ವಿಜಯಪುರ: ಡಿಜೆ ವಿಚಾರಕ್ಕೆ ಜಗಳ, ಪತ್ನಿ ಎದುರೇ ಯಾಸೀನ್ ಠಕ್ಕೆಗೆ ಗುಂಡಿಕ್ಕಿ ಹತ್ಯೆ

ವಿಜಯಪುರದಲ್ಲಿ ಯಾಸೀನ್ ಠಕ್ಕೆ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಗ್ಯಾಂಗ್ ಬಾವಡಿ ಏರಿಯಾದ ನಿವಾಸಿಯಾಗಿರುವ ಯಾಸೀನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿಯನ್ನು ಚಿಕಿತ್ಸೆಗೆಂದು ಮುಂಡೆವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು.
yasin thakke
ಯಾಸೀನ್ ಠಕ್ಕೆ
Updated on: 

ವಿಜಯಪುರ: ವಿಜಯಪುರದಲ್ಲಿ ಯಾಸೀನ್ ಠಕ್ಕೆ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಗ್ಯಾಂಗ್ ಬಾವಡಿ ಏರಿಯಾದ ನಿವಾಸಿಯಾಗಿರುವ ಯಾಸೀನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿಯನ್ನು ಚಿಕಿತ್ಸೆಗೆಂದು ಮುಂಡೆವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು. ವೈದ್ಯರಿಗೆ ತೋರಿಸಿದ ಬಳಿಕ ಪತ್ನಿಯನ್ನು ಕರೆದೊಯ್ಯುತ್ತಿದ್ದಾಗ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ. ಎರಡು ಗುಂಡು ತಗುಲಿ ಯಾಸೀನ್ ಠಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೆಲ‌ವು ದಿನಗಳ ಹಿಂದೆ ಡಿಜೆ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಯಾಸೀನ್ ಕೂಡ ಭಾಗಿಯಾಗಿದ್ದ. ಅದೇ ಕಾರಣಕ್ಕೆ ಆತನ ಮೇಲೆ ಗುಂಡಿನ ದಾಳಿ ಮಾಡಿರಬಹುದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಗಾಂಧಿ ಚೌಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದರು.

yasin thakke
ಬೀದರ್: ಲವರ್​​ ಮಾತು ನಂಬಿ ಗಂಡನಿಗೆ ಡಿವೋರ್ಸ್​ ಕೊಟ್ಟು ಬಂದ ಮಹಿಳೆ; ಬಳಿಕ ಪ್ರಿಯಕರ ನಾಪತ್ತೆ, ಮನೆ ಮುಂದೆ ಧರಣಿ!

ಯಾಸೀನ್ ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿದ್ದು ಏರಿಯಾದಲ್ಲಿ ಹವಾ ಮೆಂಟೇನ್ ಮಾಡುತ್ತಿದ್ದನು. ಅಲ್ಲದೆ ಇನ್‌ಸ್ಟಾಗ್ರಾಂನಲ್ಲಿ ಭಯ ಹುಟ್ಟಿಸುವಂತಹ ವಿಡಿಯೋಗಳನ್ನ ಶೇರ್ ಮಾಡಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಕೊಲೆಗೆ ಕಾರಣ ಏನಿರಬಹುದು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X