ರಾಹುಲ್ ಗಾಂಧಿಗೆ ನನ್ನ ಬೆಂಬಲ; PM ಮೋದಿಗೆ ಅಹಂಕಾರ, ಅವರು ಹಿಂದೂ ಧರ್ಮದ ಬೋಧನೆಗಳಂತೆ ನಡೆದುಕೊಳ್ಳುತ್ತಿಲ್ಲ: ನಟಿ ರಮ್ಯಾ

ತಮ್ಮ ಭವಿಷ್ಯ ಸುರಕ್ಷಿತವಾಗಿರಬೇಕು ಎಂದು ವಿದ್ಯಾರ್ಥಿಗಳು ಕೇಳುತ್ತಿರುವುದು ಸಂಪೂರ್ಣ ನ್ಯಾಯಸಮ್ಮತ. ಇಂದು ನಮ್ಮ ದೇಶದಲ್ಲಿ ಅಸಮಾನತೆ ಬಗ್ಗೆ ತುಂಬಾ ಆತಂಕವಿದೆ.
ramya
ರಮ್ಯಾ
Updated on

ಬೆಂಗಳೂರು: ಜು.20 ರಂದು ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ಹೊಣೆಹೊತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು ಹಾಗೂ ಕೇವಲ ನೀಟ್ ಮಾತ್ರವಲ್ಲದೆ ಇತರೆ ಪ್ರಶ್ನೆಪತ್ರಿಕೆ ಸೋರಿಕೆಯ ಜವಾಬ್ದಾರಿ ಹೊತ್ತ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿರುವುದು ಸರಿಯಾಗಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ.

ಈ ಸಂಬಂಧ ಪ್ರಧಾನಿ ಮೋದಿ ಅವರು ಮನಸ್ಸು ಮಾಡಿದರೆ ಇದೇ ಕ್ಷಣದಲ್ಲಿ ಕ್ರಮ ಕೈಗೊಳ್ಳಬಹುದು, ಆದರೆ ಏಕಿಲ್ಲ? ಏಕೆಂದರೆ ಅವರಲ್ಲಿ ಅಹಂಕಾರವಿದೆ. ಅವರು ಹಿಂದೂ ಧರ್ಮದ ಬೋಧನೆಗಳಂತೆ ಜೀವಿಸುತ್ತಿಲ್ಲ. ಹಿಂದೂ ಧರ್ಮ ನಮಗೆ ಮೊದಲು ನಮ್ಮ ಅಹಂಕಾರವನ್ನು ತ್ಯಜಿಸುವುದನ್ನು ಕಲಿಸುತ್ತದೆ ಎಂದು ಕಿಡಿ ಕಾರಿದ್ದಾರೆ.

ತಮ್ಮ ಭವಿಷ್ಯ ಸುಭದ್ರವಾಗಿರಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿರುವುದು ಸಂಪೂರ್ಣ ನ್ಯಾಯಯುತವಾಗಿದೆ. ಇಂದು ನಮ್ಮ ದೇಶದಲ್ಲಿರುವ ಅಸಮಾನತೆಯ ಬಗ್ಗೆ ತೀವ್ರ ಅಸಮಾಧಾನವಿದೆ. ಪ್ರತಿಭಟಿಸುವ ಸಂಪೂರ್ಣ ಹಕ್ಕು ವಿದ್ಯಾರ್ಥಿಗಳಿಗಿದೆ.

ಅವರ ಈ ಹೋರಾಟಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ನಿಮ್ಮ ಅಹಂಕಾರವನ್ನು ಬದಿಗೊತ್ತಿ, ಸರಿಯಾದ ನಿರ್ಧಾರ ತೆಗೆದುಕೊಳ್ಳಿ. ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಆದರೆ ಅದಾನಿ ಮತ್ತು ಅಂಬಾನಿ ವಿಷಯದಲ್ಲಿ ಅವರು ಇದಕ್ಕೆ ವಿನಾಯಿತಿ ನೀಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

''ಒಂದು ಮಾತು ನೆನಪಿರಲಿ: 'ದೊಡ್ಡವನಾದರೆ ಏನು ಪ್ರಯೋಜನ? ಖರ್ಜೂರದ ಮರದಂತೆ ಇದ್ದರೆ ಯಾರಿಗೂ ನೆರಳೂ ಸಿಗುವುದಿಲ್ಲ, ಅದರ ಹಣ್ಣೂ ತುಂಬಾ ಎತ್ತರದಲ್ಲಿರುತ್ತದೆ' (ಆದರೆ ಅದಾನಿ ಮತ್ತು ಅಂಬಾನಿಯವರ ವಿಷಯದಲ್ಲಿ ಮಾತ್ರ ಅವರು ವಿನಾಯಿತಿ ನೀಡುತ್ತಾರೆ)''

'ತಮ್ಮ ಭವಿಷ್ಯ ಸುರಕ್ಷಿತವಾಗಿರಬೇಕು ಎಂದು ವಿದ್ಯಾರ್ಥಿಗಳು ಕೇಳುತ್ತಿರುವುದು ಸಂಪೂರ್ಣ ನ್ಯಾಯಸಮ್ಮತ. ಇಂದು ನಮ್ಮ ದೇಶದಲ್ಲಿ ಅಸಮಾನತೆ ಬಗ್ಗೆ ತುಂಬಾ ಆತಂಕವಿದೆ. ವಿದ್ಯಾರ್ಥಿಗಳಿಗೆ ಪ್ರತಿಭಟನೆ ನಡೆಸುವ ಸಂಪೂರ್ಣ ಹಕ್ಕಿದೆ.

ಅವರ ಹೋರಾಟಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ನಿಮ್ಮ ಗರ್ವ ಮತ್ತು ಅಹಂಕಾರವನ್ನು ಬದಿಗಿಟ್ಟು, ಸರಿಯಾದ ನಿರ್ಧಾರ ಕೈಗೊಳ್ಳಿ. ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ" ಎಂದು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ರಮ್ಯಾ ಬರೆದುಕೊಂಡಿದ್ದಾರೆ.

ramya
ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು; ಅನ್ಯಾಯದ ವಿರುದ್ಧ ಮೌನ ವಹಿಸುವುದೇ ದೇಶಕ್ಕೆ ದೊಡ್ಡ ಬೆದರಿಕೆ: ದೆಹಲಿ ಪ್ರತಿಭಟನೆಗೆ 'ಯುವ' ಪ್ರತಿಕ್ರಿಯೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com