ಲೋಕಾಯುಕ್ತ ವಿರುದ್ಧ ನಿಂದನಾತ್ಮಕ ಹೇಳಿಕೆ: ಬಳ್ಳಾರಿ ವ್ಯಕ್ತಿಗೆ ಜಾಮೀನು ನಿರಾಕರಿಸಿದ ಬೆಂಗಳೂರು ಕೋರ್ಟ್!

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಪರಾರಿಯಾಗುವ ಸಾಧ್ಯತೆಯಿದೆ. ಆರೋಪಿ ಮತ್ತೆ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಮುಂದುವರಿಸಬಹುದು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿಸಲ್ಪಟ್ಟು ನಾಲ್ಕು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಜಾಮೀನು ನೀಡಲು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಪರಾರಿಯಾಗುವ ಸಾಧ್ಯತೆಯಿದೆ. ಆರೋಪಿ ಮತ್ತೆ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಮುಂದುವರಿಸಬಹುದು ಎಂದು ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ರಶ್ಮಿ ಎಂ ತಿಳಿಸಿದ್ದಾರೆ. ಮಾರ್ಚ್ 17 ರಂದು ಬಳ್ಳಾರಿಯ ಜಿ ಶಂಕರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ ವಜಾಗೊಳಿಸಿದರು.

ಬಳ್ಳಾರಿಯ ಶ್ರೀ ನಾಗೇಶ್ವರ ದೇವಸ್ಥಾನದ ಸಾರ್ವಜನಿಕರ ಮತ್ತು ಅಂಗಡಿ ಮಾಲೀಕರ ಪ್ರತಿನಿಧಿ ಎಂದು ಹೇಳಿಕೊಂಡ ಶಂಕರ್, ಫೆಬ್ರವರಿ 19, 2015 ರಂದು ಬಳ್ಳಾರಿಯ ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಇಲಾಖೆಯ ಸಹಾಯಕ ಆಯುಕ್ತರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದರು.

ಅದರಂತೆ, ಸಹಾಯಕ ಆಯುಕ್ತರು ಮತ್ತು ದೂರುದಾರರು ಜುಲೈ 20, 2017 ರಂದು ಲೋಕಾಯುಕ್ತರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಯಿತು. ದೇವಾಲಯದ ಆದಾಯವನ್ನು ಹೆಚ್ಚಿಸಲು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಮತ್ತು ನಿಯಮಗಳ ಪ್ರಕಾರ ಅಂಗಡಿಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಹಾಯಕ ಆಯುಕ್ತರು ವರದಿಯನ್ನು ಸಲ್ಲಿಸಿದರು.

Representational image
ಆದಾಯ ಮೀರಿ ಆಸ್ತಿ ಗಳಿಕೆ: ಲೋಕಾಯುಕ್ತ ಬಲೆಗೆ ಉಡುಪಿ ಅಬಕಾರಿ ಡಿಸಿ; 8.69 ಕೋಟಿ ರೂ ಆಸ್ತಿ ಪತ್ತೆ..!

ಅಲ್ಲದೆ, ಲೋಕಾಯುಕ್ತರ ನಿರ್ದೇಶನದಂತೆ ಅಧಿಕಾರಿಗಳು ಅತಿಕ್ರಮಣವನ್ನು ತೆರವುಗೊಳಿಸಿ ವರದಿಯನ್ನು ಸಲ್ಲಿಸಿದರು. ವಿಚಾರಣೆಯ ನಂತರ, ಕಾನೂನಿನ ಪ್ರಕಾರ ಬಾಡಿಗೆದಾರರನ್ನು ಹೊರಹಾಕಲಾಗಿದೆ ಎಂಬ ಆಧಾರದ ಮೇಲೆ ಆರೋಪಿಗಳು ಸಲ್ಲಿಸಿದ ದೂರು ವಜಾಗೊಳಿಸಲಾಯಿತು.

ಸೆಪ್ಟೆಂಬರ್ 3, 2022 ರಂದು, ಆರೋಪಿಯು ತನ್ನ ದೂರನ್ನು ವಜಾಗೊಳಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಉಪ ಲೋಕಾಯುಕ್ತರಿಗೆ ಪತ್ರ ಬರೆದರು. ಅವರು ಪತ್ರದಲ್ಲಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಏಪ್ರಿಲ್ 19, 2023 ರಂದು ಆರೋಪಿಗೆ ಶೋಕಾಸ್ ನೋಟಿಸ್ ನೀಡಲಾಯಿತು. ಮೇ 11, 2023 ರಂದು ಅವರು ನೋಟೀಸ್‌ಗೆ ಉತ್ತರಿಸುತ್ತಾ, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ವಿರುದ್ಧ ಮತ್ತೆ ಅವಹೇಳನಕಾರಿ ಹೇಳಿಕೆ ನೀಡಿದರು.

ಲೋಕಾಯುಕ್ತ ರಿಜಿಸ್ಟ್ರಾರ್ ಅವರಿಂದ ಖಾಸಗಿ ದೂರನ್ನು ಸ್ವೀಕರಿಸಿ ಅಪರಾಧವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ಆರೋಪಿಗೆ ಸಮನ್ಸ್ ಜಾರಿ ಮಾಡಿತು. ಏಳು ಬಾರಿ ಸಮನ್ಸ್ ಮತ್ತು ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದರೂ, ಅವರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ.

ನವೆಂಬರ್ 18, 2025 ರಂದು, ಪೊಲೀಸರು ಅವರನ್ನು ಆಂಧ್ರಪ್ರದೇಶದಿಂದ ಬಂಧಿಸಿ ಸ್ಳಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು, ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಆರೋಪಿಯು ತನ್ನ ವಕೀಲರ ಮೂಲಕ, ಈ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ, ನನಗೆ ಶಾಶ್ವತ ವಿಳಾಸವಿಲ್ಲ ಎಂದು ಮನವಿ ಸಲ್ಲಿಸಿದನು. ತನ್ನ ಬಳಿ ಯಾವುದೇ ಜಾಮೀನು ಮತ್ತು ಭದ್ರತೆಯಾಗಿ ಠೇವಣಿ ಇಡಲು ಹಣವಿಲ್ಲದ ಕಾರಣ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡುವಂತೆಯೂ ಆರೋಪಿ ಮನವಿ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com