

ಬೆಂಗಳೂರು: ಹೊಸ ವರ್ಷಾರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು ಟಿಕೆಟ್ ದರದಲ್ಲಿ ಭಾರಿ ರಿಯಾಯಿತಿ ಘೋಷಿಸಿದೆ.
ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಟಿಕೆಟ್ ದರದಲ್ಲಿ ಶೇ.5ರಿಂದ ಶೇ.15ರಷ್ಟು ಟಿಕೆಟ್ ದರ ರಿಯಾಯಿತಿ ಘೋಷಣೆ ಮಾಡಿದೆ. ಎಲ್ಲಾ ರೀತಿಯ KSRTC ಬಸ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10 ರಿಂದ ಶೇ. 15ರ ವರೆಗೆ ಪ್ರಯಾಣದರಗಳನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಇದು ಇಂದಿನಿಂದ (ಜನವರಿ 5) ಜಾರಿಗೆ ಬಂದಿದೆ.
ಕೆಎಸ್‌ಆರ್‌ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಅಥವಾ ಪ್ರೀಮಿಯರ್ ಬಸ್‌ಗಳ ಪ್ರಯಾಣ ದರಗಳಲ್ಲಿ 5-15% ರಿಯಾಯಿತಿ ಘೋಷಿಸಿದೆ. ಜನವರಿಯಿಂದ ಮಾರ್ಚ್‌ವರೆಗೆ ಪ್ರಯಾಣಿಕರ ದಟ್ಟಣೆ ಕಡಿಮೆಯಿರುವ ಹಿನ್ನಲೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಆದರೆ ಈ ದರ ವಾರದ ದಿನಗಳಲ್ಲಿ ಮಾತ್ರ ಅನ್ವಯವಾಗುತ್ತದೆ. ವಾರಂತ್ಯಗಳಲ್ಲಿ ಅನ್ವಯಿಸುವುದಿಲ್ಲ.
KSRTC ಬಸ್ ನಲ್ಲಿ ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ.
ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರಗಳಲ್ಲಿ ಶೇಕಡ 5 ರಿಂದ 15% ರವರೆಗೆ ರಿಯಾಯಿತಿ ನೀಡಲಾಗಿದೆ.
ಯಾವ ಬಸ್ ಗಳಲ್ಲಿ ದರ ಕಡಿತ
ವೋಲ್ವೋ, ಅಂಬಾರಿ, ಕ್ಲಬ್ ಕ್ಲಾಸ್, ಪಲ್ಲಕಿ ಉತ್ಸವ, ಫ್ಲೈ ಬಸ್, ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಟಿಕೆಟ್ ದರವನ್ನು ಆಯ್ದ ಮಾರ್ಗಗಳಲ್ಲಿ ಕಡಿಮೆ ಮಾಡಲಾಗಿದೆ.
ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ ವಿಭಾಗಗಳಲ್ಲೂ ದರ ಅನ್ವಯವಾಗಲಿದೆ. ಜೊತೆಗೆ ಬೆಂಗಳೂರಿನಿಂದ ಇತರ ರಾಜ್ಯಗಳಿಗೆ ಹೊರಡುವ ತಿರುಪತಿ, ಹೈದರಾಬಾದ್, ಪಾಂಡಿಚೇರಿ, ಊಟಿ, ಚೆನೈ ಸೇರಿದಂತೆ ಇಂಟರ್ ಸ್ಟೇಟ್ ಪ್ರೀಮಿಯರ್ ಬಸ್‌ಗಳ ದರ ಕಡಿತವಾಗಿದೆ.
Advertisement