ಪಶ್ಚಿಮ ಏಷ್ಯಾದ 17 ದೇಶಗಳಿಗೆ ಹಬ್ಬಿದ ಕಾಲುಬಾಯಿ ರೋಗ: ಭಾರತದಲ್ಲಿ ಮುನ್ನೆಚ್ಚರಿಕೆ ಕ್ರಮಗಳಿಗೆ ಸೂಚನೆ

ಆಫ್ರಿಕಾ ಖಂಡಕ್ಕೆ ಸೀಮಿತವಾಗಿದ್ದ ಕಾಲುಬಾಯಿ ರೋಗದ (FMD) SAT-1 ಸೀರೋಟೈಪ್ ಇತ್ತೀಚೆಗೆ ಪಶ್ಚಿಮ ಏಷ್ಯಾದ 17 ದೇಶಗಳಿಗೆ ಹರಡಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಈ ರೋಗದ ಸಂಭಾವ್ಯ ಏಕಾಏಕಿ ಹರಡುವಿಕೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಈ ಅಣಕು ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.
Coimbatore: A veterinarian administers a Komari (foot-and-mouth disease) vaccine to a cow during the district-wide vaccination drive
ಲಸಿಕಾ ಅಭಿಯಾನದ ವೇಳೆ ಪಶುವೈದ್ಯರೊಬ್ಬರು ಹಸುವಿಗೆ ಕೊಮಾರಿ (ಕಾಲುಬಾಯಿ ರೋಗ) ನಿರೋಧಕ ಲಸಿಕೆ ನೀಡುತ್ತಿರುವುದು.
Updated on: 

ಬೆಂಗಳೂರು: ಗಡಿಯಾಚೆ ಹರಡುವ ಹೊಸ ಪ್ರಾಣಿಜನ್ಯ ರೋಗಗಳ ವಿರುದ್ಧ ಸನ್ನದ್ಧತೆಯನ್ನು ಬಲಪಡಿಸುವ ಮಹತ್ವದ ಉಪಕ್ರಮವಾಗಿ, ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (DAHD), ಬೆಂಗಳೂರಿನ ICAR-ರಾಷ್ಟ್ರೀಯ ಪಶುವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ವಿಜ್ಞಾನ ಸಂಸ್ಥೆ (NIVEDI) ಸಹಯೋಗದಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಣಕು ಸಮಾಲೋಚನಾ ಅಭ್ಯಾಸ ‘ವಜ್ರ-ಸ್ಯಾಟ್’ (VAJRA-SAT)ಗೆ ಚಾಲನೆ ನೀಡಿತು.

ಆಫ್ರಿಕಾ ಖಂಡಕ್ಕೆ ಸೀಮಿತವಾಗಿದ್ದ ಕಾಲುಬಾಯಿ ರೋಗದ (FMD) SAT-1 ಸೀರೋಟೈಪ್ ಇತ್ತೀಚೆಗೆ ಪಶ್ಚಿಮ ಏಷ್ಯಾದ 17 ದೇಶಗಳಿಗೆ ಹರಡಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಈ ರೋಗದ ಸಂಭಾವ್ಯ ಏಕಾಏಕಿ ಹರಡುವಿಕೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಈ ಅಣಕು ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.

Coimbatore: A veterinarian administers a Komari (foot-and-mouth disease) vaccine to a cow during the district-wide vaccination drive
ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಹೆಚ್ಚಳ: ಕೊರೋನಾ ನಡುವೆ ರಾಜ್ಯದಲ್ಲಿ ಮತ್ತೊಂದು ತಲೆನೋವು!

ದೇಶದಲ್ಲಿ ಈವರೆಗೆ SAT-1 ಸೋಂಕು ವರದಿಯಾಗಿಲ್ಲ. ಆದರೆ, ಈ ರೋಗ ದೇಶದೊಳಗೆ ಪ್ರವೇಶಿಸುವ ಸಾಧ್ಯತೆಯು 530 ದಶಲಕ್ಷಕ್ಕೂ ಅಧಿಕ ಜಾನುವಾರುಗಳಿರುವ ಪಶುಸಂಪತ್ತಿಗೆ, ಹೈನುಗಾರಿಕೆ ಆಧಾರಿತ ಜೀವನೋಪಾಯಕ್ಕೆ, ಜಾನುವಾರು ವ್ಯಾಪಾರಕ್ಕೆ ಹಾಗೂ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದ (NADCP) ಅಡಿಯಲ್ಲಿ ಸಾಧಿಸಿರುವ ಪ್ರಗತಿಗೆ ಗಂಭೀರ ಅಪಾಯವನ್ನುಂಟುಮಾಡಬಹುದು ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ದೇಶದಲ್ಲಿ SAT-1 ವಿರುದ್ಧ ಲಸಿಕೆ ಉತ್ಪಾದನೆಯ ಸೌಲಭ್ಯ ಇಲ್ಲದಿರುವುದು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುವ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತದೆ ಎಂದು ಹೇಳಿವೆ.

ಆರಂಭದಲ್ಲೇ ಪತ್ತೆಹಚ್ಚಿ, ತ್ವರಿತವಾಗಿ ದೃಢಪಡಿಸಿ, ಒಗ್ಗಟ್ಟಿನಿಂದ ನಿಯಂತ್ರಿಸಿ ಎಂಬ ಧ್ಯೇಯವಾಕ್ಯದಡಿ ಆಯೋಜಿಸಲಾದ ಈ ಅಣಕು ಕಾರ್ಯಾಚರಣೆಯಲ್ಲಿ ನೀತಿ ನಿರೂಪಕರು, ಪಶುವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ರೋಗ ನಿಯಂತ್ರಣ ತಜ್ಞರು, ರೋಗನಿರ್ಣಯ ಪ್ರಯೋಗಾಲಯಗಳು, ಭದ್ರತಾ ಸಂಸ್ಥೆಗಳು ಹಾಗೂ ಲಸಿಕೆ ತಯಾರಕರು ಪಾಲ್ಗೊಂಡಿದ್ದರು.

ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು, ತ್ವರಿತವಾಗಿ ಪ್ರತಿಕ್ರಿಯಿಸುವುದು ಮತ್ತು ಸಮನ್ವಯದೊಂದಿಗೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಾಮರ್ಥ್ಯವನ್ನು ಬಲಪಡಿಸುವುದು ಇದರ ಉದ್ದೇಶವಾಗಿತ್ತು.

Coimbatore: A veterinarian administers a Komari (foot-and-mouth disease) vaccine to a cow during the district-wide vaccination drive
ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ ಬಳಕೆ: ಶಿಕ್ಷಕಿಯರು, ತಾಯಂದಿರಿಗೆ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ

ವಿದೇಶಿ ಕಾಲುಬಾಯಿ ರೋಗ (FMD)ಸೀರೋಟೈಪ್‌ಗಳು ದೇಶವನ್ನು ಪ್ರವೇಶಿಸುವ ಸಂಭಾವ್ಯ ಅಪಾಯವನ್ನು ಎದುರಿಸಲು ಸಮನ್ವಯದ, ಪ್ರಾಯೋಗಿಕ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದಾದ ರಾಷ್ಟ್ರೀಯ ಕಾರ್ಯತಂತ್ರದ ಅಗತ್ಯವನ್ನು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಪಶುಸಂಗೋಪನಾ ಆಯುಕ್ತೆ ಡಾ ನವೀನಾ ಬಿ ಎಂ ಹೇಳಿದರು. ದೇಶದ ಪಶುಸಂಗೋಪನಾ ವಲಯದ ರಕ್ಷಣೆಯಲ್ಲಿ ಪ್ರಾಣಿ ರೋಗಗಳ ಕುರಿತ ಪ್ರಸ್ತುತ ಬಿಕ್ಕಟ್ಟು ನಿರ್ವಹಣಾ ಯೋಜನೆಯ (Crisis Management Plan) ಮಹತ್ವವನ್ನೂ ಅವರು ವಿವರಿಸಿದರು.

ಕಾಲುಬಾಯಿ ರೋಗ SAT-1ಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಸಾಂಕ್ರಾಮಿಕ ರೋಗಶಾಸ್ತ್ರೀಯ ಪರಿಸ್ಥಿತಿ ಹಾಗೂ ಅಪಾಯ ಆಧಾರಿತ ಕಣ್ಗಾವಲು, ಸಾಂಕ್ರಾಮಿಕ ರೋಗಶಾಸ್ತ್ರೀಯ ಮಾಹಿತಿ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳ ಮಹತ್ವವನ್ನು ICAR–National Institute of Veterinary Epidemiology and Disease Informatics (ICAR-NIVEDI) – ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ರಾಷ್ಟ್ರೀಯ ಪಶುವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಬಲದೇವ್ ಆರ್. ಗುಲಾಟಿ ವಿವರಿಸಿದರು.

ವಿದೇಶಿ ಕಾಲುಬಾಯಿರೋಗ ಸೀರೋಟೈಪ್‌ನಿಂದ ಎದುರಾಗಬಹುದಾದ ಸವಾಲುಗಳನ್ನು ನಿಭಾಯಿಸುವಲ್ಲಿ ಪ್ರಯೋಗಾಲಯಗಳ ಸನ್ನದ್ಧತೆ, ತ್ವರಿತ ರೋಗನಿರ್ಣಯ ಮತ್ತು ಲಸಿಕೆ ಅಭಿವೃದ್ಧಿ ಸಾಮರ್ಥ್ಯಗಳ ಮಹತ್ವವನ್ನು ICAR-ರಾಷ್ಟ್ರೀಯ ಕಾಲುಬಾಯಿ ರೋಗ ಸಂಸ್ಥೆಯ ನಿರ್ದೇಶಕ ಡಾ. ಜೆ.ಕೆ. ಮೊಹಾಪಾತ್ರ ಒತ್ತಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X