ಬೆಂಗಳೂರು ರಸ್ತೆಗಳ ಸ್ವಚ್ಛತೆಗೆ ಹೈಟೆಕ್ ಟಚ್: ಪೊರಕೆಗಳ ಬದಲಿಗೆ ಯಂತ್ರ ಬಳಕೆ, ಶುಚಿಗೊಳಿಸುವ ಯಂತ್ರಗಳಿಗೆ ಪ್ರಾಯೋಗಿಕ ಚಾಲನೆ

ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ‘ಯಾಂತ್ರೀಕೃತ ಸ್ವಚ್ಛತಾ ಯಂತ್ರಗಳ’ ಬಳಕೆಗೆ ಚಾಲನೆ ನೀಡಲಾಗಿದೆ.
North City Corporation Commissioner Pommala Sunil Kumar operates a mechanical sweeper on Thursday.
ಯಂತ್ರಕ್ಕೆ ಚಾಲನೆ ನೀಡಿದ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್
Updated on

ಬೆಂಗಳೂರು: ನಗರದಲ್ಲಿನ ರಸ್ತೆ ಹಾಗೂ ಬೀದಿಗಳ ಸ್ವಚ್ಛತೆಗೆ ಸಂಪ್ರದಾಯಿಕ ಪೊರಕೆಗಳ ಬದಲಿಗೆ ಯಂತ್ರಗಳನ್ನು ಬಳಸುವ ನೂತನ ಪ್ರಯೋಗವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಗುರುವಾರ ಆರಂಭಿಸಿದೆ.

ಸಹಕಾರನಗರದ 1ನೇ ಮುಖ್ಯರಸ್ತೆಯಲ್ಲಿ ಯಾಂತ್ರೀಕೃತ ಪ್ರಾಯೋಗಿಕ ಸ್ವಚ್ಛತಾ ಕಾರ್ಯಕ್ಕೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಗುರುವಾರ ಚಾಲನೆ ನೀಡಿದರು.

ಈ ವೇಳೆ ಸುನೀಲ್ ಕುಮಾರ್ ಅವರು ಸ್ವತಃ ಯಾಂತ್ರಿಕ ಸ್ವಚ್ಛತಾ ಯಂತ್ರಗಳನ್ನು ಚಾಲನೆ ಮಾಡಿ, ಅವುಗಳ ಕಾರ್ಯಕ್ಷಮತೆ, ಸಾಧಕ-ಬಾಧಕಗಳನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ‘ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ‘ಯಾಂತ್ರೀಕೃತ ಸ್ವಚ್ಛತಾ ಯಂತ್ರಗಳ’ ಬಳಕೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

North City Corporation Commissioner Pommala Sunil Kumar operates a mechanical sweeper on Thursday.
ಕಸ ಗುಡಿಸಲು 613 ಕೋಟಿ ರೂ ವೆಚ್ಚದಲ್ಲಿ ಬಾಡಿಗೆ ಯಂತ್ರ: ಸರ್ಕಾರದ ನಡೆ ಸಮರ್ಥಿಸಿಕೊಂಡ GBA

ಕಸ ಗುಡಿಸುವ ಯಂತ್ರಗಳು, ಬ್ಲೋವರ್ ಮಷಿನ್, ರಸ್ತೆ ಕಸವನ್ನು ಶೇಖರಣೆ ಮಾಡಲು ಟ್ರಾಲಿ ಡಸ್ಟ್ ಬಿನ್‌ಗಳನ್ನೂ ಉಪಯೋಗಿಸಲಾಗುತ್ತದೆ. ಸುರಕ್ಷತಾ ದೃಷ್ಟಿಯಿಂದ ಟ್ರಾಫಿಕ್ ಕೋನ್‌ಗಳನ್ನು ಸಹ ಖರೀದಿಸಲಾಗಿದೆ ಎಂದು ತಿಳಿಸಿದರು.

ಪೌರಕಾರ್ಮಿಕರು ಯಂತ್ರಗಳನ್ನು ಸದ್ಬಳಕೆ ಮಾಡಿಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು. ಇದರ ಸಾಧಕ ಬಾಧಕಗಳನ್ನು ಗಮನಿಸಿ ಇನ್ನಷ್ಟು ಯಂತ್ರಗಳನ್ನು ಖರೀದಿಸಲು ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದರು.

ಯಂತ್ರಗಳ ಬಳಕೆಯ ಕುರಿತು ಪೌರಕಾರ್ಮಿಕರಿಗೆ ಮಾರ್ಗದರ್ಶನ ನೀಡಲಾಗಿದ್ದು, ಯಂತ್ರಗಳನ್ನು ಹೇಗೆ ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಈ ಯೋಜನೆಗಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ವಿವಿಧ ಸ್ವಚ್ಛತಾ ಉಪಕರಣಗಳನ್ನು ಖರೀದಿಸಿದೆ. 33 ಕಸ ಗುಡಿಸುವ ಯಂತ್ರಗಳು. 14 ಬ್ಲೋಯರ್‌ಗಳು, 35 ಟ್ರಾಲಿ ಡಸ್ಟ್‌ಬಿನ್‌ಗಳು, 23 ಜೋಡಿ ಟ್ರಾಫಿಕ್ ಕೋನ್‌ಗಳನ್ನು ಖರೀದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com