

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರವು ಹಿರಿಯ ಅಧಿಕಾರಿಯಾಗಿರುವ ಬಿಎಸ್ ಶ್ರೀಧರ್ (BS Sridhar) ಅವರನ್ನು ಮುಖ್ಯಮಂತ್ರಿ D K ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ಹಾಗೂ ಜಂಟಿ ಕಾರ್ಯದರ್ಶಿ (Joint Secretary) ಆಗಿ ನೇಮಕ ಮಾಡಿದೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿಗಳ ಕಚೇರಿಯ ಆಡಳಿತಾತ್ಮಕ ಕಾರ್ಯಗಳು, ವಿವಿಧ ಇಲಾಖೆಗಳ ನಡುವಿನ ಸಮನ್ವಯ, ಸರ್ಕಾರಿ ಯೋಜನೆಗಳ ಅನುಷ್ಠಾನ ಮೇಲ್ವಿಚಾರಣೆ ಹಾಗೂ ಮುಖ್ಯಮಂತ್ರಿಗಳಿಗೆ ನೀತಿ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಸಹಕಾರ ನೀಡುವ ಜವಾಬ್ದಾರಿಯನ್ನು ಬಿಎಸ್ ಶ್ರೀಧರ್ ಅವರು ನಿರ್ವಹಿಸಲಿದ್ದಾರೆ.
ಈ ನೇಮಕಾತಿಯೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಯ ಆಡಳಿತಾತ್ಮಕ ತಂಡ ಮತ್ತಷ್ಟು ಬಲಗೊಂಡಿದ್ದು, ಸರ್ಕಾರದ ಪ್ರಮುಖ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ವೇಗ ಸಿಗುವ ನಿರೀಕ್ಷೆಯಿದೆ.
2000 ರಿಂದ ಎಸ್‌ಎಂ ಕೃಷ್ಣ ಅವರ ವಿದೇಶಾಂಗ ಸಚಿವ ಹುದ್ದೆಯ ಅಂತ್ಯದವರೆಗೆ ಶ್ರೀಧರ್ ಅವರು ಅವರ ಒಎಸ್‌ಡಿ ಮತ್ತು ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ನಂತರ ಅವರು ಡಿ.ಕೆ. ಶಿವಕುಮಾರ್ ಇಂಧನ ಸಚಿವರಾದಾಗ ಅವರೊಂದಿಗೆ ಸೇರಿಕೊಂಡರು ಮತ್ತು ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
Advertisement