ಚಾಮರಾಜನಗರ: ತನ್ನ ಸಹೋದರಿಯೊಂದಿಗೆ ನಗ್ನವಾಗಿ ಸಿಕ್ಕಿಬಿದ್ದ ಗೆಳೆಯನ ಕತ್ತು ಸೀಳಿದ ಪ್ರಾಣ ಸ್ನೇಹಿತ!

ಸ್ನೇಹಿತನ ಸಹೋದರಿಯ ಜೊತೆಗಿನ ಅಕ್ರಮ ಸಂಬಂಧದಿಂದಾಗಿ ಪ್ರಾಣ ಸ್ನೇಹಿತನನ್ನೇ ಯುವಕನೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆಯ ದೊಡ್ಡಕೆರೆ ಏರಿ ಬಳಿ ನಡೆದಿದೆ. ಮೃತನನ್ನು ಮೂಖಹಳ್ಳಿ ಗ್ರಾಮದ 23 ವರ್ಷದ ನಂಜುಂಡಸ್ವಾಮಿ ಎಂದು ತಿಳಿದುಬಂದಿದೆ.
ನಂಜುಂಡಸ್ವಾಮಿ ಹತ್ಯೆ
ನಂಜುಂಡಸ್ವಾಮಿ ಹತ್ಯೆ
Updated on

ಚಾಮರಾಜನಗರ: ಸ್ನೇಹಿತನ ಸಹೋದರಿಯ ಜೊತೆಗಿನ ಅಕ್ರಮ ಸಂಬಂಧದಿಂದಾಗಿ ಪ್ರಾಣ ಸ್ನೇಹಿತನನ್ನೇ ಯುವಕನೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆಯ ದೊಡ್ಡಕೆರೆ ಏರಿ ಬಳಿ ನಡೆದಿದೆ. ಮೃತನನ್ನು ಮೂಖಹಳ್ಳಿ ಗ್ರಾಮದ 23 ವರ್ಷದ ನಂಜುಂಡಸ್ವಾಮಿ ಎಂದು ತಿಳಿದುಬಂದಿದೆ. ಪಾರ್ಟಿಗೆಂದು ಗೆಳೆಯ ಅಜಯ್​ ಜೊತೆಗೆ ಹೋಗಿದ್ದ ನಂಜುಂಡಸ್ವಾಮಿಯ ಶವ ಕತ್ತು ಸೀಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ನಂಜುಂಡಸ್ವಾಮಿಯನ್ನು ಅಜಯ್ ಕೊಲೆ ಮಾಡಿರುವ ವಿಷಯ ಬಹಿರಂಗಗೊಂಡಿದೆ.

ನಂಜುಂಡಸ್ವಾಮಿ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಅಜಯನ್ ನನ್ನು ಪೊಲೀಸರು ಬಂಧಿಸಿದ್ದರು. ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ. ನನ್ನ ಸಹೋದರಿಯ ಜೊತೆಗೆ ನಂಜುಂಡಸ್ವಾಮಿ ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದು ಆತನನ್ನು ಹತ್ಯೆ ಮಾಡಿದ್ದಾಗಿ ಅಜಯ್​​ ಹೇಳಿದ್ದಾರೆ. ಅಜಯ್​​ ಸಹೋದರಿಗೆ ಅದಾಗಲೇ ಮದುವಾಗಿದ್ದರೂ ನಂಜುಂಡಸ್ವಾಮಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆಕೆಯ ಜೊತೆ ಏಕಾಂತದಲ್ಲಿದ್ದಾಗಲೇ ಪತಿ ಕೈಗೆ ಇಬ್ಬರೂ ಸಿಕ್ಕಿಬಿದ್ದಿದ್ದರು. ಈ ವಿಚಾರವಾಗಿ ದೊಡ್ಡ ಜಗಳವಾಗಿತ್ತು. ಅಲ್ಲದೆ ಈ ವಿಚಾರ ತಿಳಿದು ಅಜಯ್ ತೀವ್ರವಾಗಿ ಕೋಪಗೊಂಡಿದ್ದನು.

ನಂಜುಂಡಸ್ವಾಮಿ ಹತ್ಯೆ
ಬೆಂಗಳೂರು: ಹಫ್ತಾ ಕೊಡದಿದ್ದಕ್ಕೆ ಬ್ಯಾಟ್‌ನಿಂದ ಹಲ್ಲೆ; ಮಕ್ಕಳ ಎದುರೇ ನರಳಿ ಪ್ರಾಣಬಿಟ್ಟ Muslim ವ್ಯಕ್ತಿ, Video

ನಂಜುಂಡಸ್ವಾಮಿಯನ್ನು ಮುಗಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದ ಅಜಯ್, ನಂಜುಂಡನನ್ನ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದನು. ಸದ್ಯ ಪೊಲೀಸರು ಆರೋಪಿ ಅಜಯ್ ನನ್ನ ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com