

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಷೋ ಬಳಿಕ ಸ್ಪರ್ಧಿ ದ್ರುವಂತ್ ತನ್ನನ್ನು ಭೇಟಿಯಾಗಿಲ್ಲ ಎಂದು ಮತ್ತೋರ್ವ ಸ್ಪರ್ಧಿ ಮಲ್ಲಮ್ಮ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಹಿರಿಯ ಸ್ಪರ್ಧಿ ಎಂಬ ಕಾರಣಕ್ಕೇ ಮನೆಮಂದಿಗೆಲ್ಲಾ ಅಚ್ಚುಮೆಚ್ಚಾಗಿದ್ದ ಮಲ್ಲಮ್ಮ ರಿಯಾಲಿಟಿ ಷೋಯಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಪ್ರಮುಖವಾಗಿ ತಮ್ಮ ಮತ್ತು ಮತ್ತೋರ್ವ ಸ್ಪರ್ಧಿ ದ್ರುವಂತ್ ನಡುವಿನ ಸ್ನೇಹದ ಕುರಿತು ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಮಲ್ಲಮ್ಮ ಅವರು ಧ್ರುವಂತ್ ಜೊತೆ ಹೆಚ್ಚು ಆತ್ಮೀಯರಾಗಿದ್ರು. ಮಲ್ಲಮ್ಮ ಅವರನ್ನು ಧ್ರುವಂತ್ ತಾಯಿ ಎಂದೇ ಕರೆಯುತ್ತಿದ್ದರು.
ಅಲ್ಲದೆ ಯಾವುದೇ ಸಂದರ್ಭದಲ್ಲೂ ನಾನು ಮಲ್ಲಮ್ಮನ ಜೊತೆ ನಿಲ್ಲುತ್ತೇನೆ. ಅವರ ಗೆಲುವಿಗೆ ಸಹಕರಿಸುತ್ತೇನೆ ಎನ್ನುತ್ತಿದ್ದರು.
ಆದರೆ ಮಲ್ಲಮ್ಮ ಎಲಿಮಿನೇಟ್ ಆಗಿ ನಂತರ ಅತಿಥಿಯಾಗಿ ಒಳಬಂದಾಗ ಧ್ರುವಂತ್ಗೆ ಮೊದಲಿನ ಆಪ್ತತೆ ಕಾಣಿಸಲೇ ಇಲ್ಲ. ಮನೆಯಲ್ಲಿದ್ದಾಗಲೇ ದ್ರುವಂತ್ ಮಲ್ಲಮ್ಮ ಕುರಿತು ಅಪಸ್ಪರ ನುಡಿದ್ದರು.
ಇದೀಗ ಷೋಯಿಂದ ಹೊರಬಂದ ಬಳಿಕ ಮಲ್ಲಮ್ಮ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಸುದ್ದಿವಾಹಿನಿ ಜೊತೆ ಮಾತಾನಾಡಿದ ಮಲ್ಲಮ್ಮ 'ಬಿಗ್ ಬಾಸ್ ಪೂರ್ಣಗೊಂಡು ಇಷ್ಟ ದಿನ ಆದರೂ ಧ್ರುವಂತ್ ತಮ್ಮನ್ನು ಸಂಪರ್ಕಿಸಿಲ್ಲ' ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಮಲ್ಲಮ್ಮ ಅವರು ಬೇಸರ ಹೊರಹಾಕಿದ್ದಾರೆ.
ಯಾರು ಈ ಮಲ್ಲಮ್ಮ..?
ಮಲ್ಲಮ್ಮ ಉತ್ತರ ಕರ್ನಾಟಕದ ಅಪ್ಪಟ ಹಳ್ಳಿಯ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆ ಅಂತಾ ಬೆಂಗಳೂರಿಗೆ ಬಂದು, ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು.
ತಮ್ಮದೇ ಸ್ವಂತ ಇನ್ಸ್ಟಾಗ್ರಾಮ್, ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. mallamma_talks ಎಂಬ ಸೋಶಿಯಲ್ ಮೀಡಿಯಾ ಖಾತೆ ಹೊಂದಿರೋ ಇವರು, ಇನ್ಸ್ಟಾಗ್ರಾಮ್ನಲ್ಲಿ 3.05 ಲಕ್ಷ ಮಂದಿ ಫಾಲೋವರ್ಸ್ ಹೊಂದಿದ್ದಾರೆ.
Advertisement