗೆ ಜತೆಯಾಗಿ ಊಟ ಮಾಡೋಣ ಎಂದು ವಿದ್ಯಾರ್ಥಿನಿಯನ್ನು ಕರೆಸಿಕೊಂಡಿದ್ದಾರೆ. ಆರಂಭದಲ್ಲಿ ಆಕೆ ನಿರಾಕರಿಸಿದರೂ, ಪ್ರಾಧ್ಯಾಪಕ ಒತ್ತಾಯಿಸುತ್ತಲೇ ಇದ್ದರು.

ತನ್ನ ಪತ್ನಿ ಮತ್ತು ಮಕ್ಕಳು ಮನೆಯಲ್ಲಿರುತ್ತಾರೆ ಎಂದು ಭರವಸೆ ನೀಡಿದ್ದ. ಆದರೆ, ವಿದ್ಯಾರ್ಥಿನಿ ಅವರ ಮನೆಗೆ ತೆರಳಿದಾಗ ಮೊಂಡಲ್ ಒಬ್ಬಂಟಿಯಾಗಿ ಮನೆಯಲ್ಲಿದ್ದರು. ಆ ಬಳಿಕ ಅವರು ವಿದ್ಯಾರ್ಥಿನಿಗೆ ಉಟ ನೀಡಿದ್ದಾರೆ. ಆದರೆ, ಮೊಂಡಲ್ ಒಬ್ಬರೇ ಇದ್ದುದರಿಂದ ಇರಿಸುಮುರಿಸಿಗೆ ಒಳಗಾದ ವಿದ್ಯಾರ್ಥಿನಿ ತಾನು ಹೊರಡುವುದಾಗಿ ಹೇಳಿದ್ದಾಳೆ.

ಫುಲ್ ಮಾರ್ಕ್ಸ್ ಕೊಡುತ್ತೇನೆ ಎಂದು ಅನುಚಿತ ವರ್ತನೆ

ವಿದ್ಯಾರ್ಥಿನಿ ಹೊರಡಲು ಅನುವಾಗುತ್ತಿದ್ದಂತೆಯೇ ಎಚ್​​ಒಡಿ, ನಿನಗೆ ಹಾಜರಾತಿ ಕಡಿಮೆ ಇದೆ. ನನ್ನೊಂದಿಗೆ ಸಹಕರಿಸು, ಪೂರ್ಣ ಅಂಕಗಳನ್ನು ಕೊಡಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ. ಮನೆಗೆ ಕರೆದೊಯ್ದ ನಂತರ, ಅವರು ಸೋಫಾದಲ್ಲಿ ಅವರ ಪಕ್ಕದಲ್ಲಿ ಕುಳಿತು ಅವರ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು.

ಬಳಿಕ ನನ್ನ ಪ್ರಿಯಕರನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಅಷ್ಟರಲ್ಲಿ ಸ್ನೇಹಿತೆಯಿಂದ ಫೋನ್ ಕರೆ ಬಂದಿದ್ದು, ತುರ್ತಾಗಿ ಹೋಗಬೇಕಿದೆ ಎಂದು ಎಚ್​ಒಡಿ ಮನೆಯಿಂದ ಹೇಗೋ ತಪ್ಪಿಸಿಕೊಂಡು ಬಂದೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

File photo
4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅನುಮತಿ ನೀಡಿದವರಿಂದ ಪಾಠದ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಗುಡುಗು; Video

ಪೋಷಕರೊಂದಿಗೂ ಚರ್ಚಿಸಿದ್ದ ಆರೋಪಿ

ಇದಕ್ಕೂ ಮೊದಲು, ಆಕೆಯ ಪೋಷಕರನ್ನು ಸಂಪರ್ಕಿಸಿ ಆಕೆಯ "ಕಡಿಮೆ ಹಾಜರಾತಿ" ಬಗ್ಗೆ ಚರ್ಚಿಸಿದ್ದ ಮತ್ತು ಆಕೆಯ ಕಾಲೇಜು ಕಾರ್ಯಯೋಜನೆಗಳಲ್ಲಿ ಸಹಾಯ ಮಾಡಬಹುದೆಂದು ಮತ್ತು ಅನುಮಾನಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದ ಎಂದು ಅವರು ಆರೋಪಿಸಿದ್ದಾರೆ.

ಎಚ್​ಒಡಿ ಮನೆಯಿಂದ ತನ್ನ ಮನೆಗೆ ತೆರಳಿದ ವಿದ್ಯಾರ್ಥಿನಿ ಪೋಷಕರಿಗೆ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಅವರು ಕಾಲೇಜು ಆಡಳಿತ ಮಂಡಳಿಯನ್ನು ಸಂಪರ್ಕಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ವಿದ್ಯಾರ್ಥಿನಿಯ ದೂರಿನ ಮೇರೆಗೆ ತಿಲಕ್‌ನಗರ ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಅವರು ತಿಲಕ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ವೀಕರಿಸಿದ ದೂರಿನ ಆಧಾರದ ಮೇಲೆ, ನಾವು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 75 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆರೋಪಿ ಪ್ರಾಧ್ಯಾಪಕರನ್ನು ಬಂಧಿಸಿ ನಂತರ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com