ಬೆಂಗಳೂರು: ಕೇರಳ-ತಮಿಳುನಾಡು ವಿದ್ಯಾರ್ಥಿಗಳ ನಡುವೆ ಘರ್ಷಣೆ, ದರೋಡೆ, ಆರು ಜನರ ಬಂಧನ!

ಕೋಣನಕುಂಟೆ ಪೊಲೀಸ್ ವ್ಯಾಪ್ತಿಯಲ್ಲಿರುವ ಪವಮನ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಈ ಘಟನೆ ಏಪ್ರಿಲ್ 16 ರಂದು ನಡೆದಿತ್ತು.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಕಾಲೇಜ್ ವೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ವಿದ್ಯಾರ್ಥಿಯೊಬ್ಬ ತಮಿಳುನಾಡಿನ ತನ್ನ ಐದು ಸಹಚರರಿಗೆ ಕರೆ ಮಾಡಿ ಕೇರಳದ ಆರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಬಳಿಕ ಆರೋಪಿಗಳು ಚಾಕುವಿನಿಂದ ಬೆದರಿಸಿ, 3 ಲಕ್ಷ ರೂ. ಮೌಲ್ಯದ ನಗದು, ಮೊಬೈಲ್ ಫೋನ್‌ಗ ಲ್ಯಾಪ್‌ಟಾಪ್ ಮತ್ತು ಬೈಕ್ ದೋಚಿದ್ದಾರೆ. ಕೋಣನಕುಂಟೆ ಪೊಲೀಸ್ ವ್ಯಾಪ್ತಿಯಲ್ಲಿರುವ ಪವಮನ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಈ ಘಟನೆ ಏಪ್ರಿಲ್ 16 ರಂದು ನಡೆದಿತ್ತು. ಪೊಲೀಸರು ಈಗ ಎಲ್ಲಾ ಆರು ಆರೋಪಿಗಳನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿಗಳನ್ನು ನಗರದ ಖಾಸಗಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಥಿ ಅಬಿನೇಶ್ (22) ಕಲೈವೇಂಧನ್ (20); ವಿಮಲ್ ರಾಜ್ (24) ಕುಮಾರನ್; ಪ್ರೇಮ್ ಕುಮಾರ್ (23) ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯವರು. ಅಬಿನೇಶ್ ಹೊರತುಪಡಿಸಿ ಅವರು ಖಾಸಗಿ ವಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಯಾರಿಗೂ ಹಿಂದಿನ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ ಎನ್ನಲಾಗಿದೆ.

ಕೆಂಬತ್ತಳ್ಳಿ ಮುಖ್ಯ ರಸ್ತೆಯ ಪವಮಾನ ನಗರದಲ್ಲಿ ವಾಸಿಸುತ್ತಿರುವ ಕೇರಳದ ವಿದ್ಯಾರ್ಥಿಯೊಬ್ಬರು ಏಪ್ರಿಲ್ 18 ರಂದು ನೀಡಿದ ದೂರಿನಲ್ಲಿ ತನ್ನ ಇತರ ಆರು ಜನ ಸ್ನೇಹಿತರೊಂದಿಗೆ ವಾಸಿಸುತ್ತಿದ್ದಾಗಿ ದೂರಿನಲ್ಲಿ ಹೇಳಿದ್ದರು. ಏಪ್ರಿಲ್ 17 ರಂದು ರಾತ್ರಿ 10.30 ರ ಸುಮಾರಿಗೆ ಆರು ಜನರು ಅಕ್ರಮವಾಗಿ ಅವರ ಮನೆಗೆ ನುಗ್ಗಿ, ಅವರ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಬೆದರಿಸಿ, ಹಲ್ಲೆ ಮಾಡಿದ್ದು, ದರೋಡೆ ಮಾಡಿದ್ದಾರೆ. ಯುಪಿಐ ಮೂಲಕ 10,000 ರೂ.ಗಳನ್ನು ವರ್ಗಾಯಿಸುವಂತೆ ಮಾಡಿ ನಾಲ್ಕು ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು ಮತ್ತು ಬೈಕ್ ನೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಡಕಾಯಿತಿ ಪ್ರಕರಣ ದಾಖಲಿಸಿದ ನಂತರ, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಏಪ್ರಿಲ್ 21 ರಂದು ಆರು ಜನರನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವರು ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ದಾಳಿ ಮತ್ತು ದರೋಡೆ ಕೇರಳ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಪ್ರಮುಖ ಆರೋಪಿ ಅಭಿನೇಶ್, ಸಂತ್ರಸ್ತರ ವಿರುದ್ಧ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನ ಸಹಚರರಿಗೆ ಕರೆ ಮಾಡಿದ್ದ.

Casual Images
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಇಬ್ಬರ ಬಂಧನ; 20 ವಾಹನ ವಶ!

ಪೊಲೀಸರು 10,000 ರೂ. ನಗದು, ನಾಲ್ಕು ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com