ಬೆಂಗಳೂರು: SIR ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಹಲ್ಲೆ ಪ್ರಕರಣ; ಯಾರಬ್ ಮತ್ತು ದಸ್ತಗೀರ್ ಬಂಧನ!

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿ ಮೇಲೆ ಇಬ್ಬರು ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಯಾರಬ್ ಮತ್ತು ದಸ್ತಗೀರ್ ಎಂಬುವರನ್ನು ಬಂಧಿಸಲಾಗಿದೆ.
ಆರೋಪಿಗಳ ಬಂಧನ
ಆರೋಪಿಗಳ ಬಂಧನ
Updated on

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿ ಮೇಲೆ ಇಬ್ಬರು ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಯಾರಬ್ ಮತ್ತು ದಸ್ತಗೀರ್ ಎಂಬುವರನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ ಸುಮಾರು 1:30ರ ವೇಳೆಗೆ GBA ಹಾಗೂ ಸ್ಲಂ ಡೆವಲಪ್‌ಮೆಂಟ್ ಬೋರ್ಡ್‌ನ ಅಧಿಕಾರಿ ಫಕೀರಪ್ಪ ಮೇಲೆ ಹಲ್ಲೆ ನಡೆಸಲಾಗಿತ್ತು.

ಡಿ.ಜೆ. ಹಳ್ಳಿಯ ರೋಶನ್ ನಗರದಲ್ಲಿರುವ ಕೌಸರ್ ಮಸೀದಿ ಬಳಿ SIR ಸಮೀಕ್ಷಾ ಕಾರ್ಯಕ್ಕಾಗಿ ಫಕೀರಪ್ಪ ತೆರಳಿದ್ದಾಗ ನಮಗೂ SIR ಫಾರ್ಮ್ ನೀಡುವಂತೆ ಇಬ್ಬರು ಗಲಾಟೆ ಮಾಡಿದ್ದಾರೆ. ನಿಮ್ಮ ವಾಸ್ತವ್ಯ ಬದಲಾಸಿರುವುದರಿಂದ ನಿಮ್ಮ ಅರ್ಜಿ ಇಲ್ಲ ಎಂದು ದಸ್ತಗೀರ್ ಹೇಳಿದ್ದಾರೆ. ಇದರಿಂದ ಗೋಪಗೊಂಡ ಆರೋಪಿ ದಸ್ತಗೀರ್ ಮತ್ತು ಯಾರಬ್ ಇಬ್ಬುರ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಬಂಧನ
ಮಂಡ್ಯದಲ್ಲಿ ಕಾವೇರಿ ಪ್ರತಿಭಟನೆ ತೀವ್ರ: ಸಿಎಂ ವಿಜಯ್ ನಟನೆಯ 'ಜನ ನಾಯಗನ್' ಪ್ರದರ್ಶನ ಸ್ಥಗಿತ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com