
ಮುರುಡೇಶ್ವರ: ದಸರಾ ರಜೆ ಹಿನ್ನೆಲೆ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಸೋಮವಾರ ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದು, ಈ ಸಂದರ್ಭದಲ್ಲಿ ಸಮುದ್ರದಲ್ಲಿನ ಭಾರೀ ಅಲೆಗಳ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿ ಪುಟ್ಟ ಬಾಲಕನೋರ್ವ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನ ಬಿದರಹಳ್ಳಿ ನಿವಾಸಿ ಕೃತಿಕ್ ಕೆ.ರವಿ ರೆಡ್ಡಿ (8) ಮೃತ ಬಾಲಕ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವಸಂತಾ ಕೆ. (27) ಎಂಬುವರನ್ನು ಇದೇ ಸಂದರ್ಭದಲ್ಲಿ ರಕ್ಷಿಸಲಾಗಿದೆ.
ಬೆಂಗಳೂರಿನ ಬಿದರಹಳ್ಳಿಯ ನಿವಾಸಿ ಕೃತಿಕ್ ರೆಡ್ಡಿ ಭಾನುವಾರ ಕುಟುಂಬ ಸಮೇತ ಮುರುಡೇಶ್ವರಕ್ಕೆ ಬಂದಿದ್ದರು. ಕಡಲತೀರದಲ್ಲಿ ಆಟವಾಡಲು ತೆರಳಿದ್ದ ವೇಳೆ ದುರ್ಘಟನೆ ಜರುಗಿದೆ’ ಎಂದು ಮುರುಡೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೃತಿಕ್ ರೆಡ್ಡಿ ಕುಟುಂಬ ಭಾನುವಾರ ಮುರುಡೇಶ್ವರದ ಹೋಟೆಲ್‌ನಲ್ಲಿ ತಂಗಿದ್ದಾರೆ. ಸೋಮವಾರ ಬೆಳಿಗ್ಗೆ ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಆಟವಾಡಲು ಬೀಚ್‌ಗೆ ಹೋಗಿದ್ದಾರೆ.
ಈ ವೇಳೆ ದೊಡ್ಡ ಅಲೆಗಳ ಹೊಡೆತಕ್ಕೆ ಬಾಲಕ ಸಿಲುಕಿದ್ದು, ಕೊಚ್ಚಿ ಹೋಗಿದ್ದಾನೆ. ಈ ವೇಳೆ ಕಡಲತೀರದಲ್ಲಿದ್ದ ಸ್ಥಳೀಯರು ವಸಂತ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ, ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಳೆಗಾಲದಲ್ಲಿ ಸಮುದ್ರದ ಅಲೆಗಳು ರಭಸದಿಂದ ಇರಲಿಲ್ಲು. ಈ ಹಿನ್ನೆಲೆಯಲ್ಲಿ ಬೀಚ್'ಗೆ ಸಾರ್ವಜನಿಕ ಪ್ರದೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇತ್ತೀಚೆಗಷ್ಟೇ ಮತ್ತೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು ಆದರೆ, ಆದರೆ ಜಲ ಕ್ರೀಡೆಗಳನ್ನು ನಿಷೇಧಿಸಲಾಗಿತ್ತು.
ನೀರಿಗೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನೂ ಇನ್ನು ತೆರೆದಿಲ್ಲ. ಆದರೂ ಜನರು ನೀರಿಗಿಳಿಯುತ್ತಿದ್ದಾರೆಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
Advertisement