LPG ದರ ಏರಿಕೆ ಎಫೆಕ್ಟ್: ಹೋಟೆಲ್‌ಗಳಲ್ಲಿ ತಿಂಡಿ–ತಿನಿಸು, ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ

ಕಾಫಿ ಬೀಜಗಳ ಬೆಲೆ ಕೂಡ ಏರಿಕೆಯಾಗಿದ್ದು, ಗ್ರೇವಿ ಮತ್ತು ಸಿಹಿತಿಂಡಿಗಳಲ್ಲಿ ವ್ಯಾಪಕವಾಗಿ ಬಳಸುವ ಗೋಡಂಬಿ ಸೇರಿದಂತೆ ಡ್ರೈಫ್ರೂಟ್ಸ್‌ಗಳ ಬೆಲೆ ಸುಮಾರು 20ರಿಂದ 25 ಶೇಕಡಾವರೆಗೆ ಹೆಚ್ಚಾಗಿದೆ
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಎಲ್‌ಪಿಜಿ ದರ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ– ತಿನಿಸುಗಳು ಹಾಗೂ ಅಗತ್ಯ ವಸ್ತುಗಳ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ರೂ.115 ಹೆಚ್ಚಿಸಲಾಗಿದ್ದು, ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯೂ ರೂ.60 ಏರಿಕೆಯಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ವೆಚ್ಚ ಏರಿಕೆಯಾಗಿರುವುದರಿಂದ ಎಲ್‌ಪಿಜಿ ದರ ಏರಿಕೆಯಾಗಿದೆ.

ಬೆಂಗಳೂರು ಬೃಹತ್ ಹೋಟೆಲ್ ಅಸೋಸಿಯೇಷನ್ ​​(ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ಅವರು ಮಾತನಾಡಿ, ಈ ಹಿಂದೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ಸುಮಾರು ರೂ.150 ರಿಯಾಯಿತಿ ನೀಡಲಾಗುತ್ತಿತ್ತು. ಮಾರ್ಚ್ 1ರಿಂದ ಆ ರಿಯಾಯಿತಿಯನ್ನು ನಿಲ್ಲಿಸಲಾಗಿದೆ. ಈಗ ಮತ್ತೆ ರೂ.115 ದರ ಹೆಚ್ಚಳವಾಗಿದೆ. ಹೀಗಾಗಿ ಪ್ರತಿ ಸಿಲಿಂಡರ್‌ಗೆ ಒಟ್ಟು ಸುಮಾರು ರೂ.265 ಹೆಚ್ಚುವರಿ ಹೊರೆ ಬೀಳುತ್ತಿದೆ. ಇದೀಗ ಹೋಟೆಲ್‌ಗಳು ಆಹಾರ ತಯಾರಿಕೆಗೆ ಬಳಸುವ ಹಲವು ಮೂಲ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿದೆ. ಅಡುಗೆ ಎಣ್ಣೆ ದರ ಪ್ರತಿ ಕಿಲೋಗ್ರಾಂಗೆ ಸುಮಾರು ರೂ.15ರಿಂದ ರೂ.20ರವರೆಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಕಾಫಿ ಬೀಜಗಳ ಬೆಲೆ ಕೂಡ ಏರಿಕೆಯಾಗಿದ್ದು, ಗ್ರೇವಿ ಮತ್ತು ಸಿಹಿತಿಂಡಿಗಳಲ್ಲಿ ವ್ಯಾಪಕವಾಗಿ ಬಳಸುವ ಗೋಡಂಬಿ ಸೇರಿದಂತೆ ಡ್ರೈಫ್ರೂಟ್ಸ್‌ಗಳ ಬೆಲೆ ಸುಮಾರು 20ರಿಂದ 25 ಶೇಕಡಾವರೆಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

File photo
ಪಶ್ಚಿಮ ಏಷ್ಯಾ ಉದ್ವಿಗ್ನತೆ: ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ; ಪ್ರಹ್ಲಾದ್ ಜೋಶಿ

ಇದಲ್ಲದೆ ವಿದ್ಯುತ್ ದರದಲ್ಲೂ ಪ್ರತಿ ಯುನಿಟ್‌ಗೆ ಸುಮಾರು ರೂ.1 ಏರಿಕೆಯಾಗು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಕಾರ್ಯಾಚರಣೆ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಆದರೂ ಕೂಡ ತಕ್ಷಣವೇ ಆಹಾರದ ಬೆಲೆ ಹೆಚ್ಚಿಸುವ ಯೋಚನೆ ಬಹುತೇಕ ಹೋಟೆಲ್‌ಗಳಿಗೆ ಇಲ್ಲ. “ಗ್ರಾಹಕರ ಹಿತದೃಷ್ಟಿಯಿಂದ ಇನ್ನೂ ಕೆಲವು ದಿನ ಪರಿಸ್ಥಿತಿಯನ್ನು ಗಮನಿಸುತ್ತೇವೆ. ಅನಿವಾರ್ಯವಾದರೆ ಮಾತ್ರ ಕೆಲ ಬೆಲೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಘದ ಸಭೆ ನಡೆಸಿ ಪರಿಸ್ಥಿತಿಯನ್ನು ಚರ್ಚಿಸಲಾಗುತ್ತದೆ. ಆದರೆ, ಮೆನು ದರ ಹೆಚ್ಚಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರತಿ ಹೋಟೆಲ್ ಮಾಲೀಕರು ತಮ್ಮ ವ್ಯವಹಾರ ಪರಿಸ್ಥಿತಿಯನ್ನು ಗಮನಿಸಿ ಪ್ರತ್ಯೇಕವಾಗಿ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com