'ಎಂ ಜಿ ರಸ್ತೆಗೂ ಕೊಳಗೇರಿ ಪ್ರದೇಶಕ್ಕೂ ತೆರಿಗೆ ಒಂದೇನಾ? ನನ್ನ ಮುಂದೆ ಅತಿ ಜಾಣ್ಮೆ ತೋರಿಸಬೇಡಿ' : ಅಧಿಕಾರಿಗಳ ಮೇಲೆ ರೇಗಿದ ಸಚಿವ ಕೃಷ್ಣ ಭೈರೇಗೌಡ ; Video

ಕರ್ನಾಟಕ ಹಾಗೂ ದೇಶಕ್ಕೆ ಬೆಂಗಳೂರು ‘ಚಿನ್ನದ ಮೊಟ್ಟೆ ಇಡುವ ಕೋಳಿ’ಯಂತಿದ್ದು, ನಗರದ ಅಭಿವೃದ್ಧಿಯನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಅದನ್ನು ರಕ್ಷಿಸುವುದು ಪ್ರತಿಯೊಬ್ಬರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.
Minister Krishna Byre Gowda
ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ
Updated on

ಅಧಿಕಾರಿಗಳು ತಮ್ಮ ಎಲ್ಲ ನಿರ್ಧಾರಗಳು ಹಾಗೂ ಕಾರ್ಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಕೇಂದ್ರದಲ್ಲಿರಿಸಿಕೊಳ್ಳಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕರೆ ನೀಡಿದರು. ಬೆಂಗಳೂರಿನ ಅಭಿವೃದ್ಧಿಗೆ ವೃತ್ತಿಪರ ಪ್ರಾಮಾಣಿಕತೆ, ಬಲಿಷ್ಠ ವ್ಯವಸ್ಥೆಗಳು ಹಾಗೂ ಉತ್ತಮ ಆಡಳಿತದ ಅಗತ್ಯವಿದೆ ಎಂದು ಅವರು ಹೇಳಿದರು.

ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಕೃಷ್ಣ ಭೈರೇಗೌಡ, ತಮ್ಮ ಜ್ಞಾನ, ಅನುಭವ ಹಾಗೂ ಪರಿಣತಿಯನ್ನು ಬಳಸಿಕೊಂಡು ಉತ್ತಮ ಪರಿಹಾರಗಳನ್ನು ಕಂಡುಕೊಳ್ಳಬೇಕು ಮತ್ತು ಸಾರ್ವಜನಿಕ ಆಡಳಿತದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಹೇಳಿದರು.

ಸೂಕ್ತ ತಪಾಸಣೆ ಹಾಗೂ ನಿಯಂತ್ರಣ ವ್ಯವಸ್ಥೆಗಳು ಅತ್ಯಗತ್ಯವಾಗಿದ್ದು, ನಾಗರಿಕರಿಗೆ ಅನುಕೂಲವಾಗುವ ಕೆಲಸಗಳನ್ನು ಕೈಗೊಳ್ಳುವುದೇ ಮುಖ್ಯ ಗುರಿಯಾಗಬೇಕು ಎಂದು ಅವರು ತಿಳಿಸಿದರು.

Minister Krishna Byre Gowda
ಖಾಲಿ ಸೈಟ್ ಕ್ಲೀನ್ ಮಾಡದೆ ಹಾಗೆ ಬಿಟ್ಟಿದ್ದೀರಾ? ಮಾಲೀಕರಿಗೆ ಬೀಳಲಿದೆ ಭಾರೀ ದಂಡ; GBA ಕಠಿಣ ಕ್ರಮ

ಎಂಜಿ ರಸ್ತೆಗೆ ಮತ್ತು ಕೊಳಗೇರಿ ಪ್ರದೇಶಕ್ಕೆ ವಾಣಿಜ್ಯ ತೆರಿಗೆ ಒಂದೇನಾ? ನನ್ನ ಮುಂದೆ ಅತಿಯಾದ ಜಾಣ್ಮೆ ತೋರಿಸಬೇಡಿ -ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು Greater Bengaluru Authority (GBA) ವ್ಯಾಪ್ತಿಯ ಐದು ನಿಗಮಗಳ ಪರಿಶೀಲನಾ ಸಭೆಯಲ್ಲಿ ಚಾಮರಾಜಪೇಟೆ ಕಂದಾಯ ಕಚೇರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿಗಳಿಲ್ಲ. ಸಾರ್ವಜನಿಕ ಕೆಲಸಗಳು ಸರಿಯಾಗಿ ನಡೆಯಬೇಕು ಎಂಬುದಷ್ಟೇ ನನಗೆ ಮುಖ್ಯ. ಅಧಿಕಾರಿಗಳು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಅಂತಿಮವಾಗಿ ಉತ್ತಮ ಆಡಳಿತ ನೀಡಲು ಹಾಗೂ ಬೆಂಗಳೂರನ್ನು ಇನ್ನಷ್ಟು ಉತ್ತಮ ನಗರವನ್ನಾಗಿ ರೂಪಿಸಲು ನೆರವಾಗಬೇಕು ಎಂದು ಅವರು ಹೇಳಿದರು.

ತಮ್ಮ ಆಡಳಿತಾತ್ಮಕ ಜವಾಬ್ದಾರಿಗಳ ಅವಧಿಯಲ್ಲಿ ಇಲಾಖೆಗಳ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅವುಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸುಧಾರಣೆಗಳನ್ನು ಜಾರಿಗೆ ತರಲು ಪ್ರಯತ್ನಿಸಿರುವುದಾಗಿ ಹೇಳಿದರು.

ಸವಾಲಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಅಧಿಕಾರಿಗಳು, ಆ ಜವಾಬ್ದಾರಿಗಳನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವ ವೇಳೆಗೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅರ್ಥಪೂರ್ಣ ಸುಧಾರಣೆಗಳು ಗೋಚರಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಅಧಿಕಾರಿಗಳು ಹೆಮ್ಮೆಪಡುವಂತಹ ಹಾಗೂ ಸಮಾಜದ ಗೌರವ ಗಳಿಸುವಂತಹ ವ್ಯವಸ್ಥೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಇದೇ ರೀತಿಯ ವಿಧಾನವನ್ನು ಬೆಂಗಳೂರಿನ ಅಭಿವೃದ್ಧಿಗೂ ಅನ್ವಯಿಸಿದರೆ, ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದಿಂದ ನಗರದಲ್ಲಿ ಅರ್ಥಪೂರ್ಣ ಹಾಗೂ ಶಾಶ್ವತ ಸುಧಾರಣೆಗಳನ್ನು ತರಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲಕ್ಕಿಂತಲೂ ಸಾರ್ವಜನಿಕ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡೋಣ, ನಾವು ಕಾರ್ಯನಿರ್ವಹಿಸುವ ವ್ಯವಸ್ಥೆಗಳನ್ನು ಬಲಪಡಿಸೋಣ ಮತ್ತು ನಾವು ಕಂಡುಕೊಂಡ ಬೆಂಗಳೂರಿಗಿಂತ ಉತ್ತಮ ಬೆಂಗಳೂರನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗೋಣ ಎಂದು ಹೇಳಿದರು.

ಕರ್ನಾಟಕ ಮತ್ತು ದೇಶಕ್ಕೆ ಬೆಂಗಳೂರು ‘ಚಿನ್ನದ ಮೊಟ್ಟೆ ಇಡುವ ಕೋಳಿ’: ಕೃಷ್ಣ ಭೈರೇಗೌಡ ಕರ್ನಾಟಕ ಹಾಗೂ ದೇಶಕ್ಕೆ ಬೆಂಗಳೂರು ‘ಚಿನ್ನದ ಮೊಟ್ಟೆ ಇಡುವ ಕೋಳಿ’ಯಂತಿದ್ದು, ನಗರದ ಅಭಿವೃದ್ಧಿಯನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಅದನ್ನು ರಕ್ಷಿಸುವುದು ಪ್ರತಿಯೊಬ್ಬರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Greater Bengaluru Authority (GBA) ವ್ಯಾಪ್ತಿಯ ಐದು ನಿಗಮಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಬೆಂಗಳೂರಿನ ಬೆಳವಣಿಗೆಯನ್ನು ಸಂರಕ್ಷಿಸುವುದರ ಜತೆಗೆ ನಗರದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com