ಬೆಂಗಳೂರು: ಲ್ಯಾಂಡಿಂಗ್ ವೇಳೆ ಏಕಾಏಕಿ ನೆಲಕ್ಕಪ್ಪಳಿಸಿದ Air India ವಿಮಾನದ ಹಿಂಭಾಗ; ತಪ್ಪಿದ ದೊಡ್ಡ ಅನಾಹುತ

181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಏರ್ ಇಂಡಿಯಾದ AI2651 ವಿಮಾನವು ಇಂದು ಬೆಳಗ್ಗೆ ಲ್ಯಾಂಡಿಂಗ್ ಮಾಡುತ್ತಿದ್ದ ವೇಳೆ ವಿಮಾನದ ಬಾಲ ರನ್‌ವೇಗೆ ಅಪ್ಪಳಿಸಿದೆ.
AIR INDIA Casual Images
ಏರ್ ಇಂಡಿಯಾ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಏರ್ ಇಂಡಿಯಾ ವಿಮಾನದ ಹಿಂಭಾಗ ಲ್ಯಾಂಡಿಂಗ್ ವೇಳೆ ಏಕಾಏಕಿ ನೆಲಕ್ಕಪ್ಪಳಿಸಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಏರ್ ಇಂಡಿಯಾದ AI2651 ವಿಮಾನವು ಇಂದು ಬೆಳಗ್ಗೆ ಲ್ಯಾಂಡಿಂಗ್ ಮಾಡುತ್ತಿದ್ದ ವೇಳೆ ವಿಮಾನದ ಬಾಲ ರನ್‌ವೇಗೆ ಅಪ್ಪಳಿಸಿದೆ. ಬಳಿಕ ವಿಮಾನಯಾನ ಸಂಸ್ಥೆಯು, ವಿವರವಾದ ಪರಿಶೀಲನೆಗಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.

"ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಬಾಲ ನೆಲಕ್ಕೆ ಡಿಕ್ಕಿ ಹೊಡೆದಿದೆ". ಆದರೂ ವಿಮಾನ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

AIR INDIA Casual Images
ಈ ಆರು ಮಾರ್ಗಗಳಲ್ಲಿ ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನ ಸೇವೆ ಸ್ಥಗಿತ; ಕಾರಣ ಏನು ಗೊತ್ತಾ?

ಒಂದು ಮೂಲದ ಪ್ರಕಾರ, ವಿಮಾನವು ರನ್‌ವೇ ಸಮೀಪಿಸುತ್ತಿರುವಾಗ "ವೇಕ್ ಟರ್ಬ್ಯುಲೆನ್ಸ್" ಅನ್ನು ಎದುರಿಸಿತು. ನಂತರ ಪೈಲಟ್ ಅತ್ಯಂತ ಕುಶಲತೆಯಿಂದ ಲ್ಯಾಂಡಿಂಗ್ ಮಾಡಿದರು. ಈ ವೇಳೆ ಬಾಲ ನೆಲಕ್ಕೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com