ಶೃಂಗೇರಿಯಲ್ಲಿ ಬಿಜೆಪಿ ಗೆಲುವಿಗೆ ನಕಲಿ-ತಿರುಚಿದ ಅಂಚೆ ಮತಪತ್ರಗಳೇ ಕಾರಣ: ರಾಜೇಗೌಡ

ಈ ಹೋರಾಟದಲ್ಲಿ ಅವರ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ನಕಲಿ ದಾಖಲೆ, ಅಂಚೆ ಮತಪತ್ರಗಳನ್ನು ತಿರುಚಲಾಗಿತ್ತು ಎಂದು ದೂರಿದ್ದಾರೆ. ನ್ಯಾಯಾಲಯವು ಅನೇಕ ಸುಳ್ಳುಗಳನ್ನು ಹಾಗೂ ನನ್ನ ವಿರೋಧಿಗಳು ಹೇರಿದ ಸುಮಾರು 18 ಆರೋಪಗಳನ್ನು ತಿರಸ್ಕರಿಸಿದೆ .
ಕಾಂಗ್ರೆಸ್ ಶಾಸಕ ರಾಜೇಗೌಡ
ಕಾಂಗ್ರೆಸ್ ಶಾಸಕ ರಾಜೇಗೌಡ
Updated on

ಬೆಂಗಳೂರು: ಶೃಂಗೇರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ನಕಲಿ ಹಾಗೂ ತಿರುಚಿದ ಅಂಚೆ ಪತ್ರಗಳು ಕಾರಣ ಎಂದು ಶಾಸಕ ಡಿ.ಟಿ ರಾಜೇಗೌಡ ಆರೋಪಿಸಿದ್ದಾರೆ.

ಶೃಂಗೇರಿ ಕ್ಷೇತ್ರದ ಮತಎಣಿಕೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಚುನಾಯಿತ ಪ್ರತಿನಿಧಿಯಾಗಿ ಅವರನ್ನು ಮರುನೇಮಕಗೊಳಿಸಿದ ಒಂದು ದಿನದ ನಂತರ ಮಾತನಾಡಿದ ಅವರು, ಈ ಹೋರಾಟದಲ್ಲಿ ಅವರ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ನಕಲಿ ದಾಖಲೆ, ಅಂಚೆ ಮತಪತ್ರಗಳನ್ನು ತಿರುಚಲಾಗಿತ್ತು ಎಂದು ದೂರಿದ್ದಾರೆ.

ನ್ಯಾಯಾಲಯವು ಅನೇಕ ಸುಳ್ಳುಗಳನ್ನು ಹಾಗೂ ನನ್ನ ವಿರೋಧಿಗಳು ಹೇರಿದ ಸುಮಾರು 18 ಆರೋಪಗಳನ್ನು ತಿರಸ್ಕರಿಸಿದೆ ಎಂದು ರಾಜೇಗೌಡ ಘೋಷಿಸಿದರು. ಈ ಹೈಡ್ರಾಮಾ ಸುಮಾರು ಮೂರು ವರ್ಷಗಳ ಹಿಂದೆ - ಮೇ 13, 2023 ರಂದು - ಎಣಿಕೆ ಸಭಾಂಗಣಗಳಲ್ಲಿ ಆರಂಭವಾಯಿತು.

ರಾಜೇಗೌಡ ಮತ್ತು ಅವರ ಎಣಿಕೆ ಏಜೆಂಟ್ ಸುಧೀರ್ ಕುಮಾರ್ ಮರುಳಿ ಪ್ರಕಾರ, ರಕ್ಷಣಾ ಸಿಬ್ಬಂದಿಯಗಳ ಸಮ್ಮುಖದಲ್ಲಿ ಅಂಚೆ ಮತಗಳೊಂದಿಗೆ ಎಣಿಕೆ ಪ್ರಕ್ರಿಯೆಯು ಪ್ರಾರಂಭವಾಯಿತು. 11ಮತಗಳಲ್ಲಿ, ರಾಜೇಗೌಡರಿಗೆ 7 ಮತಗಳು ಮತ್ತು ಜೀವರಾಜ್ ಅವರಿಗೆ 3 ಮತಗಳು ಬಂದವು. ಮರುಳಿ ಮತ್ತೆ ಮತಗಳನ್ನು ಎಣಿಸಿದರು, ಮೊದಲ ಸುತ್ತಿನಲ್ಲಿ, ರಾಜೇಗೌಡರಿಗೆ 157 ಮತಗಳು ಮತ್ತು ಜೀವರಾಜ್ ಅವರಿಗೆ 204 ಮತಗಳು ಬಂದವು.

ಕಾಂಗ್ರೆಸ್ ಶಾಸಕ ರಾಜೇಗೌಡ
ಬಿಜೆಪಿಗೆ ಬಿಗ್ ಶಾಕ್: 'ಮರುಎಣಿಕೆ' ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ; ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ; ಜೀವರಾಜ್ ಕಥೆ ಏನು?

ಎರಡನೆ ಸುತ್ತಿನಲ್ಲಿ 156 ಮತ್ತು 164 ಮತ ಬಂದವು. ಮೂರನೆ ಸುತ್ತಿನಲ್ಲಿ 170 ಹಾಗೂ 160, ಮತ್ತು ನಾಲ್ಕನೆ ಬಾರಿ 79 ಮತ್ತು 130 ಮತಗಳು ಕ್ರಮವಾಗಿ ಬಂದವು. ಪ್ರತಿಯೊಂದು ಮತವನ್ನು ಎರಡೂ ಕಡೆಯ ಏಜೆಂಟರಿಗೆ ಪ್ರದರ್ಶಿಸಲಾಯಿತು ಮತ್ತು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಯಿತು. ನಾಲ್ಕು ಸುತ್ತುಗಳಲ್ಲಿ 54, 102, 66 ಮತ್ತು 57 ಮತಗಳು ತಿರಸ್ಕರಿಸಲ್ಪಟ್ಟವು.

ಮತಗಳನ್ನು ತಿರುಚಲು ಯಾರೋ ಪ್ರಯತ್ನಿಸಿದ್ದಾರೆ ಎಂದು ರಾಜೇಗೌಡ ಆರೋಪಿಸಿದರು. ಶಾಯಿ ವಿಭಿನ್ನವಾಗಿತ್ತುಎಂದು ಅವರು ಗಮನಸೆಳೆದರು. ಕೆಲವು ಸ್ವಾರ್ಥಿಗಳು ಪ್ರಕ್ರಿಯೆಯನ್ನು ಹಾಳುಮಾಡಿದರು. ಅಧಿಕೃತ ಮತಕ್ಕೆ ಹೊಂದಿಕೆಯಾಗದ ಶಾಯಿಯಿಂದ ಮತಪತ್ರಗಳ ಮೇಲೆ ಗುರುತುಗಳನ್ನು ಹಾಕಲಾಯಿತು. ಇದು ಯಾಂತ್ರಿಕ ದೋಷವಲ್ಲ, ನನ್ನನ್ನು ಪದಚ್ಯುತಗೊಳಿಸಲು ಮಾಡಿರುವ ಕ್ರಿಮಿನಲ್ ಪಿತೂರಿಯಾಗಿದೆ ಎಂದಿದ್ದಾರೆ.

ಅಧಿಕಾರಿಗಳಿಗೆ ಔಪಚಾರಿಕವಾಗಿ ದೂರು ನೀಡಿ, ಅಂಚೆ ಮತಪತ್ರಗಳನ್ನು ಗುರಿಯಾಗಿಸಿಕೊಂಡು "ಬೃಹತ್ ವಂಚನೆ"ಯಾಗಿದೆ, ಹೀಗಾಗಿ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಪ್ರಮುಖ ಸ್ಪರ್ಧಿಗಳು ಮತ್ತು ಜೆಡಿಎಸ್, ಬಿಎಸ್‌ಪಿ, ಎಎಪಿ ಮತ್ತು ನೋಟಾಗಳಿಗೆ ಸೇರಿದ ಟ್ರೇಗಳು ಪರಿಶೀಲನೆಯ ಭಾಗವಾಗಿದ್ದವು.

ಅಂತಿಮವಾಗಿ ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಬಂದು ನನ್ನು ಸ್ಥಾನವನ್ನು ದೃಢೀಕರಿಸಿತು. ಆದರೂ ಶಾಸಕರು ವೈಯಕ್ತಿಕ ಗೆಲುವಿನಿಂದ ತೃಪ್ತರಾಗಿಲ್ಲ. "ಅಧಿಕೃತ ತನಿಖೆ ಪ್ರಾರಂಭವಾಗಲಿ" ಎಂದು ಒತ್ತಾಯಿಸಿದ್ದಾರೆ. "ಅಧಿಕಾರಿಗಳು ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಆಸಕ್ತಿ ಹೊಂದಿದ್ದರೆ, ಅವರು ಪ್ರತಿಯೊಂದು ಕೋನದಿಂದ ತನಿಖೆ ನಡೆಸಬೇಕು. ಸತ್ಯವನ್ನು ಸಾರ್ವಜನಿಕರ ಮುಂದೆ ತರಬೇಕು. ನನ್ನ ಕಡೆಯಿಂದ, ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಲು ನಾನು ಅಧಿಕೃತ ದೂರು ನೀಡಿದ್ದೇನೆ."

ವಿವಾದ ಬೆಳೆದಂತೆ, ಪ್ರಶ್ನೆಗಳು ಮುಂದುವರಿಯುತ್ತವೆ, ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ? ಎಂದು ರಾಜೇಗೌಡ ಪ್ರಶ್ನಿಸಿದ್ದಾರೆ. ಶಾಯಿ ಮತ್ತು ಮತಪತ್ರಗಳ ವಿಧಿವಿಜ್ಞಾನ ಪರೀಕ್ಷೆಗಾಗಿ ಒತ್ತಡಗಳು ಹೆಚ್ಚಿರುವುದರಿಂದ , ರಾಜೇಗೌಡರಿಗೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತಷ್ಟು ಹೋರಾಟ ಮಾಡಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com