'ನಂದಿನಿ ಹಾಲು ದರ 8 ಅಲ್ಲ ಗರಿಷ್ಠ 12 ರೂ ಏರಿಕೆ'; ರೊಚ್ಚಿಗೆದ್ದ ಗ್ರಾಹಕರು, Video Viral

ಸಾಮಾನ್ಯ ಟೋನ್ಡ್ ಹಾಲಿನ ಬೆಲೆ ₹54ಕ್ಕೆ ತಲುಪಿದ್ದು, ಹೆಚ್ಚಿಸಲಾದ ₹8 ರಲ್ಲಿ ₹7 ಮೊತ್ತವನ್ನು ನೇರವಾಗಿ ಹಾಲು ಉತ್ಪಾದಕರಿಗೆ ವರ್ಗಾಯಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
Nandini Milk, Curd Prices Revised in Karnataka From Today
ಹಾಲು ದರ ಏರಿಕೆ
Updated on: 

ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಹಾಲು ದರ ಏರಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸರ್ಕಾರ ಘೋಷಣೆ ಮಾಡಿದ್ದ ದರಕ್ಕೂ ಮಾರುಕಟ್ಟೆ ದರಕ್ಕೂ ವ್ಯತ್ಯಾಸವಿದೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.

ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರ ನವೆಂಬರ್ 1ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬಂದಿದ್ದು, ಹಾಲಿನ ದರ ಪ್ರತಿ ಲೀಟರ್‌ಗೆ ₹8 ಹಾಗೂ ಮೊಸರಿನ ದರ ₹14 ರೂ ಹೆಚ್ಚಳವಾಗಿದೆ.

ಸಾಮಾನ್ಯ ಟೋನ್ಡ್ ಹಾಲಿನ ಬೆಲೆ ₹54ಕ್ಕೆ ತಲುಪಿದ್ದು, ಹೆಚ್ಚಿಸಲಾದ ₹8 ರಲ್ಲಿ ₹7 ಮೊತ್ತವನ್ನು ನೇರವಾಗಿ ಹಾಲು ಉತ್ಪಾದಕರಿಗೆ ವರ್ಗಾಯಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರತಿ ಲೀಟರ್ ಮೊಸರಿನ ಪ್ಯಾಕ್ ಗೆ 14 ರೂ.ವರೆಗೆ ಹೆಚ್ಚಳವಾಗಿದೆ. ಕೆಎಂಎಫ್ ನ.1 ರಿಂದ ಅನ್ವಯವಾಗುವಂತೆ ನಂದಿನಿಯ ಎಲ್ಲಾ ಮಾದರಿ ಹಾಲು ಹಾಗೂ ಮೊಸರಿನ ಪರಿಷ್ಕೃತ ದರವನ್ನು ಹೆಚ್ಚಳ ಮಾಡಿದೆ.

Nandini Milk, Curd Prices Revised in Karnataka From Today
'ಇತಿಹಾಸದಲ್ಲೇ ಮೊದಲು.. ರೈತರಿಗೆ 7 ರೂಪಾಯಿ ಹಾಲಿನ ಖರೀದಿ ದರ ಹೆಚ್ಚಳ': ಹಾಲು ದರ ಏರಿಕೆಗೆ DK ಸುರೇಶ್ ಸಮರ್ಥನೆ!

8 ಅಲ್ಲ 12 ರೂ ಏರಿಕೆ ಎಂದ ಗ್ರಾಹಕರು

ಇನ್ನು ಇಂದು ಹೊಸ ದರಗಳು ಗ್ರಾಹಕರಿಗೆ ಶಾಕ್ ನೀಡಿದ್ದು, ಸರ್ಕಾರ ಹೇಳಿದ್ದು 8 ರೂ ಏರಿಕೆ ಎಂದು.. ಆದರೆ ಪ್ರತೀ ಲೀಟರ್ ಹಾಲಿನ ದರ 12ರೂಗೆ ಏರಿಕೆಯಾಗಿದೆ ಎಂದು ಕೆಲ ಗ್ರಾಹಕರು ಆರೋಪಿಸಿದ್ದಾರೆ.

ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ. ಪರಿಷ್ಕೃತ ದರಪಟ್ಟಿಯಂತೆ, ಶುಭಂ ಹಾಲು ಪ್ರತಿ ಲೀಟರ್‌ಗೆ ಇದ್ದ 52 ರೂ. ದರ 64 ರೂ.ಗೆ ಏರಿಕೆಯಾಗಿದೆ.

ಹೋಮೊಜಿನೈಸ್ಡ್ ಶುಭಂ ಹಾಲು ಪ್ರತಿ ಲೀಟರ್ ಗೆ ಇದ್ದ 53 ರೂ. ದರ 65 ರೂ.ಗೆ ಏರಿಕೆಯಾಗಿದೆ. ಈ ದರ ಏರಿಕೆ ನೋಡಿ ಗ್ರಾಹಕರು ಸುಸ್ತಾಗಿದ್ದಾರೆ.

ಮೊಸರು ಅರ್ಧ ಲೀಟರ್`ಗೆ 6 ರೂ. ಏರಿಕೆ

ಮೊಸರು ಅರ್ಧ ಲೀಟರ್ ಗೆ 28 ರೂ. ದರನಿಂದ 34 ರೂ. (6 ರೂ. ಹೆಚ್ಚುವರಿ) ಗೆ ಏರಿಕೆಯಾಗಿದೆ. ಇನ್ನು ಒಂದು ಲೀಟರ್ 54 ರೂ. ನಿಂದ 68 ರೂ. (12 ರೂ.)ಗೆ ಏರಿಕೆಯಾಗಿದೆ. ‘ನಂದಿನಿ’ ಟೋನ್ಡ್‌ ಹಾಲಿನ ದರ ಪ್ರತಿ ಲೀಟರ್ ಗೆ 8 ರೂ.ನಂತೆ ದರ ಏರಿಕೆಯಾಗಿದೆ. ಈ ಮೊತ್ತದಲ್ಲಿ7 ರೂ. ಹಾಲು ಉತ್ಪಾದಕರಿಗೆ ವರ್ಗಾಯಿಸುವುದಾಗಿ ಸರ್ಕಾರ ತಿಳಿಸಿದೆ.

ಕೆಎಂಎಫ್ ಹೇಳಿದ್ದೇನು?

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಪ್ರಕಾರ, ಹಾಲಿನಲ್ಲಿರುವ ಕೊಬ್ಬಿನ ಅಂಶದ (ಫ್ಯಾಟ್) ಆಧಾರದ ಮೇಲೆ ಪ್ರತಿ ಲೀಟರ್‌ಗೆ 8ರಿಂದ 12 ರೂ.ವರೆಗೆ ದರ ಹೆಚ್ಚಳ ಮಾಡಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಲು ಉತ್ಪಾದಕ ರೈತರು, ಹಾಲು ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಕೆಎಂಎಫ್ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಬೆಲೆ ಏರಿಕೆ ಕುರಿತು ಚರ್ಚಿಸಿದ್ದರು. ಈ ಸಭೆ ಮತ್ತು ಸಮಾಲೋಚನೆಗಳ ಬಳಿಕ ಹಾಲಿನ ದರ ಪರಿಷ್ಕರಣೆಗೆ ತೀರ್ಮಾನಿಸಲಾಗಿದೆ.

ಇತರೆ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲು ಈಗಲೂ ಅಗ್ಗ ಎಂದ ಸಿಎಂ

ನವೆಂಬರ್ 1ರಿಂದ ಪ್ರತಿ ಲೀಟರ್ ಹಾಲಿನ ದರವನ್ನು 8 ರೂ. ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಹೈನುಗಾರರ ಜೀವನೋಪಾಯ ರಕ್ಷಿಸಲು ಬೆಲೆ ಏರಿಕೆ ಅನಿವಾರ್ಯವಾಗಿತ್ತು ಎಂದು ಹೇಳಿದರು.

ದರ ಏರಿಕೆಯಿಂದ ಹೆಚ್ಚುವರಿಯಾಗಿ ಸಂಗ್ರಹವಾಗುವ 8 ರೂ.ಗಳಲ್ಲಿ 7 ರೂ. ನೇರವಾಗಿ ಹೈನುಗಾರರಿಗೆ ತಲುಪಲಿದ್ದು, ಉಳಿದ 1 ರೂ. ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚಕ್ಕೆ ಬಳಕೆಯಾಗಲಿದೆ ಎಂದು ತಿಳಿಸಿದ್ದಾರೆ.

ದರ ಪರಿಷ್ಕರಣೆಯಿಂದ ಹೈನುಗಾರರಿಗೆ ನೀಡಲಾಗುವ ಹಾಲಿನ ಖರೀದಿ ದರ ಪ್ರತಿ ಲೀಟರ್‌ಗೆ 35 ರೂ.ನಿಂದ 42 ರೂ.ಗೆ ಏರಿಕೆಯಾಗಲಿದೆ. ಸರ್ಕಾರ ನೀಡುತ್ತಿರುವ ಪ್ರಸ್ತುತ 5 ರೂ. ಪ್ರೋತ್ಸಾಹಧನವನ್ನು ಸೇರಿಸಿದರೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಒಟ್ಟು 47 ರೂ. ದೊರೆಯಲಿದೆ.

ಕರ್ನಾಟಕದಲ್ಲಿ ಹಾಲಿನ ದರ ಏರಿಕೆಯಾದರೂ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ಬೆಲೆ ಕಡಿಮೆಯೇ ಇದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X