Pycho Amul
ವಿಕೃತ ಕಾಮಿ ಅಮುಲ್

ಬೆಂಗಳೂರು: ಮಹಿಳೆಯರ ಒಳ ಉಡುಪು ಕದ್ದು ಧರಿಸಿ ವಿಕೃತಾನಂದ; ಪೊಲೀಸರಿಂದ ಸೈಕೋ ಬಂಧನ

ಜನವರಿ 19 ರಂದು ವಿದ್ಯಾ ನಗರದ ನಿವಾಸಿಗಳು ವ್ಯಕ್ತಿಯೊಬ್ಬ ಮನೆಯ ಮೇಲ್ಛಾವಣಿ ಮತ್ತು ಅಂಗಳದಲ್ಲಿ ಒಣಗಲು ಬಿಟ್ಟಿರುವ ಒಳ ಉಡುಪುಗಳನ್ನು ಕದ್ದುಕೊಂಡು ಹೋಗುತ್ತಿದ್ದಾನೆ ಎಂದು ದೂರು ನೀಡಿದ್ದರು.
Published on

ಮಹಿಳೆಯರ ಒಳ ಉಡುಪುಗಳನ್ನು ಕದ್ದ ಆರೋಪದ ಮೇಲೆ ಬೆಂಗಳೂರು ಮೂಲದ ವಿಕೃತ ವ್ಯಕ್ತಿಯನ್ನು ಬಂಧಿಸಲಾಗಿದೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸರು, ಮಹಿಳೆಯರ ಒಳ ಉಡುಪುಗಳನ್ನು ಕದ್ದ ಆರೋಪದ ಮೇಲೆ 23 ವರ್ಷದ ವಿಕೃತಕಾಮಿಯನ್ನು ಬಂಧಿಸಿದ್ದಾರೆ.

ಜನವರಿ 19 ರಂದು ವಿದ್ಯಾ ನಗರದ ನಿವಾಸಿಗಳು ವ್ಯಕ್ತಿಯೊಬ್ಬ ಮನೆಯ ಮೇಲ್ಛಾವಣಿ ಮತ್ತು ಅಂಗಳದಲ್ಲಿ ಒಣಗಲು ಬಿಟ್ಟಿರುವ ಒಳ ಉಡುಪುಗಳನ್ನು ಕದ್ದುಕೊಂಡು ಹೋಗುತ್ತಿದ್ದಾನೆ ಎಂದು ದೂರು ನೀಡಿದ್ದರು.

Pycho Amul
Video: ನಡೆದು ಹೋಗುತ್ತಿದ್ದ ಯುವತಿ ನೋಡಿ ಆಕೆಯ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡ ವಿಕೃತ ಕಾಮಿ!

ಸುಳಿವು ದೊರೆತ ತಕ್ಷಣ, ಹೊಯ್ಸಳ ಗಸ್ತು ತಂಡವು ಕಳ್ಳತನದ ಕೃತ್ಯದಲ್ಲಿದ್ದಾಗ ಆರೋಪಿಯನ್ನು ಬಂಧಿಸಿದೆ. ಆತನನ್ನು ಹೆಬ್ಬಗೋಡಿಯ ಗಣೇಶ ದೇವಸ್ಥಾನದ ಬಳಿಯ ಸೋಮರಾಜ್ ಕಟ್ಟಡದ ನಿವಾಸಿ ಅಮಲ್ ಎನ್ ಅಲಿಯಾಸ್ ಅಜಿಕುಕುಮಾರ್ (23ವ) ಎಂದು ಗುರುತಿಸಲಾಗಿದೆ.

ನಂತರ ಆತನ ವಾಸಸ್ಥಾನಕ್ಕೆ ಹೋಗಿ ಶೋಧ ನಡೆಸಿದಾಗ ಮಹಿಳೆಯರ ಒಳ ಉಡುಪುಗಳ ಸಂಗ್ರಹ ಮತ್ತು ಆತ ಕದ್ದ ವಸ್ತುಗಳನ್ನು ಧರಿಸಿರುವ ಹಲವಾರು ಫೋಟೋಗಳು ಸಿಕ್ಕಿವೆ.

ಹೆಬ್ಬಗೋಡಿ ನಿವಾಸಿ ಆರೋಪಿ ಆರು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಸ್ನೇಹಿತನ ಕೋಣೆಯಲ್ಲಿ ವಾಸಿಸುತ್ತಿದ್ದ. ಅವನಿಗೆ ಇನ್ನೂ ಕೆಲಸ ಸಿಕ್ಕಿರಲಿಲ್ಲ.

Pycho Amul
ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್‌ ನಕಾರ

ಹಗಲು ಅವನು ಹೆಬ್ಬಗೋಡಿ ಪ್ರದೇಶದಲ್ಲಿ ಸುತ್ತಾಡುತ್ತಾ ಮನೆಗಳ ಹೊರಗೆ ನೇತುಹಾಕಿದ ಒಳ ಉಡುಪುಗಳನ್ನು, ಪೇಯಿಂಗ್ ಗೆಸ್ಟ್ ವಸತಿಗಳಿಗೆ ಹೋಗಿ ಕೂಡ ಕದಿಯುತ್ತಿದ್ದ.

ವಿಕೃತ ಕಾಮಿ ಮಹಿಳೆಯರ ಒಳ ಉಡುಪುಗಳನ್ನು ಕದ್ದುಕೊಂಡು ಹೋಗಿ ನಂತರ ಅವುಗಳನ್ನು ಧರಿಸಿ ಫೋಟೋಗೆ ಫೋಸ್ ಕೊಡುತ್ತಿದ್ದ. ಇದು ಮಹಿಳೆಯರ ನಮ್ರತೆ ಮತ್ತು ಘನತೆಗೆ ಉದ್ದೇಶಪೂರ್ವಕ ಅವಮಾನ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 303(2), 329(4), ಮತ್ತು 79 ರ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com