

ಕಾರವಾರ: ನಡುರಸ್ತೆಯಲ್ಲಿ ಸಾರ್ವಜನಿಕರ ಎದುರೇ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ಮಾಜಿ ರೌಡಿ ಶೀಟರ್ 'ಮಚ್ಚುಮಂಜ' ಎಂಬಾತ ನಿಂದಿಸಿದರೂ ಸಹ ಜೀಪ್ನಲ್ಲೇ ಕುಳಿತು ನೋಡುತ್ತಿದ್ದ PSI ಅವರನ್ನು ಅಮಾನತು ಮಾಡಲಾಗಿದೆ.
ರೌಡಿ ಶೀಟರ್ ಮಚ್ಚು ಮಂಜ ಎಣ್ಣೆ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ವಿಷಯ ತಿಳಿದು ಪಿಎಸ್ಐ ಬಸವರಾಜ್ ಮಬನೂರ ನೇತೃತ್ವದ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಹೋಗಿದೆ. ಅಲ್ಲಿ ಪೊಲೀಸರನ್ನು ಕಂಡ ಮಂಜ ಮತ್ತಷ್ಟು ಗರಂ ಆಗಿದ್ದು ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದನು. ಇಷ್ಟೆಲ್ಲಾ ನಡೆಯುತ್ತಿದ್ದರೂ PSI ಬಸವರಾಜ್ ಸುಮ್ಮನೆ ಜೀಪಿನಲ್ಲೇ ಕುಳಿತ್ತಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದೀಗ ಹಳಿಯಾಳ PSI ಬಸವರಾಜ್ ಮಬನೂರ ಅವರನ್ನ ಅಮಾನತು ಮಾಡಿ ಉತ್ತರ ಕನ್ನಡ ಎಸ್ ಪಿ ದೀಪನ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಹಳಿಯಾಳ ಪೊಲೀಸ್ ಠಾಣೆಯ 8 ಜನ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿದ್ದಾರೆ.
Advertisement