
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದು, ಇದರ ನಡುವಲ್ಲೇ ಬೀದಿ ದೀಪಗಳ ಕೊರತೆ ಕೂಡ ಸವಾರರ ದೊಡ್ಡ ಸಮಸ್ಯೆಯಾಗಿ ಪರಿಣಗಿಸಿದೆ.
ಇಂಟರ್ಮೀಡಿಯೇಟ್ ರಿಂಗ್ ರಸ್ತೆ, ಸರ್ಜಾಪುರ-ಮಾರತಹಳ್ಳಿ ರಸ್ತೆ, ಮೇನ್ ಗಾರ್ಡ್ ಕ್ರಾಸ್ ರಸ್ತೆ ಮತ್ತು ನಗರದ ಇನ್ನೂ ಹಲವು ರಸ್ತೆಗಳಲ್ಲಿ ಈ ಸಮಸ್ಯೆಗಳು ಕಂಡು ಬಂದಿದ್ದು, ಸೂರ್ಯಾಸ್ತದ ನಂತರ ಈ ರಸ್ತೆಗಳಲ್ಲಿ ಸಾಗುವುದು ಸವಾರರಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.
ಬೀದಿ ದೀಪಗಳಿಲ್ಲದೆ ರಸ್ತೆ ಗುಂಡಿಗಳನ್ನು ಪತ್ತೆ ಮಾಡುವುದು ಕಷ್ಟಕರವಾಗಿರುತ್ತದೆ. ಸೀಮಿತ ಶಕ್ತಿಯ ಹೆಡ್‌ಲೈಟ್ ಹೊಂದಿರುವ ಹಳೆಯ ವಾಹನಗಳ ಸವಾರರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಈಜಿಪುರ ಸಿಗ್ನಲ್‌ನಿಂದ ಮಾರುತಿ ಇನ್ಫೋಟೆಕ್ ಸೆಂಟರ್‌ವರೆಗಿನ ಇಂಟರ್ಮೀಡಿಯೇಟ್ ರಿಂಗ್ ರಸ್ತೆಯ ಭಾಗವು ರಸ್ತೆ ಸಂಚಾರ ಸುಗಮವಾಗಿದ್ದರೂ, ವಾಹನಗಳಿಗೆ ಮಾರ್ಗದರ್ಶನ ನೀಡಲು ಪ್ರತಿಫಲಿತ ರಸ್ತೆ ಫಲಕಗಳ ಕೊರತೆ ಸಮಸ್ಯೆಯಾಗುತ್ತಿದೆ.
ಸರ್ಜಾಪುರ-ಮಾರತಹಳ್ಳಿ ರಸ್ತೆಯ ಸ್ಥಿತಿ ಕೆಟ್ಟದಾಗಿದೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು, ಬೀದಿ ದೀಪಗಳೂ ಇಲ್ಲವಾಗಿದೆ. ಹೀಗಾಗಿ ಸಾಕಷ್ಟು ಮಂದಿ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿರುವುದು ವರದಿಯಾಗುತ್ತಿದೆ.
ಮೇನ್ ಗಾರ್ಡ್ ಕ್ರಾಸ್ ರಸ್ತೆಯಲ್ಲಿ ಎರಡು ಪ್ರಮುಖ ಬೀದಿ ದೀಪದ ಕಂಬಗಳಿವೆ. ಆದರೆ, ಅವು ಕೆಲಸ ಮಾಡುತ್ತಿಲ್ಲ. ಸೂರ್ಯಸ್ತದ ನಂತರ ರಸ್ತೆ ಪ್ರಾರಂಭ ಹಾಗೂ ಅಂತ್ಯದವರೆಗೂ ಕಗ್ಗತ್ತಲಲ್ಲಿ ಸಾಗಬೇಕಿದೆ ಎಂದು ಸವಾರರು ಹೇಳಿದ್ದಾರೆ.
ಸರ್ಜಾಪುರ-ಮಾರತಹಳ್ಳಿ ರಸ್ತೆಯ ಉಸ್ತುವಾರಿಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎಂಜಿನಿಯರ್ ಮಾತನಾಡಿ, ಸಮಸ್ಯೆ ಪರಿಹರಿಸಲು ತಂತ್ರಜ್ಞರ ರವಾನಿಸಲಾಗುವುದು ಎಂದು ಹೇಳಿದ್ದಾರೆ.
ಇಂಟರ್ಮೀಡಿಯೇಟ್ ರಿಂಗ್ ರಸ್ತೆಯ ಮೇಲ್ವಿಚಾರಣೆ ಮಾಡುತ್ತಿರುವ ಮತ್ತೊಬ್ಬ ಜಿಬಿಎ ಎಂಜಿನಿಯರ್ ಮಾತನಾಡಿ, ರಸ್ತೆ ಅಗಲೀಕರಣ ಯೋಜನೆಯ ಕಾರಣದಿಂದಾಗಿ ದೀಪ ಕಂಬಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ವಾಹನ ದಟ್ಟಣೆಯಷ್ಟೇ ಅಲ್ಲ, ಬೀದಿ ಬೀಪಗಳಿಲ್ಲದ ರಸ್ತೆಗಳೂ ಕೂಡ ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಎಂದು ಸ್ಥಳೀಯ ನಿವಾಸಿ ಸೋನಿಯಾ ಸಿಂಗ್ ಅವರು ಹೇಳಿದ್ದಾರೆ.
Advertisement