ಶಿವಮೊಗ್ಗ: ಮೃಗಾಲಯದಲ್ಲಿ ನೀರಾನೆ ದಾಳಿಗೆ ವೈದ್ಯೆ ಬಲಿ; ನ್ಯಾಯಕ್ಕಾಗಿ ಪೋಷಕರ ಒತ್ತಾಯ

ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ತುಂಗಾ ನಗರ ಪೊಲೀಸ್ ಠಾಣೆಗೆ ಬುಧವಾರ ವಿಚಾರಣೆಗೆ ಬನ್ನೇರುಘಟ್ಟದಿಂದ ಬಂದು ಹಾಜರಾಗಿದ್ದರು. ಈ ವೇಳೆ ತಮ್ಮ ಹೇಳಿಕೆಗಳನ್ನು ನೀಡಿ ವಾಪಸ್ ಆಗಿದ್ದಾರೆ.
ಸಮೀಕ್ಷಾ ರೆಡ್ಡಿ
ಸಮೀಕ್ಷಾ ರೆಡ್ಡಿ
Updated on

ಶಿವಮೊಗ್ಗ: ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಮಗಳ ಸಾವಿನಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಶಿವಮೊಗ್ಗ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಯಿಂದ ಸಾವನ್ನಪ್ಪಿದ ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ತಾಯಿ ಶೈಲಜಾ ರೆಡ್ಡಿ ಆರೋಪಿಸಿದ್ದಾರೆ‌.

ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ತುಂಗಾ ನಗರ ಪೊಲೀಸ್ ಠಾಣೆಗೆ ಬುಧವಾರ ವಿಚಾರಣೆಗೆ ಬನ್ನೇರುಘಟ್ಟದಿಂದ ಬಂದು ಹಾಜರಾಗಿದ್ದರು. ಈ ವೇಳೆ ತಮ್ಮ ಹೇಳಿಕೆಗಳನ್ನು ನೀಡಿ ವಾಪಸ್ ಆಗಿದ್ದಾರೆ.

ಈ ವೇಳೆ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಗಳ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದರು. ಅಂದು ನಮಗೆ ಮಾತಾಡುವ ಶಕ್ತಿ ಇರಲಿಲ್ಲ. ಇಂದು ಪ್ರಕರಣ ಸಂಬಂಧ ಸ್ಟೇಟ್​ಮೆಂಟ್ ತೆಗೆದುಕೊಳ್ಳಲು ಕರೆದಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳಲ್ಲ ಎಂದರು.

ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು. ಯಾವುದೇ ಭದ್ರತೆಯಿಲ್ಲದೆ ತಡರಾತ್ರಿ ಆಕೆಯನ್ನು ಅಲ್ಲಿಗೆ ಏಕೆ ಕಳುಹಿಸಲಾಗಿದೆ ಎಂದು ತಿಳಿಯಬೇಕು. "ನಮ್ಮ ಮಗಳನ್ನು ಮರಳಿ ಕರೆತರಲು ಸಾಧ್ಯವಿಲ್ಲ. ಆದರೆ ಅಂತಹ ಅನ್ಯಾಯವನ್ನು ಇತರ ಪಶುವೈದ್ಯರಿಗೆ ಮಾಡಬಾರದು. ಭವಿಷ್ಯದಲ್ಲಿ ಪಶುವೈದ್ಯರು ಧೈರ್ಯದಿಂದ ಕೆಲಸ ಮಾಡಲು ಅವಕಾಶ ನೀಡಬೇಕು." ನಿಯಮಗಳನ್ನು ಬದಲಾಯಿಸಿ. ಮೃಗಾಲಯಗಳಲ್ಲಿ ಎಸ್​ಒಪಿ ಸರಿಯಾಗಿ ಪಾಲನೆ ಆಗಬೇಕು' ಎಂದು ಅವರು ಹೇಳಿದರು.

ಸಮೀಕ್ಷಾ ರೆಡ್ಡಿ
ನೀರಾನೆ ದಾಳಿಯಿಂದ ಪಶುವೈದ್ಯೆ ಸಾವು: ಘಟನೆ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, SOP ರೂಪಿಸಲು ಸೂಚನೆ

'ಅಲ್ಲಿನ ಲೋಪದೋಷಗಳ ಬಗ್ಗೆ ಹೇಳುತ್ತಿದ್ದಳು. ಆದರೆ ತನಿಖೆ ನಡೆಯುತ್ತಿರುವುದರಿಂದ ಏನೂ ಹೇಳುವುದಕ್ಕೆ ಆಗಲ್ಲ. ಆದರೆ, ಅಲ್ಲಿನ ಲೋಪದೋಷಗಳ ಬಗ್ಗೆ ಹೇಳುತ್ತಿದ್ದಳು. ಓರ್ವ ಹೆಣ್ಣು ಮಗಳನ್ನು ಅಲ್ಲಿ ಕಳುಹಿಸುವ ಅವಶ್ಯತೆ ಇತ್ತೇ? ಸಾಯುವ ಹಿಂದಿನ ಮೂರು ದಿನಗಳಿಂದ ಅವಳು ಅಲ್ಲಿಗೆ ಹೋಗಿದ್ದಳು. ಅವಳ ಸಾವನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಡೆಯಬಹುದಾಗಿತ್ತು. ಅವಳನ್ನು ಮೃಗಾಲಯದ ಜೀಪ್​ನಲ್ಲಿಯೇ ಕಳುಹಿಸಿದ್ದರು.

ಸಮೀಕ್ಷಾ ಅವರ ತಂದೆ ಧ್ರುವ ಕುಮಾರ್ ಮಾತನಾಡಿ "ನನ್ನ ಮಗಳು ಯುಕೆಜಿ ಓದುತ್ತಿದ್ದಾಗಿನಿಂದ ಪಶುವೈದ್ಯೆಯಾಗುತ್ತೇನೆ ಎಂದು ಹೇಳುತ್ತಿದ್ದರು. ಅವಳು ಬಾಲ್ಯದಿಂದಲೂ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಳು. ಉನ್ನತ ಶಿಕ್ಷಣ ಮತ್ತು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶ ಸಿಕ್ಕಿದ್ದರೂ, ಅವಳು ಹೋಗಲಿಲ್ಲ. ಅವಳು ಯಾವಾಗಲೂ ಪ್ರಾಣಿಗಳಿಗಾಗಿ ಕೆಲಸ ಮಾಡಲು ಬಯಸುತ್ತಿದ್ದಳು," ಎಂದು ಸಮೀಕ್ಷಾಳ ಪೋಷಕರು ನೆನಪಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com