ಎಂಜಿನ್ ವೈಫಲ್ಯ, ನಡುಸಮುದ್ರದಲ್ಲಿ ಕೆಟ್ಟು ನಿಂತ ಬೋಟ್; ರಕ್ಷಣೆಗೆ ಧಾವಿಸಿದ ಕೋಸ್ಟಲ್ ಗಾರ್ಡ್, 9 ಮೀನುಗಾರರ ರಕ್ಷಣೆ! Video

ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಹಾಗೂ ಒರಟಾದ ಅಲೆಗಳ ನಡುವೆಯೂ ಕೋಸ್ಟ್ ಗಾರ್ಡ್ ಸಿಬ್ಬಂದಿ ದೋಣಿಯನ್ನು ಪತ್ತೆಹಚ್ಚಿ, ಅದರಲ್ಲಿದ್ದ ಎಲ್ಲ 9 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದರು.
Coast Guard Rescues 9 Fishermen After Boat Drifts
ಮೀನುಗಾರರ ರಕ್ಷಿಸಿದ ಭಾರತೀಯ ನೌಕಾಪಡೆ
Updated on

ಮಂಗಳೂರು: ನಡುಸಮುದ್ರದಲ್ಲಿ ಎಂಜಿನ್ ಕೈಕೊಟ್ಟು ಒರಟು ಸಮುದ್ರದಲ್ಲಿ ತೇಲಾಡುತ್ತಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ 9 ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಸುರಕ್ಷಿತವಾಗಿ ರಕ್ಷಿಸಿದೆ.

ನವ ಮಂಗಳೂರು ಕರಾವಳಿಯಿಂದ ಸುಮಾರು 20 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕಾ ದೋಣಿ Kaarunyam (IND-TN-15-MM-7971) ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ದಿಕ್ಕುತೋಚದೆ ತೇಲಾಡುತ್ತಿತ್ತು.

ಮಾಹಿತಿ ಲಭಿಸಿದ ಬೆನ್ನಲ್ಲೇ ಭಾರತೀಯ ಕೋಸ್ಟ್ ಗಾರ್ಡ್‌ನ C-448 ಹಡಗು ರಾತ್ರಿ ವೇಳೆ ಕ್ಷಿಪ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು.

Coast Guard Rescues 9 Fishermen After Boat Drifts
ವಿಜಯಪುರ ವಿಮಾನ ನಿಲ್ದಾಣದ ಹಾರಾಟಕ್ಕೆ ಮುಹೂರ್ತ ಫಿಕ್ಸ್; ಜನವರಿ 2027 ರಿಂದ ವಿಮಾನ ಹಾರಾಟ ಆರಂಭ..!

ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಹಾಗೂ ಒರಟಾದ ಅಲೆಗಳ ನಡುವೆಯೂ ಕೋಸ್ಟ್ ಗಾರ್ಡ್ ಸಿಬ್ಬಂದಿ ದೋಣಿಯನ್ನು ಪತ್ತೆಹಚ್ಚಿ, ಅದರಲ್ಲಿದ್ದ ಎಲ್ಲ 9 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದರು.

ನಂತರ ರಕ್ಷಿಸಲ್ಪಟ್ಟ ಎಲ್ಲರನ್ನೂ ಮಂಗಳೂರು ಹಳೆ ಬಂದರಿಗೆ ಸುರಕ್ಷಿತವಾಗಿ ಕರೆತರಲಾಯಿತು. ಕೋಸ್ಟ್ ಗಾರ್ಡ್‌ನ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದ್ದು, 9 ಮಂದಿ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com