ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆನ್ನಲ್ಲೆ ಇದೀಗ KPCC ಅಧ್ಯಕ್ಷ ಬಿ.ಕೆ ಹರಿಪ್ರಸಾದ್​ಗೆ ಲೀಗಲ್ ನೋಟಿಸ್​!

RSS ಸ್ವಯಂಸೇವಕರೊಬ್ಬರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ KPCC ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ಗೆ ಲೀಗಲ್ ನೋಟಿಸ್​ ನೀಡಲಾಗಿದೆ.
BK Hariprasad
ಬಿ.ಕೆ.ಹರಿಪ್ರಸಾದ್
Updated on

ಬೆಂಗಳೂರು: RSS ಸ್ವಯಂಸೇವಕರೊಬ್ಬರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ KPCC ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ಗೆ ಲೀಗಲ್ ನೋಟಿಸ್​ ನೀಡಲಾಗಿದೆ.

GBA ಚುನಾವಣಾ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಅವರು, ಪಾಕ್ ಅಧಿಕಾರಿಗಳ ಜೊತೆ ಗೌಪ್ಯಸಭೆ ನಡೆಸಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಆರೋಪಿಸಿದ್ದರು. ಬಿಕೆ ಹರಿಪ್ರಸಾದ್ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಗರು ಕೋರ್ಟ್ ಮೆಟ್ಟಿಲೇರಿದ್ದರು. ರಾಮ್ ಮಾಧವ್ ಹೆಸರಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸಿರುವುದಲ್ಲದೆ ಅವರ ಇಮೇಜ್ ಮತ್ತು ಖ್ಯಾತಿಯನ್ನು ಕುಗ್ಗಿಸಲು ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್​ಎಸ್​ ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಇನ್ನು ಹರಿಪ್ರಸಾದ್ ಅವರು,​​ ರಾಮ್ ಮಾಧವ್​ಗೆ ಕ್ಷಮೆ ಕೇಳಬೇಕೆಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

BK Hariprasad
RSS ಗೆ ಬಿಗ್ ಶಾಕ್: ನಾನು ಇರೋವರೆಗೂ ರಾಜ್ಯದಲ್ಲಿ ​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ; ಪ್ರಿಯಾಂಕ್​​ ಖರ್ಗೆ ಖಡಕ್ ಸೂಚನೆ

ಹಿಲ್ಟನ್ ಹೋಟೆಲ್​ನಲ್ಲಿ ಪಾಕ್​​ ISI ಮಾಜಿ ಮೇಜರ್ ಜನರಲ್ ಜೊತೆ ರಾಮ್ ಮಾಧವ್ ರಹಸ್ಯ ಮೀಟಿಂಗ್​​ ನಡೆಸಿದ್ದು, ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂದು ಸ್ಪಷ್ಟ ಪಡಿಸಬೇಕು. ಅಲ್ಲದೆ ಕೊಲಂಬೋ ಹಾಗೂ ಲಂಡನ್​ನಲ್ಲೂ 4 ಸಭೆಗಳನ್ನು ಮಾಡಿದ್ದಾರೆ. ವಿದೇಶಿ ವ್ಯವಹಾರಗಳನ್ನು ​ವಿದೇಶಾಂಗ ಸಚಿವಾಲಯ ನೋಡಿಕೊಳ್ಳುತ್ತದೆ. ಆದರೆರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com