'ಬಾರದು ಬಪ್ಪದು, ಬಪ್ಪದು ತಪ್ಪದು': ಅಥಣಿಗೆ ಕೃಷಿ ಕಾಲೇಜು ಮಂಜೂರಾಗಿದ್ದು ಸಹ ಶುಕ್ರದೆಸೆ; ಲಕ್ಷ್ಮಣ ಸವದಿ ಮಾರ್ಮಿಕ ನುಡಿ

ಸಂಪುಟ ಪುನಾರಚನೆ ಮಾಡಿ ಬೇರೆಯವರಿಗೆ ಅವಕಾಶಗಳನ್ನು ನೀಡಬೇಕು. ಹೈಕಮಾಂಡ್, ಸಿಎಂ ಮತ್ತು ಪಕ್ಷದ ಅಧ್ಯಕ್ಷರು ಸರ್ಕಾರ ರಚನೆಯಾಗಿ ಎರಡೂವರೆ ವರ್ಷದ ಬಳಿಕ ಬೇರೆಯವರಿಗೆ ಅವಕಾಶ ನೀಡುವುದಾಗಿ ಹೇಳಿದ್ದರು.
Laxman Savadi
ಲಕ್ಷ್ಮಣ ಸವದಿ
Updated on

ಬೆಳಗಾವಿ: ಸಚಿವ ಸ್ಥಾನಗಳನ್ನು ಕೋರಿ ಕಾಂಗ್ರೆಸ್ ಪಕ್ಷದ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಶಾಸಕರ ಗುಂಪೊಂದು ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಆದರ ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಎಲ್ಲದರಿಂದ ದೂರವಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಮತ್ತು ಅಥಣಿಯ ಶಾಸಕ ಲಕ್ಷ್ಮಣ್ ಸವದಿ, ಶಾಸಕರ ದಂಡು ಮಂತ್ರಿಗಿರಿಗಾಗಿ ದೆಹಲಿಯ ಪ್ರವಾಸ ಕೈಗೊಂಡಿದೆ. ಇನ್ನೊಂದೆಡೆ ಇದರಿಂದ ದೂರ ಉಳಿದ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ಬಾರದು ಬಪ್ಪದು, ಬಪ್ಪದು ತಪ್ಪದು. ಅಥಣಿಗೆ ಕೃಷಿ ಕಾಲೇಜು ಮಂಜೂರಾಗಿದ್ದು ಸಹ ಶುಕ್ರದೆಸೆಯೇ ಎಂದಿದ್ದಾರೆ.

ಸಂಪುಟ ಪುನಾರಚನೆ ಮಾಡಿ ಬೇರೆಯವರಿಗೆ ಅವಕಾಶಗಳನ್ನು ನೀಡಬೇಕು. ಹೈಕಮಾಂಡ್, ಸಿಎಂ ಮತ್ತು ಪಕ್ಷದ ಅಧ್ಯಕ್ಷರು ಸರ್ಕಾರ ರಚನೆಯಾಗಿ ಎರಡೂವರೆ ವರ್ಷದ ಬಳಿಕ ಬೇರೆಯವರಿಗೆ ಅವಕಾಶ ನೀಡುವುದಾಗಿ ಹೇಳಿದ್ದರು. ಈಗಾಗಲೇ ಎರಡೂವರೆ ವರ್ಷ ಮುಗಿದು ಹೋಗಿದ್ದು, ಈ ಹಿನ್ನೆಲೆ ಶಾಸಕರು ದೆಹಲಿಗೆ ತೆರಳಿ ತಮ್ಮ ಭಾವನೆಗಳನ್ನು ತಿಳಿಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಇನ್ನು ಜನವರಿಯಲ್ಲಿ ಶುಕ್ರದೆಸೆ ಆರಂಭವಾಗಲಿದೆ ಎಂದಿದ್ದ ನೀವು ಈಗ ಏಪ್ರೀಲ್ ಶುರುವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ಶುಕ್ರದೆಸೆ ಬರುತ್ತದೆ ಎಂದಿದ್ದೇ ಅಷ್ಟೇ. ಆದರೇ ನಾನು ಮಂತ್ರಿಯಾಗ್ತೀನಿ ಎಂದು ಹೇಳಿರಲಿಲ್ಲ.

Laxman Savadi
ಸಚಿವ ಸ್ಥಾನಕ್ಕಾಗಿ 'ಕೈ' ಪಾಳಯದಲ್ಲಿ ಪೈಪೋಟಿ: ಸಂಪುಟ ಸೇರುವ ಆಸೆ ಬಿಚ್ಚಿಟ್ಟ ಶಾಸಕ ಆಸೀಫ್ ಸೇಠ್

ನಮ್ಮ ಕ್ಷೇತ್ರಕ್ಕೆ ಇಂದು ಅಭಿವೃದ್ಧಿ ಕೆಲಸಗಳು ಸಿಗುತ್ತಿವೆ. ಮುಖ್ಯಮಂತ್ರಿಗಳು ಕಳೆದ ಬಜೆಟ್ ನಲ್ಲಿ ಅಥಣಿ ಕ್ಷೇತ್ರಕ್ಕೆ 509 ಕೋಟಿ ರೂಪಾಯಿಯಲ್ಲಿ ಕೃಷಿ ಕಾಲೇಜು ಮಾಡಿದ್ದು ಶುಕ್ರದೆಸೆ ಅಲ್ಲವೇ ಎಂದು ಪ್ರಶ್ನಿಸಿದರು. ಒಂದು ಪಡೆಯಲೂ ಒಂದು ಕಳೆದುಕೊಳ್ಳಬೇಕಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಬಾರದು ಬಪ್ಪದು. ಬಪ್ಪದು ತಪ್ಪದು. ಬರುವುದು ಬರುತ್ತೇ ಹೋಗುವುದು ಹೋಗುತ್ತೆ ಎಂದರು.

ಸಚಿವ ಸಂಪುಟ ಪುನರ್ರಚನೆಯಾದರೆ ಬೆಳಗಾವಿ ಜಿಲ್ಲೆಯ ಮೂರನೇ ಶಾಸಕರಾಗಬಹುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com