ಬೆಂಗಳೂರು: ಚಾರ್ಜ್ ಮಾಡುವಾಗ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟ, ವ್ಯಕ್ತಿ ಸಜೀವ ದಹನ!

ಮಂಗಳವಾರ ಮುಂಜಾನೆ ಹಲಸೂರು ಪೊಲೀಸ್ ವ್ಯಾಪ್ತಿಯ ಮರ್ಫಿ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕ ಲೂರ್ದ್ ನಾಧನ್ (65) ಮೃತ ವ್ಯಕ್ತಿ. ಈ ಸಂಬಂಧ ಮೃತರ ಪುತ್ರ ಫ್ರಾಂಕ್ ಅಂತೋನಿ ಪೊಲೀಸರಿಗೆ ದೂರು ನೀಡಿದ್ದಾರೆ.
e-bike explodes
ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟ
Updated on

ಬೆಂಗಳೂರು: ಮನೆಯೊಳಗೆ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 65 ವರ್ಷದ ಆಟೋ ಚಾಲಕ ನಿದ್ರೆಯಲ್ಲಿಯೇ ಸಜೀವ ದಹನವಾಗಿರುವ ಘಟನೆ ನಡೆದಿದೆ.

ಮಂಗಳವಾರ ಮುಂಜಾನೆ ಹಲಸೂರು ಪೊಲೀಸ್ ವ್ಯಾಪ್ತಿಯ ಮರ್ಫಿ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕ ಲೂರ್ದ್ ನಾಧನ್ (65) ಮೃತ ವ್ಯಕ್ತಿ. ಈ ಸಂಬಂಧ ಮೃತರ ಪುತ್ರ ಫ್ರಾಂಕ್ ಅಂತೋನಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಾದನ್ ನೆಲ ಮಹಡಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಆದರೆ ಫ್ರಾಂಕ್ ಮತ್ತು ಅವರ ಪತ್ನಿ ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ, ನೆಲ ಮಹಡಿಯಲ್ಲಿ ದೊಡ್ಡ ಸ್ಫೋಟದ ಶಬ್ದದಿಂದ ಅವರು ಎಚ್ಚರಗೊಂಡಿದ್ದು, ನೆಲ ಮಹಡಿಯ ಬಾಗಿಲು ಒಡೆದು ನೋಡಿದಾಗ ನಾದನ್ ಸುಟ್ಟ ಗಾಯಗಳಿಂದ ನರಳುತ್ತಿದ್ದರು.ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಫ್ರಾಂಕ್ ಅಂತೋನಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಎಲೆಕ್ಟ್ರಿಕ್ ಬೈಕ್ ನನ್ನು ಜಾರ್ಜ್ ಗೆ ಹಾಕಿ ನಾದನ್ ಮಲಗಿದ್ದರು. ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೈಕ್ ಬ್ಯಾಟರಿ ಸ್ಫೋಟಗೊಂಡಿದೆ.

ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಹೆಚ್ಚು ಬಿಸಿಯಾಗಿರಬಹುದು: "ನಾದನ್ ವಾಹನದ ಹತ್ತಿರ ಮಲಗಿದ್ದ. ವಾಹನದ ಬ್ಯಾಟರಿ ಹೆಚ್ಚು ಬಿಸಿಯಾಗಿ ಸ್ಫೋಟಗೊಂಡಿರಬೇಕು. ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಕಂಡುಹಿಡಿಯುತ್ತಿದ್ದಾರೆ. ಶಾರ್ಟ್ ಸರ್ಕ್ಯೂಟ್ ಸಾಧ್ಯತೆಯನ್ನು ಸಹ ತಳ್ಳಿಹಾಕಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

e-bike explodes
ಬೆಂಗಳೂರು: ಬೈಕ್ ಸವಾರನಿಗೆ ಕಪಾಳಮೋಕ್ಷ ಮಾಡಿದ್ದ ಸಂಚಾರಿ ಪೊಲೀಸ್ ಅಮಾನತು..!

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಹಲಸೂರು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com