7 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ಕೊನೆಗೂ ದಂಡ ಪಾವತಿಸಿದ ಸಿಎಂ Siddaramaiah, ಎಷ್ಟು ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಇನೊವಾ ಕಾರು 2024ರಿಂದ ಈವರೆಗೆ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ದಾಖಲಾಗಿದೆ.
Karnataka CM Siddaramaiah fined Rs 2500 for travelling without wearing a seat belt
ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸಿದ ಸಿಎಂ
Updated on

ಬೆಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕಾರು ಕೂಡ ಬರೊಬ್ಬರಿ 7 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಕಾರಣ ದಂಡ ಹೇರಲಾಗಿದೆ.

ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಇನೊವಾ ಕಾರು 2024ರಿಂದ ಈವರೆಗೆ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಅದರಂತೆ ಸಿಎಂ ಸಿದ್ದರಾಮಯ್ಯ ಅವರ ಕಚೇರಿ 2,500 ಸಾವಿರ ರೂಗಳನ್ನು ದಂಡವಾಗಿ ಪಾವತಿಸಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದು, ಸಿದ್ದರಾಮಯ್ಯ ಅವರು ಬಳಸುತ್ತಿರುವ ಕಾರಿನ ಮೇಲಿನ ಪ್ರಕರಣಗಳ ಸಂಬಂಧ ದಂಡ ಪಾವತಿಯಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.

ಆರು ಪ್ರಕರಣಗಳಲ್ಲಿ ಮುಖ್ಯಮಂತ್ರಿ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾರೆ. ಶೇ 50ರಷ್ಟು ರಿಯಾಯಿತಿ ಅನುಸಾರ 2,500 ರೂಪಾಯಿ ದಂಡವಿತ್ತು. ಆರು ಬಾರಿ ಸೀಟು ಬೆಲ್ಟ್ ಧರಿಸದಿದ್ದಕ್ಕಾಗಿ ಮತ್ತು ಒಂದು ಬಾರಿ ಅತಿವೇಗದಲ್ಲಿ ಚಲಿಸಿದ್ದಕ್ಕಾಗಿ ದಂಡ ವಿಧಿಸಲಾಗಿದ್ದು, ಸದ್ಯ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.

Karnataka CM Siddaramaiah fined Rs 2500 for travelling without wearing a seat belt
ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ 50 ರಿಯಾಯಿತಿ: ₹2.65 ಲಕ್ಷ ಕಳೆದುಕೊಂಡ ಸಾಫ್ಟ್‌ವೇರ್ ಎಂಜಿನಿಯರ್

ಎಲ್ಲೆಲ್ಲಿ ನಿಯಮ ಉಲ್ಲಂಘನೆ?

ಸಿದ್ದರಾಮಯ್ಯ ಅವರು ಕಾರಿನ ಮುಂಭಾಗದಲ್ಲಿ ಕುಳಿತುಕೊಂಡಾಗ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿರುವ ದೃಶ್ಯಾವಳಿಯು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂನಲ್ಲಿ (ಐಟಿಎಂಎಸ್) ಸೆರೆಯಾಗಿದೆ.

2024ರ ಜನವರಿ 24ರಂದು ಮಧ್ಯಾಹ್ನ 12.19ರಂದು ಹಳೇ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಸಾಗುವಾಗ ಸಿದ್ದರಾಮಯ್ಯ ಅವರು ಸೀಟು ಬೆಲ್ಟ್ ಧರಿಸಿರಲಿಲ್ಲ.

ಅದೇ ಜಂಕ್ಷನ್​ನಲ್ಲಿ ಫೆಬ್ರುವರಿ ಹಾಗೂ ಆಗಸ್ಟ್​ನಲ್ಲಿ ಮತ್ತೆರಡು ಪ್ರಕರಣಗಳು ದಾಖಲಾದರೆ, ಮಾರ್ಚ್‌ನಲ್ಲಿ ಚಂದ್ರಿಕಾ ಹೊಟೇಲ್ ಜಂಕ್ಷನ್ ಹಾಗೂ ಆಗಸ್ಟ್‌ನಲ್ಲಿ ಶಿವಾನಂದ ವೃತ್ತ ಹಾಗೂ ಡಾರಾಜ್ ಕುಮಾರ್ ಪ್ರತಿಮೆ ಜಂಕ್ಷನ್​​ಗಳ ಬಳಿ ಸೀಟು ಬೆಲ್ಟ್ ಧರಿಸಿದ ನಿಯಮ ಉಲ್ಲಂಘಿಸಿರುವುದು ದಾಖಲಾಗಿದೆ.

ಜುಲೈ 9ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಕಾರಿಡಾರ್​ನಲ್ಲಿ ಮುಖ್ಯಮಂತ್ರಿ ಅವರಿದ್ದ ಕಾರು ಅತಿವೇಗದಿಂದ ಹೋಗುವ ಮೂಲಕ ನಿಯಮ ಉಲ್ಲಂಘಿಸಿರುವುದು ಐಟಿಎಂಎಸ್‌ನಲ್ಲಿ ದಾಖಲಾಗಿತ್ತು.

ಕಾರಿನ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com