ಬೆಂಗಳೂರು: ಹೋಟೆಲ್‌ನಲ್ಲಿ ಜೈಪುರದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪ; ಕೇರಳ ಮೂಲದ ವ್ಯಕ್ತಿ ಬಂಧನ

ಅಕ್ಟೋಬರ್ 24 ರಂದು ಹೊಸೂರು ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ, ಕೇರಳ ಮೂಲದ 30 ವರ್ಷದ ವ್ಯಕ್ತಿಯೊಬ್ಬ ರಾಜಸ್ಥಾನದ ಜೈಪುರದ 27 ವರ್ಷದ ಬ್ಯೂಟಿಷಿಯನ್ (ಸೌಂದರ್ಯ ತಜ್ಞೆ) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
representational image
ಸಾಂದರ್ಭಿಕ ಚಿತ್ರOnline Desk
Updated on: 

ಬೆಂಗಳೂರು: ಕೋರಮಂಗಲದ ಪಬ್ ಒಂದರಲ್ಲಿ ಸಿಗರೇಟು ಹಚ್ಚಲು ಲೈಟರ್ ಕೇಳುವ ಮೂಲಕ ಆರಂಭವಾದ ಪರಿಚಯವೊಂದು, ಅತ್ಯಾಚಾರದಲ್ಲಿ ಅಂತ್ಯಗೊಂಡಿದೆ ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 24 ರಂದು ಹೊಸೂರು ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ, ಕೇರಳ ಮೂಲದ 30 ವರ್ಷದ ವ್ಯಕ್ತಿಯೊಬ್ಬ ರಾಜಸ್ಥಾನದ ಜೈಪುರದ 27 ವರ್ಷದ ಬ್ಯೂಟಿಷಿಯನ್ (ಸೌಂದರ್ಯ ತಜ್ಞೆ) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಸಮೀರ್ ಎಂ.ವಿ. ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರನಾಗಿದ್ದು, ಮಡಿವಾಳದಲ್ಲಿರುವ ಪಿಜಿ (PG) ಒಂದರಲ್ಲಿ ವಾಸಿಸುತ್ತಿದ್ದಾನೆ. ಸಂತ್ರಸ್ತೆ ಕೂಡ ಮಡಿವಾಳದ ಸಮೀಪದಲ್ಲೇ ವಾಸಿಸುತ್ತಿದ್ದಾಳೆ. ಒಂದು ತಿಂಗಳ ಹಿಂದೆ ಕೋರಮಂಗಲದ ಪಬ್‌ಗೆ ಭೇಟಿ ನೀಡಿದ್ದಾಗ, ಸಿಗರೇಟು ಹಚ್ಚಲು ಲೈಟರ್ ಕೇಳುವ ಸಲುವಾಗಿ ಆಕೆ ಸಮೀರ್‌ನನ್ನು ಸಂಪರ್ಕಿಸಿದ್ದಳು.

ಈ ಅವಕಾಶವನ್ನು ಬಳಸಿಕೊಂಡು ಸಮೀರ್ ಆಕೆಯೊಂದಿಗೆ ಮಾತುಕತೆ ಆರಂಭಿಸಿದನು. ನಂತರ ಇಬ್ಬರ ನಡುವೆ ಪರಿಚಯ ಬೆಳೆದು, ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಸಂಪರ್ಕದಲ್ಲಿದ್ದರು. ತದನಂತರ, ಸಮೀರ್ ಆ ಮಹಿಳೆಯನ್ನು ಮಡಿವಾಳದಲ್ಲಿರುವ ಹೋಟೆಲ್ ಒಂದಕ್ಕೆ ಆಹ್ವಾನಿಸಿದನು.

representational image
'ದೇವಾಲಯಗಳಲ್ಲಿ ಅತ್ಯಾಚಾರ ನಡೆಯುತ್ತವೆ, ಅಲ್ಲಿ ಬ್ರಾಹ್ಮಣ ಮಹಿಳೆಯರು ಸುರಕ್ಷಿತವಲ್ಲ...': ನೇಹಾ ಬೋರಾ ವಿರುದ್ಧ ಪ್ರಿಯಾಂಕಾ ಕಿಡಿ!

ಆ ಮಹಿಳೆ ಆಹ್ವಾನವನ್ನು ಒಪ್ಪಿಕೊಂಡು ಹೋಟೆಲ್‌ಗೆ ತೆರಳಿದ್ದಳು. ಅಲ್ಲಿ ಇಬ್ಬರೂ ಕೊಠಡಿಯೊಂದರಲ್ಲಿ ಮದ್ಯಪಾನ ಮಾಡಿದರು. ಬಳಿಕ, ಆಕೆ ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದೆ ಸಮೀರ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು.

ಆ ಮಹಿಳೆ ಮುಂಜಾನೆಯ ವೇಳೆ ಹೋಟೆಲ್ ಕೊಠಡಿಯಿಂದ ತಪ್ಪಿಸಿಕೊಂಡು ಬಂದು, ನಾಲ್ಕು ದಿನಗಳ ನಂತರ ದೂರು ನೀಡಿದ್ದಾಳೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X