ಬೆಂಗಳೂರು: ಖಾಸಗಿ ಕಂಪನಿಯ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 48 ಕೋಟಿ ರೂ. ವಂಚನೆ; ಇಬ್ಬರ ಬಂಧನ

ಆಗಸ್ಟ್ 6 ಮತ್ತು 7 ರ ನಡುವೆ ಕಂಪನಿಯ ಬ್ಯಾಂಕ್ ಖಾತೆಗಳಿಂದ ಹಲವಾರು ಅನಧಿಕೃತ ಮತ್ತು ಅನುಮಾನಾಸ್ಪದ ಹಣ ವರ್ಗಾವಣೆಗಳು ನಡೆದಿವೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
Two held for hacking private finance firm's bank accounts, transferring Rs 48 cr using foreign IPs
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಖಾಸಗಿ ಹಣಕಾಸು ಕಂಪನಿಯ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ವಿದೇಶಿ ಐಪಿ ವಿಳಾಸಗಳನ್ನು ಬಳಸಿಕೊಂಡು 48 ಕೋಟಿ ರೂ. ವಂಚನೆಯಿಂದ ವರ್ಗಾಯಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಸಂಬಂಧ ವಿಜ್‌ಡಿಎಂ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕರೊಬ್ಬರು ಆಗಸ್ಟ್ 7 ರಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 6 ಮತ್ತು 7 ರ ನಡುವೆ ಕಂಪನಿಯ ಬ್ಯಾಂಕ್ ಖಾತೆಗಳಿಂದ ಹಲವಾರು ಅನಧಿಕೃತ ಮತ್ತು ಅನುಮಾನಾಸ್ಪದ ಹಣ ವರ್ಗಾವಣೆಗಳು ನಡೆದಿವೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Two held for hacking private finance firm's bank accounts, transferring Rs 48 cr using foreign IPs
ಹಾಸನ: 3 ಕೋಟಿ ರೂ ವಂಚನೆ ಆರೋಪ; ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ಜನ!

"ಕಂಪನಿಯ ಆಂತರಿಕ ತನಿಖೆಯಲ್ಲಿ ಈ ವಹಿವಾಟುಗಳನ್ನು ಅದರ ಅಧಿಕೃತ ವ್ಯವಸ್ಥೆಗಳು ಅಥವಾ ನೋಂದಾಯಿತ ಐಪಿ ವಿಳಾಸಗಳಿಂದ ನಡೆಸಲಾಗಿಲ್ಲ ಎಂದು ತಿಳಿದುಬಂದಿದೆ. ಬದಲಾಗಿ, ಅವು ವಿದೇಶಿ ಐಪಿ ವಿಳಾಸಗಳಿಂದ ನಡೆದಿದೆ ಮತ್ತು ಸುಮಾರು 47 ಕೋಟಿ ರೂ.ಗಳನ್ನು ಕಂಪನಿಯ ಖಾತೆಗಳಿಂದ ಇತರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ತನಿಖೆಯಲ್ಲಿ ಕಂಪನಿಯ ಖಾತೆಗಳಿಂದ ಒಟ್ಟು 1,782 ವಹಿವಾಟುಗಳನ್ನು ನಡೆಸಲಾಗಿದ್ದು, 656 ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ಪೈಕಿ 27.39 ಲಕ್ಷ ರೂ.ಗಳನ್ನು ಒಬ್ಬ ವ್ಯಕ್ತಿಯ ಎಸ್‌ಬಿಐ ಖಾತೆಗೆ ವರ್ಗಾಯಿಸಲಾಗಿದ್ದು, ಸೆಪ್ಟೆಂಬರ್ 25 ರಂದು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಕಂಪನಿಯ ಖಾತೆಯಿಂದ ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಯ ಬ್ಯಾಂಕ್ ಖಾತೆಗೆ 5.5 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಮತ್ತು ನಂತರ ಇನ್ನೊಬ್ಬ ವ್ಯಕ್ತಿಗೆ ಸೇರಿದ ಐಸಿಐಸಿಐ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ" ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Two held for hacking private finance firm's bank accounts, transferring Rs 48 cr using foreign IPs
ಬೆಳಗಾವಿ: ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ 8,000 ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಾಂತರ ರೂ ವಂಚನೆ

"ಹೈದರಾಬಾದ್ ಮೂಲದ ಕಂಪನಿಯು ವೆಬೈನ್ ಡೇಟಾ ಸೆಂಟರ್‌ಗೆ ಸೇರಿದ ಐಪಿ ವಿಳಾಸಗಳನ್ನು ಬಳಸಿಕೊಂಡು ಈ ವಹಿವಾಟುಗಳನ್ನು ನಡೆಸಿದೆ. ಆ ಐಪಿ ವಿಳಾಸಗಳನ್ನು ಇನ್ನೊಬ್ಬ ವ್ಯಕ್ತಿ ಖರೀದಿಸಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.

ಅಕ್ಟೋಬರ್ 9 ರಂದು ಮತ್ತೊಬ್ಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ದುಬೈನಲ್ಲಿ ವಾಸಿಸುತ್ತಿರುವ ಇಬ್ಬರು ವ್ಯಕ್ತಿಗಳು ಐದು ಸರ್ವರ್‌ಗಳನ್ನು ಬಾಡಿಗೆಗೆ ಪಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ" ಎಂದು ತಿಳಿಸಲಾಗಿದೆ.

"ದುಬೈ ಮೂಲದ ಇಬ್ಬರು ವ್ಯಕ್ತಿಗಳು ಹಾಂಗ್ ಕಾಂಗ್ ಮೂಲದ ಹ್ಯಾಕರ್‌ಗಳನ್ನು ನೇಮಿಸಿಕೊಂಡಿದ್ದಾರೆ. ಅವರು ಬ್ಯಾಂಕಿನ ಭದ್ರತಾ ಸಾಫ್ಟ್‌ವೇರ್ ಅನ್ನು ಬೈಪಾಸ್ ಮಾಡಲು ಬ್ಯಾಂಕಿನ API ವ್ಯವಸ್ಥೆಗಳನ್ನು ಹಾಳು ಮಾಡಿದ್ದಾರೆ. ಅವರು ಹಾಂಗ್ ಕಾಂಗ್ ಮತ್ತು ಲಿಥುವೇನಿಯಾ ಮೂಲದ IP ವಿಳಾಸಗಳನ್ನು ಬಳಸಿಕೊಂಡು Whizdm ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ನ ಖಾತೆಗಳಿಂದ ಅನಧಿಕೃತ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com