'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಬಂಧನ: ಖತರ್ನಾಕ್ ಕಳ್ಳ, 41 ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಬಳ್ಳಾರಿ ಪೊಲೀಸರು, Video

ಸಿದ್ದಾ ರೆಡ್ಡಿ ದಿನನಿತ್ಯ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರೂ, ಆತನ ನಿಜವಾದ ಆದಾಯದ ಮೂಲ ಬೈಕ್ ಕಳ್ಳತನವಾಗಿತ್ತು.
'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಬಂಧನ: ಖತರ್ನಾಕ್ ಕಳ್ಳ, 41 ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಬಳ್ಳಾರಿ ಪೊಲೀಸರು, Video
Updated on

ಬಳ್ಳಾರಿ: ಕರ್ನಾಟಕದ ಬಳ್ಳಾರಿಯಲ್ಲಿ 'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಎಂದೇ ಕುಖ್ಯಾತನಾಗಿದ್ದ ಖತರ್ನಾಕ್ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಈ 'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಬರೊಬ್ಬರಿ 41 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವ ಆರೋಪ ಎದುರಿಸುತ್ತಿದ್ದು, ಅವುಗಳಲ್ಲಿ ಹೆಚ್ಚಿನವು ಹೀರೋ ಕಂಪನಿಯ ಸ್ಪ್ಲೆಂಡರ್ ಬೈಕ್‌ಗಳಾಗಿವೆ.

ಸಿದ್ದಾ ರೆಡ್ಡಿ ದಿನನಿತ್ಯ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರೂ, ಆತನ ನಿಜವಾದ ಆದಾಯದ ಮೂಲ ಬೈಕ್ ಕಳ್ಳತನವಾಗಿತ್ತು. ವಿಶೇಷವಾಗಿ ಹೀರೋ ಸ್ಪ್ಲೆಂಡರ್ ಮಾದರಿಯ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಬಂಧನ: ಖತರ್ನಾಕ್ ಕಳ್ಳ, 41 ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಬಳ್ಳಾರಿ ಪೊಲೀಸರು, Video
ವೈಶಾಕ್ ಆತ್ಮಹತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್​: ನಟಿ ಕೃಷಿ ತಾಪಂಡ ಜತೆ ಅಕ್ರಮ ಸಂಬಂಧ; ಪೊಲೀಸರಿಗೆ ಪತ್ನಿ ದೂರು

ಹೀರೋ ಕಂಪನಿಯ ಬೈಕ್‌ಗಳ ಲಾಕ್‌ಗಳನ್ನು ಕ್ಷಣಾರ್ಧದಲ್ಲಿ ತೆರೆಯುವ ನೈಪುಣ್ಯ ಹೊಂದಿದ್ದ ಕಾರಣ ಆತನಿಗೆ 'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಎಂಬ ಅಡ್ಡಹೆಸರು ಬಂದಿತ್ತು. "ಈತ ಹೆಚ್ಚಿನ ಸಂಖ್ಯೆಯಲ್ಲಿ ಸ್ಪ್ಲೆಂಡರ್ ಬೈಕ್‌ಗಳನ್ನು ಕಳವು ಮಾಡಿದ್ದಾನೆ," ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.

ಪೊಲೀಸರು ವಶಪಡಿಸಿಕೊಂಡಿರುವ 41 ದ್ವಿಚಕ್ರ ವಾಹನಗಳಲ್ಲಿ 30 ಬೈಕ್‌ಗಳು ಸ್ಪ್ಲೆಂಡರ್ ಮಾದರಿಯವುಗಳಾಗಿವೆ. ಸಿದ್ದಾ ರೆಡ್ಡಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com