ರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಡಿಯೋ ಕಾನ್ಫರೆನ್ಸ್‌ ವೇಳೆ ಪವಿತ್ರಾಗೌಡ ಹೆಡ್‌ಫೋನ್ ಬಳಕೆ: ನ್ಯಾಯಾಧೀಶರ ಫುಲ್ ಕ್ಲಾಸ್!

ವಿಚಾರಣೆ ವೇಳೆ ಪವಿತ್ರಾಗೌಡ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, ಈ ವೇಳೆ ಹೆಡ್ ಫೋನ್ ಬಳಕೆ ಮಾಡಿದ್ದಕ್ಕೆ ಜಡ್ಜ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
Pavithra Gowda
ಪವಿತ್ರಾಗೌಡ
Updated on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ಪವಿತ್ರಾ ಗೌಡ ವಿರುದ್ಧ ನ್ಯಾಯಾಧೀಶರು ಗರಂ ಆದ ಘಟನೆ ವರದಿಯಾಗಿದೆ.

ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳ ಕಾನೂನು ಹೋರಾಟ ಮುಂದುವರಿದಿದ್ದು, ಇಂದು ಹೈಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆಯಿತು.

59ನೇ ಸಿಸಿಹೆಚ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಜೈಲಿನಲ್ಲಿರುವ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ (VC) ಮೂಲಕ ಹಾಜರಾಗಿದ್ದರು.

ವಿಚಾರಣೆ ವೇಳೆ ಪವಿತ್ರಾಗೌಡ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, ಈ ವೇಳೆ ಹೆಡ್ ಫೋನ್ ಬಳಕೆ ಮಾಡಿದ್ದಕ್ಕೆ ಜಡ್ಜ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಚಾರಣೆ ವೇಳೆ ಪ್ರಕರಣದ ಆರೋಪಿ ಪವಿತ್ರಾಗೌಡ ತಡವಾಗಿ ವಿಡಿಯೋ ಕಾನ್ಫರೆನ್ಸ್‌ಗೆ ಹಾಜರಾಗಿದ್ದಲ್ಲದೆ, ಹೆಡ್‌ಫೋನ್ ಧರಿಸಿರುವುದು ನ್ಯಾಯಾಧೀಶರ ಗಮನಕ್ಕೆ ಬಂದಿದೆ. ಇದರಿಂದ ಅಸಮಾಧಾನಗೊಂಡ ಜಡ್ಜ್, ಜೈಲು ಅಧಿಕಾರಿಗಳ ವಿರುದ್ಧ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

Pavithra Gowda
ಪ್ರಜ್ವಲ್ ಗೆ ಮೊದಲೇ ವಾರ್ನ್ ಮಾಡಿದ್ದೆ, ದರ್ಶನ್ ಸೆಲ್ ನಲ್ಲಿ ಏನೂ ಸಿಕ್ಕಿಲ್ಲ-ಅಲೋಕ್ ಕುಮಾರ್, ಸರ್ಕಾರ ತನಿಖೆ ಮಾಡಲಿ- H D ರೇವಣ್ಣ-Video

ತಡವಾಗಿ ಬಂದಿದ್ದಲ್ಲದೇ ಹೆಡ್ ಫೋನ್ ಬಳಕೆ

ಕೋರ್ಟ್ ಕಲಾಪ ಪ್ರಕ್ರಿಯೆ ನಡೆಯುತ್ತಿದ್ದಂತೆ ಪವಿತ್ರಾಗೌಡ ತಡವಾಗಿ ವಿಸಿ ಲೈನ್ ಗೆ ಬಂದಿದ್ದಾರೆ. ಈ ವೇಳೆ ಅವರು ಹೆಡ್‌ಫೋನ್ ಬಳಸಿರುವುದನ್ನು ಜಡ್ಜ್ ಗಮನಿಸಿದ್ದಾರೆ.

ಈ ವೇಳೆ "ವಿಚಾರಣೆಗೆ ತಡವಾಗಿ ಹಾಜರಾಗಿದ್ದೇಕೆ? ಮಹಿಳಾ ಸೆಲ್‌ನಲ್ಲಿ ಹೆಡ್‌ಫೋನ್ ಬಳಸಲು ಯಾರು ಅನುಮತಿ ನೀಡಿದ್ದು? ಮಹಿಳಾ ಸೆಲ್‌ನಲ್ಲಿ ಹೆಡ್‌ಫೋನ್‌ಗಳನ್ನು ನೀಡಲಾಗುತ್ತದೆಯೇ? ಜೈಲಿನಲ್ಲಿ ಹೆಡ್‌ಫೋನ್ ಬಳಸಲು ಪರ್ಮಿಷನ್ ಇದೆಯಾ?" ಎಂದು ಜಡ್ಜ್ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

ನಾನು ಹೆಡ್‌ಫೋನ್ ಬಳಸಿಲ್ಲ ಎಂದ ಪವಿತ್ರಾಗೌಡ

ನ್ಯಾಯಾಧೀಶರು ಪ್ರಶ್ನೆ ಮಾಡುತ್ತಿದ್ದಂತೆ, ತಾವು ಹೆಡ್‌ಫೋನ್ ಬಳಸಿಲ್ಲ ಎಂದು ಪವಿತ್ರಾಗೌಡ ಸ್ಪಷ್ಟನೆ ನೀಡಲು ಯತ್ನಿಸಿದರು. ಆದರೆ, ಇದನ್ನು ಒಪ್ಪದ ಜಡ್ಜ್, "ನೀವು ಹೆಡ್‌ಫೋನ್ ಬಳಸಿರುವುದನ್ನು ನಾನು ಖುದ್ದು ಗಮನಿಸಿದ್ದೇನೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ

ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಜೈಲು ಅಧಿಕಾರಿಗಳ ಮೇಲ್ವಿಚಾರಣೆ ಹಾಗೂ ಸಡಿಲ ಭದ್ರತೆಯ ಕುರಿತು ನ್ಯಾಯಾಲಯ ಗಂಭೀರ ಕಾಳಜಿ ವ್ಯಕ್ತಪಡಿಸಿದ್ದು, ಕೂಡಲೇ ಈ ಕುರಿತು ಜೈಲಾಧಿಕಾರಿಗಳಿಂದ ಲಿಖಿತ ಸ್ಪಷ್ಟೀಕರಣ ನೀಡುವಂತೆ ನ್ಯಾಯಾಧೀಶರಾದ ಸುಜಾತ ಎಂ. ಸಂಬ್ರಾಣಿ ಅವರು ಆದೇಶಿಸಿದರು.

Pavithra Gowda
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com