

ಬೆಂಗಳೂರು: ನಟಿ ಕೃಷಿ ತಾಪಂಡ ಅವರು ವಾಸವಿರುವ ಆರ್.ಆರ್. ನಗರದ ಎಲಿಗೇಟ್ ಅಪಾರ್ಟ್‌ಮೆಂಟ್‌ನ ಬೆಡ್ರೂಮ್ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.
ಇಂದು ಸಂಜೆ ಚಾಮರಾಜಪೇಟೆಯ ಚಿತಾಗಾರದಲ್ಲಿ ವೈಶಾಕ್ ಅವರ ಅಂತ್ಯಕ್ರಿಯೆ ನಡೆಯಿತು. ಗೆಳೆಯ ಸಾವಿಗೆ ಶರಣಾದಾಗ ಮನೆಯಲ್ಲಿ ಇರದ ನಟಿ ಕೃಷಿ ಅವರು ವೈಶಾಖ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕಣ್ಣೀರಿಡುತ್ತ ಓಡೋಡಿ ಬಂದರು.
ಆದರೆ ಸ್ಥಳಕ್ಕೆ ನಟಿ ಕೃಷಿ ತಪಾಂಡ ಬಂದಿರುದನ್ನ ಗಮನಿಸಿದ ವೈಶಾಕ್ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಬಂಧಿಕರ ವಿರೋಧದ ಹಿನ್ನೆಲೆಯಲ್ಲಿ ಕೃಷಿ ತಾಪಂಡ ಅವರು ಕೊನೆಯ ಗಳಿಗೆಯಲ್ಲೂ ಗೆಳೆಯನ ಮುಖ ನೋಡಲಾಗದೇ ಕಣ್ಣೀರಿಟ್ಟಿದ್ದಾರೆ.
ಈ ವೇಳೆ ವೈಶಾಕ್ ಕುಟುಂಬಸ್ಥರು, ಕೃಷಿ ತಾಪಂಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನೀನು ಅವನ ಮುಖ ನೋಡೋ ಅವಶ್ಯತಕೆ ಇಲ್ಲ. ಇಲ್ಲಿಂದ ಮೊದಲು ಹೊರಡು ಎಂದಿದ್ದಾರೆ. ಇದರಿಂದ ಬೇಸತ್ತ ಕೃಷಿ ಹಾಗೆಯೇ ವಾಪಸ್ಸಾಗಿದ್ದು, ಕಾರಿನಲ್ಲಿ ಕುಳಿತು ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.
ವೈಶಾಕ್ ಅವರು ಆತ್ಮಹತ್ಯೆಗೂ ಮುನ್ನ ನೆಲಮಂಗಲದಲ್ಲಿದ್ದ ಕೃಷಿ ತಾಪಂಡ ಅವರಿಗೆ ಹಲವು ಬಾರಿ ಕರೆ ಮಾಡಿದ್ದರು. ಆದರೂ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ಹೀಗಾಗಿ ವಾಟ್ಸಾಪ್ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದರು. ನನಗೆ ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ ಎಂದು ನಿನ್ನೆ ರಾತ್ರಿ ನಟಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮನೆಗೆ ಬರುತ್ತಿದ್ದಂತೆ ವಿಚಾರ ತಿಳಿದ ಕೃಷಿ, ವೈಶಾಕ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅನೇಕ ದಿನಗಳಿಂದ ಕೃಷಿ ಮನೆಯಲ್ಲಿ ವೈಶಾಕ್ ವಾಸವಾಗಿದ್ದರು. ಇಬ್ಬರ ಬಳಿಯೂ ಮನೆಯ ಕೀ ಇತ್ತು ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಮೊಬೈಲ್‌ನಲ್ಲೂ ಯಾವುದೇ ವಿಡಿಯೋವನ್ನೂ ಮಾಡಿಲ್ಲ. ಪೊಲೀಸರು ವೈಶಾಕ್ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.