

ಬಾಗಲಕೋಟೆ: ಪತ್ನಿ ಜೊತೆ ಅನೈತಿಕ ಸಂಬಂಧ ಕಾರಣಕ್ಕೆ ಚಿಕ್ಕಪ್ಪನ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದಿದೆ. ಕನ್ನೊಳ್ಳಿ ಗ್ರಾಮದಲ್ಲಿ ಬೆಂಕಿಹೊತ್ತುಕೊಂಡು ಕಾರಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು ವರದಿಯಾಗಿತ್ತು. ಮೃತನನ್ನು 36 ವರ್ಷದ ಸೋಮು ಪಡಸಲಗಿ ಎಂದು ಗುರುತಿಸಲಾಗಿತ್ತು. ಇದು ಆಕಸ್ಮಿಕ ಸಾವಲ್ಲ ಬದಲಾಗಿ ಕೊಲೆ ಎಂಬುದು ತನಿಖೆ ವೇಳೆ ಬಯಲಾಗಿದೆ.
ಸೋಮು, ಸದಾಶಿವ ಪಡಸಲಗಿ ಪತ್ನಿ ಜೊತೆ ಮೂರು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳವೂ ನಡೆದಿತ್ತು. ಹೀಗಾಗಿ ಸೋಮುನನ್ನು ಸದಾಶಿವ ಪಡಸಲಗಿ ಹಾಗೂ ಆತನ ಸಹಚರರು ಕೊಲೆ ಮಾಡಿದ್ದರು ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸ ಕಾರು ಖರೀದಿಸಿದ್ದ ಸೋಮು ಪೂಜೆ ಮಾಡಿಸಿಕೊಂಡು ಊರಿಗೆ ಬರುತ್ತಿದ್ದಾಗ ಆತನನ್ನು ಹಿಂಬಾಲಿಸಿದ ಸದಾಶಿವ ಮತ್ತು ಸಹಚರರು ಕನ್ನೊಳ್ಳಿ ಗ್ರಾಮದ ಬಳಿ ಸೋಮುವಿನ ಕಾರನ್ನು ತಡೆದು ಜಗಳವಾಡಿದ್ದರು. ನಂತರ ಸದಾಶಿವ ಸೋಮುಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು. ಬಳಿಕ ಶವವನ್ನು ಕಾರಲ್ಲಿ ಕೂರಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಕಾರಿಗೆ ಬೆಂಕಿ ತಗುಲಿ ಸೋಮು ಮೃತಪಟ್ಟಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಸದಾಶಿವ ಮಾಡಿದ್ದರು ಎಂಬುದು ಗೊತ್ತಾಗಿದೆ.
Advertisement