
ಬೆಂಗಳೂರು: ಫುಡ್ ಡೆಲಿವರಿ ಬಾಯ್ಗಳನ್ನು ಗುರಿಯಾಗಿಸಿಕೊಂಡು ಅವರ ಮೊಬೈಲ್ ಫೋನ್‌ಗಳನ್ನು ದೋಚುತ್ತಿದ್ದ ನಾಲ್ವರು ನೇಪಾಳಿ ಪ್ರಜೆಗಳನ್ನು ಬೆಳ್ಳಂದೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳನ್ನು ಪರಾಸ್ ಸಿಂಗ್ (25), ಮುಖೇಶ್ ಸಾಯಿ (19), ಬಿಪಿನ್ ಕರ್ಕಿ (20), ಮತ್ತು ಸಮೀರ್ ಲೋಹರ್ ಎಂದು ಗುರುತಿಸಲಾಗಿದೆ,
ಬಂಧಿತರನ್ನು ನೇಪಾಳ ಮೂಲದ ಪಾರಸ್ ಸಿಂಗ್ (25), ಮುಕೇಶ್ ಸಾಯಿ (19), ಬಿಪಿನ್ ಕರ್ಕಿ (20), ಸಮೀರ್ ಲೋಹಾರ್ ಎಂದು ಗುರ್ತಿಸಲಾಗಿದೆ. ಇವರೆಲ್ಲರೂ ನೇಪಾಳ ಮೂಲದವರಾಗಿದ್ದು, ಕುಡ್ಲು ಗೇಟ್ ನಿವಾಸಿಗಳಾಗಿದ್ದಾರೆ.
ನಗರದ ಖಾಸಗಿ ಕಂಪನಿಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮನೆಗೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು.
ಫುಡ್ ಡೆಲಿವರಿ ಬಾಯ್ಗಳ ಬೈಕ್‌ಗಳನ್ನು ತಡೆದು, ಅವರ ಮೇಲೆ ಹಲ್ಲೆ ನಡೆಸಿ, ಅವರ ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 13 ರಂದು ರಾತ್ರಿ 11.30 ರ ಸುಮಾರಿಗೆ ಆರು ಜನರು ಫುಡ್ ಡೆಲಿವರಿ ಬಾಯ್ ಸುರೇಶ್ ಅವರನ್ನು ದರೋಡೆ ಮಾಡಿದ್ದರು. ಘಟನೆ ಸಂಬಂಧ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕದ್ದ ಫೋನ್ ಗಳನ್ನು ಮಾರಾಟ ಮಾಡುವ ಬದಲು ಅವುಗಳನ್ನು ಬಳಕೆ ಮಾಡುತ್ತಿದ್ದರು. ಈ ಗ್ಯಾಂಗ್ ಬೆಳ್ಳಂದೂರು, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೆಪಾಳ್ಯ ಮತ್ತು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇದೇ ರೀತಿಯ ದರೋಡೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement