

ಮಂಗಳೂರು: ಜೀವ ರಕ್ಷಕ ಆಂಬುಲೆನ್ಸ್ ಗೆ ದಾರಿ ಬಿಡದೇ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಆರೋಪದ ಮೇಲೆ ಬೈಕ್ ಸವಾರನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರಿ ಬೆಟ್ಟಂಪಾಡಿಯ ಮೊಹಮ್ಮದ್ ಮನ್ಸೂರ್ ಖಾನ್ ಎಂದು ಗುರುತಿಸಲಾಗಿದೆ. ಬಿಸಿಲೆಘಾಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಂಬುಲೆನ್ಸ್ ಮುಂದೆ ಬೈಕ್ ಓಡಿಸಿ ಸುಮಾರು 3-6 ಕಿ.ಮೀವರೆಗೂ ದಾರಿ ಬಿಡದೇ ಮನ್ಸೂರ್ ಖಾನ್ ಹುಚ್ಚಾಟವಾಡಿದ್ದನು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬೈಕ್ ನಂಬರ್ ಪ್ಲೇಟ್ ಆಧರಿಸಿ ಮೊಹಮ್ಮದ್ ಮನ್ಸೂರ್ ಖಾನ್ ನನ್ನು ಬಂಧಿಸಲಾಗಿದೆ.
Advertisement