10 ವರ್ಷದಲ್ಲಿ ಬೆಂಗಳೂರು ಅಭಿವೃದ್ಧಿಗೆ 50 ಸಾವಿರ ಕೋಟಿ ರೂ.ಖರ್ಚು; ಆದರೂ ರಸ್ತೆ, ಚರಂಡಿ, ಸಂಚಾರ ಸಮಸ್ಯೆಗಿಲ್ಲ ಮುಕ್ತಿ..!

‘ಲೆಕ್ಕ ಬೇಕು’ ಅಭಿಯಾನದ ಉದ್ದೇಶ ನಾಗರಿಕ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ಇದರಿಂದ ಜನರು ಕಾಮಗಾರಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮತ್ತು ಉತ್ತರಗಳನ್ನು ಕೇಳಿ ಪಡೆಯಲು ಸಾಧ್ಯವಾಗುತ್ತದೆ.
bengaluru
ಬೆಂಗಳೂರು ಮಳೆ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಳೆದ 10 ವರ್ಷಗಳಲ್ಲಿ ಬರೋಬ್ಬರಿ 50,000 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಆದರೂ ನಗರದ ರಸ್ತೆಗಳು, ಚರಂಡಿ ವ್ಯವಸ್ಥೆ ಮಾತ್ರ ಇನ್ನೂ ಸುಧಾರಿಸಿಲ್ಲ.

ಬೆಂಗಳೂರು ನವನಿರ್ಮಾಣ ಪಕ್ಷ (BNP) ಬಿಡುಗಡೆ ಮಾಡಿರುವ ಬಿಬಿಎಂಪಿ ಗುತ್ತಿಗೆಗಳ ಅಧಿಕೃತ ದತ್ತಾಂಶದಿಂದ ಈ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.

‘ಲೆಕ್ಕ ಬೇಕು’ ಅಭಿಯಾನದ ಉದ್ದೇಶ ನಾಗರಿಕ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ಇದರಿಂದ ಜನರು ಕಾಮಗಾರಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮತ್ತು ಉತ್ತರಗಳನ್ನು ಕೇಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ಬಿಎನ್‌ಪಿ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಹೇಳಿದ್ದಾರೆ.

ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡೇ ಬಿಎನ್‌ಪಿ ಈ ದಾಖಲೆಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಒದಗಿಸಲು ಸಾಧ್ಯವಾಗಿದ್ದರೆ, ಸರ್ಕಾರ ತನ್ನಲ್ಲಿರುವ ಹೆಚ್ಚಿನ ಸಂಪನ್ಮೂಲಗಳನ್ನು ಬಳಸಿಕೊಂಡು ಇದೇ ಮಾಹಿತಿಯನ್ನು ನಾಗರಿಕರಿಗೆ ಸುಲಭವಾಗಿ ಏಕೆ ಲಭ್ಯವಾಗುವಂತೆ ಮಾಡಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಹಣದ ವೆಚ್ಚ ಮತ್ತು ನಗರದ ನಾಗರಿಕ ಮೂಲಸೌಕರ್ಯದ ನಡುವಿನ ಅಂತರವನ್ನು ಎತ್ತಿ ತೋರಿಸುವುದರ ಜೊತೆಗೆ, ಸರ್ಕಾರದ ವೆಚ್ಚದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಬಿಎನ್‌ಪಿ ವರದಿಯೊಂದನ್ನು ಬಿಡುಗಡೆ ಮಾಡಿದೆ.

bengaluru
ಬೆಂಗಳೂರು: ಹೆಬ್ಬಾಳ ಕೆರೆಯ 2ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಸುರಂಗ ಮಾರ್ಗ ನಿರ್ಮಾಣ ಕೆಲಸ ಅಡ್ಡಿ!

ತನ್ನ ‘ಲೆಕ್ಕ ಬೇಕು’ ಅಭಿಯಾನದ ಭಾಗವಾಗಿ, ಕಳೆದ ಒಂದು ದಶಕದಲ್ಲಿ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳು ಮತ್ತು ಗುತ್ತಿಗೆ ವೆಚ್ಚಗಳ ವಿವರಗಳನ್ನು ವರದಿಯಲ್ಲಿ ನೀಡಲಾಗಿದೆ.

ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಇತರ ನಾಗರಿಕ ಮೂಲಸೌಕರ್ಯಗಳ ಪ್ರತಿ ಕಿಲೋಮೀಟರ್‌ಗೆ ರೂ.3 ಕೋಟಿಗೂ ಹೆಚ್ಚು ವೆಚ್ಚ ಮಾಡಿದ್ದರೂ, ಕಳಪೆ ಮೂಲಸೌಕರ್ಯದಿಂದ ಜನರು ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಬಿಎನ್‌ಪಿಯ ದತ್ತಾಂಶ ವಿಶ್ಲೇಷಣೆಯಿಂದ ತಿಳಿದುಬಂದಿದೆ ಎಂದು ನರಸಿಂಹನ್ ಹೇಳಿದ್ದಾರೆ.

ಗುಂಡಿಬಿದ್ದ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಕೆಳಸೇತುವೆಗಳು ಸಾವಿನ ಬಲೆಯಾಗಿ ಮಾರ್ಪಡುತ್ತವೆ. ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಪ್ರತಿದಿನ ಗಂಟೆಗಟ್ಟಲೆ ಸಮಯ ಕಳೆಯುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರವಾರು ಅಭಿವೃದ್ಧಿ ವೆಚ್ಚ

  • ಯಲಹಂಕ- 2,368 ಕೋಟಿ ರೂ.

  • ಬ್ಯಾಟರಾಯನಪುರ- 2,226 ಕೋಟಿ ರೂ.

  • ದಾಸರಹಳ್ಳಿ-1,528 ಕೋಟಿ ರೂ.

  • ಮಹಾಲಕ್ಷ್ಮಿ ಲೇಔಟ್-1,689 ಕೋಟಿ ರೂ.

  • ಗೋವಿಂದರಾಜನಗರ-1,694 ಕೋಟಿ ರೂ.

  • ಯಶವಂತಪುರ-3,804 ಕೋಟಿ ರೂ.

  • ರಾಜರಾಜೇಶ್ವರಿ ನಗರ-2,806 ಕೋಟಿ ರೂ.

  • ಬೆಂಗಳೂರು ದಕ್ಷಿಣ - 2,680 ಕೋಟಿ ರೂ.

  • ಬೊಮ್ಮನಹಳ್ಳಿ- 2,209 ಕೋಟಿ ರೂ.

  • ಬಿಟಿಎಂ ಲೇಔಟ್- 1,846 ಕೋಟಿ ರೂ.

  • ಮಹದೇವಪುರ- 2,892 ಕೋಟಿ ರೂ.

  • ಕೆ.ಆರ್. ಪುರಂ-3,338 ಕೋಟಿ ರೂ.

ಕಾಮಗಾರಿಗಳ ವಿಭಾಗವಾರು ವೆಚ್ಚ

  • ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು-26,807 ಕೋಟಿ ರೂ.

  • ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆ- 7,007 ಕೋಟಿ ರೂ.

  • ಉದ್ಯಾನವನಗಳು ಮತ್ತು ಆಟದ ಮೈದಾನಗಳು - 1,910 ಕೋಟಿ ರೂ.

  • ಕುಡಿಯುವ ನೀರು ಮತ್ತು ನೀರು ಪೂರೈಕೆ- 1,357 ಕೋಟಿ ರೂ.

  • ಕಟ್ಟಡಗಳು ಮತ್ತು ಸಮುದಾಯ ಸೌಲಭ್ಯಗಳು- 1,188 ಕೋಟಿ ರೂ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X