

ಬೆಂಗಳೂರು: ರಾಜಾನುಕುಂಟೆ ಪೊಲೀಸ್ ವ್ಯಾಪ್ತಿಯಲ್ಲಿ ಕಾಣೆಯಾದ 25 ವರ್ಷದ ಭದ್ರತಾ ಸಿಬ್ಬಂದಿ ಪ್ರಕರಣದ ತನಿಖೆಯಲ್ಲಿ ಪತ್ನಿಯೇ ಆರೋಪಿಯಾಗಿದ್ದಾಳೆ.
ಕೊಲೆಯಾದ ದುರ್ದೈವಿಯನ್ನು ಪಶ್ಚಿಮ ಬಂಗಾಳ ಮೂಲದ ಅಭಿಜಿತ್ ಪಂಡಿತ್ (25) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಹೆಸರಘಟ್ಟ ಬಳಿಯ ಲಿಂಗನಹಳ್ಳಿಯಲ್ಲಿ ವಾಸವಾಗಿದ್ದ. ಕಳೆದ ಮೂರು ವರ್ಷಗಳ ಹಿಂದೆ ಅಭಿಜಿತ್ ಹಾಗೂ ಅರ್ಚನಾ ಚೌಹಾನ್ (21) ಪ್ರೀತಿಸಿ ಮದುವೆಯಾಗಿದ್ದರು.
ಮೂವರೂ ಒಂದೇ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ರಾಜಾನುಕುಂಟೆಯ ಇಟ್ಟಗಲ್ಲಪುರದಲ್ಲಿ ವಾಸಿಸುತ್ತಿದ್ದರು ಮದುವೆಯಾದ ಕೆಲವೇ ದಿನಗಳಲ್ಲಿ ಅರ್ಚನಾಳಿಗೆ ಪಾರುಲ್ ಪಾಲ್ (26) ಎಂಬಾತನೊಂದಿಗೆ ಅನೈತಿಕ ಸಂಬಂಧ ಬೆಳೆದಿತ್ತು. ಪತ್ನಿಯ ಈ ಅಕ್ರಮ ಸಂಬಂಧದ ವಿಷಯ ತಿಳಿದ ಅಭಿಜಿತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದಂಪತಿಗಳ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು.
ಮೇ 27 ರಂದು, ಪಂಡಿತ್ ಪಾಲ್ ಮತ್ತು ಅವರ ಸಹಚರರೊಂದಿಗೆ ಮದ್ಯ ಸೇವಿಸುತ್ತಿದ್ದಾಗ, ಆರೋಪಿಗಳು ಅವರನ್ನು ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಅವರ ಶವವನ್ನು ಸರೋವರದ ಬಳಿ ಹೂತುಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆ ರಾತ್ರಿ ನಂತರ, ಅರ್ಚನಾ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದಳು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಅಭಿಜಿತ್ ಮೊಬೈಲ್ ಕರೆಗಳ ವಿವರ (CDR) ಹಾಗೂ ಅರ್ಚನಾಳ ವರ್ತನೆಯನ್ನು ಗಮನಿಸಿದಾಗ ಸಂಶಯ ಮೂಡಿದೆ. ತಕ್ಷಣವೇ ಪೊಲೀಸರು ಅರ್ಚನಾಳ ಪ್ರಿಯಕರ ಪಾರ್ಸೂಲ್ ಪಾಲ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ತಾವೇ ಅಭಿಜಿತ್‌ನನ್ನು ಕೊಂದು ಕೆರೆಯ ಬಳಿ ಹೂತುಹಾಕಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಆರೋಪಿ ನೀಡಿದ ಮಾಹಿತಿಯ ಮೇರೆಗೆ ತಹಶೀಲ್ದಾರ್ ಸಮ್ಮುಖದಲ್ಲಿ ಕೆರೆಯ ಬಳಿ ಹೂತಿಟ್ಟಿದ್ದ ಜಾಗವನ್ನು ಅಗೆದಾಗ, ಕೊಳೆತ ಸ್ಥಿತಿಯಲ್ಲಿ ಅಭಿಜಿತ್ ಪಂಡಿತ್ ಶವ ಪತ್ತೆಯಾಗಿದೆ.
Advertisement