ಬೆಂಗಳೂರು: ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್; ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್‌ ಸಾಧನಾ ಶೆಟ್ಟಿ ವಿರುದ್ಧ ಬಿತ್ತು ಕೇಸ್‌!

ಮಂಗಳೂರಿನ ಸಾಧನಾ ಶೆಟ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್
ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್
Updated on

ಬೆಂಗಳೂರು: ಉದ್ಯಮಿಯ ಜತೆಗೆ ಸಲುಗೆಯಿಂದ ಇರುವ ವಿಡಿಯೊಗಳನ್ನು ಸೆರೆ ಹಿಡಿದು 1.50 ಕೋಟಿ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದ ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರ 4 ನೇ ಬ್ಲಾಕ್‌ನಲ್ಲಿರುವ ಸೆಲೆಬ್ರೆಟಿ ಮೇಕಪ್‌ ಕ್ಲಿನಿಕ್‌ ಮಾಲೀಕ ಹಾಗೂ ಉದ್ಯಮಿ ಕಾರ್ತಿಕ್‌ ಪುತಾ (32) ನೀಡಿದ ದೂರಿನನ್ವಯ ಸಾಧನಾ ಶೆಟ್ಟಿ ವಿರುದ್ಧ ಸುಲಿಗೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಂಗಳೂರಿನ ಸಾಧನಾ ಶೆಟ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಮೇಕಪ್‌ ಕ್ಲಿನಿಕ್‌ ಹಾಗೂ ಹಾಸ್ಪಿಟಲ್‌ ನಡೆಸುತ್ತಿರುವ ಕಾರ್ತಿಕ್‌ಗೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿಇನ್‌ಫ್ಲೂಯರ್ಸ್ ಆಗಿರುವ ಸಾಧನಾ ಪರಿಚಯವಾಗಿದ್ದರು.

ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್
ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಯಲ್ಲಿ ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌; FIR ದಾಖಲು

ಯುವತಿ ಹಲವು ಪ್ರಮೊಷನಲ್‌ ವಿಡಿಯೊಗಳನ್ನು ಮಾಡಿದ್ದರಿಂದ ಜಯನಗರದ ಕೆಫೆಯೊಂದಕ್ಕೆ ಮಾತುಕತೆಗೆ ಉದ್ಯಮಿ ಆಹ್ವಾನಿಸಿದ್ದರು. ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಅದಾದ ಮೇಲೆ ದೂರುದಾರರ ಜತೆಗೆ ಯುವತಿ ತುಂಬಾ ಸಲುಗೆಯಿಂದ ವರ್ತಿಸಿದ್ದರು.

ಜತೆಗಿದ್ದ ಸಮಯದ ಖಾಸಗಿ ಫೋಟೊ, ವಿಡಿಯೋ ಹಾಗೂ ಸಂಭಾಷಣೆ ರೆಕಾರ್ಡಿಂಗ್‌ ಮುಂದಿಟ್ಟು ನನ್ನ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು. ಜತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿವೈರಲ್‌ ಮಾಡುವುದಾಗಿ ಹೆದರಿಸಿ 1.5 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ' ಎಂದು ಕಾರ್ತಿಕ್‌ ತಮ್ಮ ದೂರಿನಲ್ಲಿಆರೋಪಿಸಿದ್ದಾರೆ.

ಯುವತಿಯು ಬೆದರಿಕೆಯಿಂದ ಆತಂಕಗೊಂಡಿದ್ದ ಉದ್ಯಮಿ, ಗೂಗಲ್‌ ಹಾಗೂ ಫೋನ್‌ ಪೇ ಮೂಲಕ ಹಂತಹಂತವಾಗಿ 5 ಲಕ್ಷ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ನಗದು ರೂಪದಲ್ಲಿ 5 ಲಕ್ಷ ನೀಡಿದ್ದರು. 35 ಸಾವಿರ ಮೌಲ್ಯದ ಚಿನ್ನದ ಉಂಗುರ, 70 ಸಾವಿರ ಮೌಲ್ಯದ ಚಿನ್ನದ ಸರ, 1.50 ಲಕ್ಷ ಮೌಲ್ಯದ ಐ–ಫೋನ್‌ ನೀಡಿದ್ದರು. ಅದಾದ ಮೇಲೂ 1.50 ಕೋಟಿ ನೀಡಿದರಷ್ಟೇ ವಿಡಿಯೊಗಳನ್ನು ಡಿಲಿಟ್‌ ಮಾಡುವುದಾಗಿ ಯುವತಿ ಹೇಳಿದ್ದರು.

ಹಣ ನೀಡಲು ಸಾಧ್ಯವಿಲ್ಲ ಎಂದಾಗ, ದೂರುದಾರರ ಪತ್ನಿ ಹಾಗೂ ಕುಟುಂಬಸ್ಥರಿಗೆ ವಿಡಿಯೊ ಕಳುಹಿಸಿದ್ದರು. ವಿಡಿಯೊ ವೀಕ್ಷಿಸಿದ ಬಳಿಕ, ಉದ್ಯಮಿ ಮನೆಯಲ್ಲಿ ಗಲಾಟೆ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್
ಬೆಂಗಳೂರು: ಐಪಿಎಲ್ ಬ್ಲಾಕ್ ಟಿಕೆಟ್ ದಂಧೆ ಭೇದಿಸಿದ ಮಫ್ತಿ ಪೊಲೀಸರು; KSCA ಸದಸ್ಯನ ಕೈವಾಡ?

ಸಾಧನಾ ಶೆಟ್ಟಿ ಕಾರ್ತಿಕ್ ಅವರ ಕ್ಲಿನಿಕ್ ಗೆ ಪದೇ ಪದೇ ಭೇಟಿ ನೀಡುತ್ತಿದ್ದರು, ಹಣ ಪಾವತಿಸುವಂತೆ ಬೆದರಿಕೆ ಹಾಕಿದ್ದರು. ಡೇಟಾವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಲಾಗಿದೆ, ಅದರ ಕಾಪಿಗಳನ್ನು ಪೆನ್ ಡ್ರೈವ್‌ನಲ್ಲಿ ತನ್ನ ತಾಯಿ ಮತ್ತು ಇತರ ಇಬ್ಬರಿಗೆ ನೀಡಲಾಗಿದೆ ಎಂದು ಹೇಳಿದ್ದರು. ಆಕೆಯ ವಿರುದ್ಧ ಸುಲಿಗೆ ಪ್ರಕರಣ (ಬಿಎನ್‌ಎಸ್ 302(2)) ಮತ್ತು 2000ದ ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com